ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರಶಾಂತ್‌ ಎಮ್‌ ಸಿ ಕವಿತೆ- ಬಾನಾಡಿ ಬಂಧು

ಪ್ರಶಾಂತ್‌ ಎಮ್‌ ಸಿ

ಬಾನಾಡಿ ಬಂಧು ಓಡೋಡಿ ತಂದು
ಬಾಗಿಲು ಬಡಿದಿದೆ ವಿಷಕಾರಿ ಮಾರಿ

ಕೋಳಿ ಕೊಕ್ಕ ಆಡು ಓಕೆ
ನಮ್ಮೂರ ಮಾರಿಗೆ.
ಮನೆ ಮನೆ ಮನ್ಸಾನೆ ಬೇಕು
ನಿಮ್ಮ ಫಾರಿನ್ ಬ್ರಾಂಡಿಗೆ.
ಅಂತ್ಯವೆಂದೋ ಆ ಪರದೇಶಿಗೆ ?

ಬೀದಿ ಬೀದಿ ಬದಿ ತುಂಬಿ
ಮನೆ ಮನೆಯೇ ಆಗಿ ಕಂಬಿ
ಒಳಗಿನ ಕಸ ಹೊರಗರಡಿ
ಹಳ್ಳಹಿಡಿತು ನಿಮ್ಮ ಪೇಟೆ ಕರಡಿ
ಆ ಅರ್ಥದೂರಿಗೆ ಅರ್ಥವೆಂದೋ!?

ಹರಡಿದ ಹಾರಾಡೋ ಜನ
ಗಂಟೆ ಬಾರ್ಸಿ ದೀಪ ಬೆಳಗ್ಸುದ್ರೂ
ಬೆವರಿಳಿಸೋ ಬದುಕಲಿ
ಬೆಳಗಿಲ್ಲ ಹಸಿವಿನ ಹಣತೆ
ಹಬ್ಬೀತು ಹೇಗೆ ಒಲವಿನ ಲತೆ ?

ಅಂಬೆಗಾಲಿಗೆ ಅಂಬಲಿಯಿಲ್ಲ
ನಮ್ಗೆ ಅಂಬರದೂರಿನ ಗೇಣ್ಯಾಕೆ
ಬಲ್ಲಿದರ ಪಾಲಿಗೆ ಬೇಲಿಯಿಲ್ಲ
ಭೇದಭಾವ ನಮ್ಮ ಅಂಗಳಕ್ಯಾಕೆ ?
ಒಪ್ಪೊತ್ತಿಗೆ ಹಿಟ್ಟಿಕ್ಕಿ ಅಷ್ಟೇ ಸಾಕು !!

ಪಟ್ಟಣದ ಪೊಟ್ಟಣ ತಲುಪುತ್ತಿಲ್ಲ
ಏಕಾಂತ ಏಕಂತ ಕೇಳುವವರಿಲ್ಲ
ಕೂಲಿ ಕಂಬಳವಿಲ್ಲ ಕಣ್ಣಾಲಿ ನೀರಿಲ್ಲ
ಕನಿಕರಿಸಿ ಹಾಳುವವರೇ ಅಳುವವರ
ಅಳುವಿಂದೆದ್ದ ಮತ್ತೊಂದು ರೋಗಾಣು
ಆಳುವ ಜನರ ಹೂಳುವ ಮುನ್ನ
ಮೆರೆದು ಮಾನವೀಯತೆ

‍ಲೇಖಕರು Avadhi

12 August, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading