–ನಿರಂಜನ ನಾಯಕ
ಒಳಹುಟ್ಟು
ಆತ ಬಲು ಜತನದಿ,
ಗೋರಿಯ ಕಲ್ಲುಗಳ
ಬಿಡದೇ ಬದಿಗೆ ಸರಿಸಿ
ಸಂಗ್ರಹಿಸುತ್ತಿದ್ದ—
ಜನ ಕೊಳ್ಳ ಬಯಸುವ
ಆ ಹಸಿರು ಸೊಪ್ಪುಗಳನ್ನು!
ಲೋಕ ಒಪ್ಪುವ ತೆರದಿ
ಕೈಯಾರೆ ಜೋಡಿಸುತ!!
ಪಾಪ-ಪುಣ್ಯಗಳ ಬೆರೆತ
ಗೊಬ್ಬರದ ಫಲವ
ತಿಂದುಂಡು ಹರಡಿದ
ಆ ಹಚ್ಚಹಸಿರ ಎಲೆಗಳ,
ಕಾಣದ ಊರಲಿ ಮಾರಿ
ನಾಲ್ಕಾಣೆ ಗಳಿಸಲು;
ತನ್ನ ಹೊಟ್ಟೆಯ ಉರಿಗೆ
ಉದಕವೆರೆದು ತಣಿಸಲು!
“ತೋಟದ ಎಲೆಗಳಿಗಿಂತ
ಕೊಬ್ಬಿರುವ ಮಸಣದ
ಎಲೆಗಳು ಜನರ
ಬಿಡದೇ ಸೆಳೆವುದು
ಖಂಡಿತವೆಂದು”
ಲೋಕಾನುಭವದಿ ಬಲ್ಲ!
ಆ ಮಂದಿ, ಈ ಮಂದಿ…
ಕಣ್ಣಿಗೆ ಮಂಕು ಕವಿದಿರಲು,
ಯಾರೂ ತೆರೆಯರು ಒಳಗಣ್ಣು,
ತೂಗಲು ಈ
ಸೊಪ್ಪಿನ ಒಳಹುಟ್ಟ!






0 Comments