ಪೀಲೆ ನೆನಪು ಸದಾ…

ಶ್ರೀಪಾದ್‌ ಭಟ್

ಹಿಂದೊಮ್ಮೆ ಕ್ರೀಡಾ ಬರಹಗಾರರೊಬ್ಬರು ‘ಪೀಲೆ ಮನುಷ್ಯನಾಗಿ ಹುಟ್ಟದಿದ್ದರೆ ಪುಟ್ಬಾಲ್ ಆಗಿ ಜನಿಸುತ್ತಿದ್ದರು’ ಎಂದು ಹೇಳಿದ್ದರು. ಅದು ಹಾಗೇನೆ.

(ನಮ್ಮ ರಾಜ್ ನಟರಾಗದಿದ್ದರೆ? ಓಹ್ ಊಹಿಸಲೂ ಸಾದ್ಯವಿಲ್ಲ) ಬಡತನದಲ್ಲಿ ಹುಟ್ಟಿ ಬೆಳೆದ ಪೀಲೆ ಸಾಕ್ಸ್ ನಲ್ಲಿ ಪೇಪರ್ ತುರುಕಿ ಫುಟ್ಬಾಲ್ ಆಡುತ್ತಿದ್ದರು. ನಂತರ ದಂತಕತೆ, ಕಲ್ಟ್ ಆಗಿದ್ದು ಇತಿಹಾಸ, ವರ್ತಮಾನ, ಭವಿಷ್ಯ. ಹಲವರು ತಮಾಶೆ ಮಾಡುವಂತೆ ಜಾಗತಿಕವಾಗಿ ಕೋಕೋ ಕೋಲ ನಂತರ ಅತಿ ಹೆಚ್ಚು ಬಳಕೆಯಾದ ಪದ ಪೀಲೆ.

ಸಜ್ಜನಿಕೆ ವ್ಯಕ್ತಿತ್ವದ ಪೀಲೆ ತಮ್ಮ ಮಾತನ್ನು ಪೋರ್ಚುಗೀಸ್ ನ ‘entende’ (ಅರ್ಥವಾಯಿತೆ?) ಎಂದು ಕೊನೆಗೊಳಿಸುತ್ತಿದ್ದರು. ಪೀಲೆ ಮಾತು ಅರ್ಥವಾಯಿತೋ ಇಲ್ಲವೋ ಅವರ ಆಟ ಮತ್ತು ವ್ಯಕ್ತಿತ್ವ ಲ್ಯಾಟಿನ್ ಅಮೇರಿಕಾವನ್ನೇ ಪೊರೆದದ್ದು ಮತ್ತು ಇಂದಿಗೂ ಥ್ರಿಲ್ ಹುಟ್ಟಿಸುತ್ತಿರುವುದು ಮಾತ್ರ ಅರ್ಥವಾಗಿದೆ.

ಯಾವುದೇ ಸಂಕೀರ್ಣತೆಯಿಲ್ಲದ ಪೀಲೆ ಅರ್ಥವಾಗಿದ್ದರು. ಆದರೂ ಅವರ ವ್ಯಕ್ತಿತ್ವದಲ್ಲಿ ಒಂದು ಬಗೆಯ ಮಿಸ್ಟಿಕ್ ಸದಾ ಪೊರೆಯುತ್ತಿತ್ತು ಎಂದು ಹತ್ತಿರದ ಸ್ನೇಹಿತರು ಹೇಳುತ್ತಿದ್ದರು.

ಮರಡೋನಾರ ಪ್ರಖರ ಬಹಿರ್ಮುಖಿ ವ್ಯಕ್ತಿತ್ವದ ಎದುರು ಸಹಜವಾಗಿಯೇ ಪೀಲೆ ಅಂತರ್ಮುಖಿಯಾಗಿ ಕಾಣುತ್ತಿದ್ದರು. ಆರಂಭದಲ್ಲಿ ಯಾವುದೇ ಉದ್ದೇಶವಿಲ್ಲದೆ ಪೀಲೆ ಧರಿಸುತ್ತಿದ್ದ ಜರ್ಕಿನ್ 10 ನಂತರ ಮರಡೋನ ಮೂಲಕ ಜನಪ್ರಿಯಗೊಂಡಿದ್ದು ಐತಿಹಾಸಿಕ.

ಇಬ್ಬರೂ ರಕ್ತಮಾಂಸ ತುಂಬಿದ ನಮ್ಮಂತವರೇ ಎಂದು ನಂಬಲು ಬಹುಕಾಲ ಹಿಡಿಯುತ್ತಿತ್ತು.
(ನಮ್ಮ ರಾಜ್ ಸಹ ಹೀಗೆ ಅಲ್ಲವೇ?)

ಈಗ ಸ್ವರ್ಗದಲ್ಲಿರುವ ಪೀಲೆ ಮತ್ತು ಮರಡೋನ ಇಬ್ಬರಿಗೂ ಜರ್ಕಿನ್ 10 ಕೊಡುವುದು ಕಷ್ಟ. ಏನು ಮಾಡೋದು?
ಪೀಲೆ ನಿಮ್ಮ ನೆನಪು ಸದಾ….

‍ಲೇಖಕರು Admin

December 31, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: