ಪಿ ನಂದಕುಮಾರ ಓದಿದ ʼಬಯಲೆಂಬೊ ಬಯಲುʼ

ಹೋರಾಟದ ಬದುಕಿನ ಹೆಜ್ಜೆ ಗುರುತುಗಳು

ಪಿ ನಂದಕುಮಾರ

ಇತ್ತೀಚೆಗೆ ಬಂದ ಕೆಲವು ಪ್ರಮುಖ ಕಾದಂರಿಗಳಲ್ಲಿ ಹೆಚ್ ಟಿ ಪೋತೆಯವರ ‘ಬಯಲೆಂಬೊ ಬಯಲು’ ಬಯೋಪಿಕ್ ಕಾದಂಬರಿ ಕೂಡ ಒಂದು.  ಅವುಗಳಿಗಿಂತ ಈ ಕಾದಂಬರಿ ಇದು ಹೇಗೆ ಭಿನ್ನವಾಗುತ್ತದೆ ಎಂಬುದಕ್ಕೆ ಹಲವಾರು ಸಂಗತಿಗಳಿವೆ. ಮೂರು ತಲೆಮಾರುಗಳ ಪರಂಪರೆಯ ಚರಿತ್ರೆಯನ್ನು ಈ ಕೃತಿಯಲ್ಲಿ ಲೇಖಕರು ದಾಖಲಿಸಿದ್ದಾರೆ. ಈ ಬಯೋಪಿಕ್ ಕಾದಂಬರಿಯ ಆರಂಭದಲ್ಲಿ ಶ್ರಮ ಸಂಸ್ಕೃತಿ ಸಮುದಾಯದ ಪ್ರತಿನಿಧಿಗಳ ಮುಗ್ಧತೆ ಅವರ ಕಾಯಕ ನಿಷ್ಠೆಯನ್ನು ದಾಖಲಿಸಿದ್ದು ಗಮನಾರ್ಹ ಸಂಗತಿ.

ಅನಕ್ಷರತೆ, ಬಡತನ, ಜಾತಿ ಮೂರು ಅಂಶಗಳಿಂದಾಗಿ ಅಸ್ಪೃಶ್ಯರು ತೀವ್ರ ಶೋಷಣೆಗೆ ಒಳಗಾಗಿದ್ದಾರೆ. ಇಂಥ ಸಂದರ್ಭದಲ್ಲಿ ತಮ್ಮ ಶ್ರಮವನ್ನು ಬಿಟ್ಟಿ ದುಡುಮೆಗೆ ಒಗ್ಗಿಕೊಳ್ಳುವ ಅನಿವಾರ್ಯತೆ ಈ ಸಮಾಜ ಸೃಷ್ಟಿಸಿದೆ.ಅಸ್ಪೃಶ್ಯರಾಗಿರುವುದರಿಂದಲೇ ದಲಿತರು ಭೂಮಿಯ ಸಂಬಂಧದಲ್ಲಿ ಪರಕೀಯರು, ಜಮೀನಿನಲ್ಲಿ ಕೃಷಿ ಕೂಲಿಗಾರರಾಗಿ ದುಡಿಯುವ ಒಂದು ವರ್ಗವಾಗಿ ರೂಪಗೊಂಡಿದೆ.

ಬೊಂಬಾಯಿಂದ ಬಂದ ಬಸಣ್ಣ ಮಲಗಿದ್ದ ಶಂಕ್ರನ ಮಾತನಾಡಿಸುತ್ತಾ. ಎತ್ತುಗಳ ಕುರಿತಾಗಿ ಕೇಳುವ ಸಂದರ್ಭದಲ್ಲಿ ಶಂಕ್ರ  ತಾನು ಜಿತಕಿದ್ದ  ಸಂಗಪ್ಪ ಸಾಹುಕಾರರ ಮನೆಯಲ್ಲಿ ತನ್ನಿರುವಿಕೆಯನ್ನು ಪರಿಚಯಿಸುವ ಮಾತು ಹೀಗಿದೆ ‘ನಾನು ಅವರಲ್ಲಿ ಜಿತಕಿದ್ದೀನಿ’ ನಾನು, ನಮ್ಮ ತಂದೆ ಕಾಲದಿಂದಲೂ ಅಲ್ಲಿಯೇ ಇದ್ದೀನಿ’. ಎಂದೇಳುವ ಈ ಮಾತುಗಲ್ಲಿ ಶತಮಾನಗಳಿಂದ ಭೂಮಿಯ ಹಕ್ಕನ್ನು ಬಲಿತವರ ಪಾಲಾಗಿ. ಭೂಮಿಯ ಹಕ್ಕು ಉಳ್ಳವರ ಸ್ವತ್ತಾದ ಕಾರಣಕ್ಕೆ. ತಳಸಮುದಾಯಗಳ ಬಿಟ್ಟಿ ದುಡುಮೆಯ ಶೋಚನೀಯ ಸ್ಥಿಯನ್ನು ಅರಿಬಹುದು.

ಭಾರತದ ಗ್ರಾಮೀಣ ಪ್ರದೇಶದಲ್ಲಿ ಬಡ ದಲಿತರ ಆರ್ಥಿಕ ಸ್ವಾವಲಂಬನೆಯು ಜಮೀನ್ದಾರರ  ಅಧಿನದಲ್ಲಿದೆ. ಆ ಕಾರಣಕ್ಕಾಗಿ ತಮ್ಮ ಶ್ರಮಕ್ಕೆ ಸೂಕ್ತ ಪ್ರತಿಫಲಕಾಗಿ ಒತ್ತಾಯ ಮಾಡುವುದು ಅಸ್ಪೃಶ್ಯರಿಗೆ ಸಾಧ್ಯವಾಗಿಲ್ಲ. ಇಂದಿಗೂ ಕೂಡ ಶೇಕಡವಾರು ಕೃಷಿ ಕೂಲಿಗಾರರ ಸಂಖ್ಯೆಯಲ್ಲಿ ದಲಿತರು ಹೆಚ್ಚಾಗಿರುವುದನ್ನು ಗಮನಿಸಿಬಹುದು. ಗ್ರಾಮೀಣ ಸಮಾಜದವನ್ನು ವಿಶ್ಲೇಷಿಸುವುದರ ಮೂಲಕ ಜಾತಿಗಳ ಹೊಣೆಗಾರಿಕೆಯನ್ನು ಗುರುತಿಸಿದ್ದಾರೆ.

ನಮ್ಮ ಹಳ್ಳಿಗಳು ಕೃಷಿ -ಪ್ರಧಾನವಾದ್ದರಿಂದ ಕೃಷಿ ಸಂಬಂಧಿಸಿದ ಕೆಲಸ ಮಾಡುವಲ್ಲಿ ಹಳ್ಳಿಯ ಅನೇಕ ಜಾತಿಗಳು ಪಾಲ್ಗೊಳುತ್ತವೆ.  ಜೀತಗಾರಿಯಲ್ಲಿ ಮಾತ್ರ ತಮ್ಮನ್ನು ತೊಡಗಿಸಿಕೊಂಡ ದಲಿತರು ಭೂಮಿ ಇಲ್ಲದೆ ಉಳಿದರು. ಬಾಯಾರಿಕೆಯ ಸಲುವಾಗಿ  ಬಾವಿಯಲ್ಲಿ ನೀರು ಸೇದುವ ಸಮಯದಲ್ಲಿ ಆಕಸ್ಮಿತವಾಗಿ ಬಿದ್ದ ಕೊಡ ಮೇಲೆತ್ತುವ ಕಾರಣಕ್ಕೆ ಗೌಡರಿಂದ ಜಾತಿ ನಿಂದನೆಗೆ ಮತ್ತು ದೌರ್ಜನ್ಯಕ್ಕೆ ಒಳಗಾಗುವ ಸನ್ನಿವೇಶ, ಗ್ರಾಮೀಣ ಸಮಾಜದ ಜಾತಿ ಗ್ರಸ್ಥ ಹೀನಾಯ ಸ್ಥಿಯನ್ನು ಪ್ರತಿನಿಧಿಸುತ್ತದೆ. ಹಳ್ಳಿಗಳಲ್ಲಿ ಹೆಚ್ಚಾಗಿ ನಡೆಯುವ ದೌರ್ಜನ್ಯಗಳಿಗೆ ಮೂಲ ಕಾರಣವೇ ಜಾತಿಯಾಗಿದೆ.

ಪ್ರಕೃತಿಯಲ್ಲಿರುವ ನೈಸರ್ಗಿಕ ಸಂಪನ್ಮೂಲಗಳಿಗೂ ಕೂಡ ಜಾತಿ ಕಲೆ ಅಂಟಿದ ಕಾರಣಕ್ಕಾಗಿಯೇ  ಅಸ್ಪೃಶ್ಯರು ಅವುಗಳಿಂದ ವಂಚನೆಗೆ ಒಳಗಾಗಿದ್ದಾರೆ. ಬಹುಶಃ  ಹಾಗಾಗಿಯೇ ಅದನ್ನು ತೊಡೆದುಹಾಕಲು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ‘ಮಹಾಡ್ ನ ಚೌದಾರ್’ ಕೆರೆಯ ನೀರನ್ನು ಕುಡಿಯುದರ ಮೂಲಕ ನಾಗರಿಕ ಹಕ್ಕುಗಳ ಮತ್ತು ಅವುಗಳನ್ನು ಪ್ರತಿಪಾದಿಸುತ್ತಾರೆ. ಗೌಡನ ಮಗ ಮನೆಗೆ ಬಂದು ‘ಬೆಲ್ಲ ಮಾಡಿದ್ದ ದುಡ್ಡು ಕೊಡ್ರಿ, ಇಲ್ಲಂದ್ರ ಅದರ ಬದಲಿಗಿ ಈ ಆಕಳ ಮತ್ತು ಕರಾ ಎಳಕೊಂಡು ಹೋಗ್ತಿನಿ’. ಎಂದೇಳುವ ಮಾತುಗಳಲ್ಲಿ ಜಮೀನ್ದಾರಿಕೆಯ ದರ್ಪದದೊಟ್ಟಿಗೆ ಜಾತಿ ಪ್ರತಿಷ್ಠೆ ಅಹಂಕಾರ ವ್ಯಕ್ತಗೊಂಡಿರುವುದನ್ನು ನೋಡಬಹುದು. ಬಲಿಷ್ಟರಲ್ಲದ ದಲಿತರು ಅನಿವಾರ್ಯವಾಗಿ ಶೋಷಣೆಗೆ ಒಳಗಾಗುತ್ತಾರೆ. ತಮ್ಮ ದುಡುಮೆಯ ಫಲವನ್ನು ಕೂಡ ದಕ್ಕಿಸಿಕೊಳ್ಳದ ಸ್ಥಿತಿಯಲ್ಲಿ ಅಸ್ಪೃಶ್ಯ ಸಮುದಾಯ ಇದೆ.   

ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಅಮಾನವೀಯ ಸಂಗತಿಗಳನ್ನು ಕಾಲಾನುಕಾಲಕ್ಕೆ ಪೋಷಿಸುವ ಸಂಪ್ರಾದಾಯಿಕ ಮನಸ್ಥಿತಿಯ ಬಗೆಗೆ ಈ ಕೃತಿಯಲ್ಲಿ ಅನೇಕ ನಿದರ್ಶನಗಳಿವೆ. ಶೋಷಿತ ತಳಸಮುದಾಯಗಳು ಬಡತನ, ಹಸಿವು, ಅಸ್ಪೃಶ್ಯತೆಯಂತವುಗಳಿಂದ ಮುಕ್ತಿ ಹೊಂದಿ; ಸ್ವಾಭಿಮಾನದ ಬದುಕು ನಿರ್ಮಿಸಿಕೊಳ್ಳಲು ಶಿಕ್ಷಿತರಾಗುವುದೊಂದೇ ಮಾರ್ಗ ಎಂಬುದನ್ನು ಸೂಕ್ಷ್ಮವಾಗಿ ಪರಿಚಯಿಸಲಾಗಿದೆ.

ಕಾಲಾಂತರಗಳ ಅಂತರವಿದ್ದರೂ ಕೂಡ ಸಮಾಜದಲ್ಲಿ  ಜಾತಿ, ಅಸ್ಪೃಶ್ಯತೆಯು ರೂಪಾಂತರ ಪಡೆದುಕೊಂಡಿದ್ದರ ಬಗ್ಗೆ ಈ ಬಯೋಪಿಕ್ ಕಾದಂಬರಿ ನಿರೂಪಿಸುತ್ತದೆ. ದಲಿತರನ್ನು ಭಾರತೀಯ ಸಮಾಜವು ಯಾವ ಯಾವ ರೀತಿಯಲ್ಲಿ ಹೇಗೆ ಶೋಷಣೆ ಮಾಡಿತೆಂಬುದನ್ನು  ಹಾಗೂ ಅವರು  ಅದನ್ನು ಹೇಗೆ ಎದುರಿಸುತ್ತಾ  ಬಂದರೆಂಬುದರ ವಾಸ್ತವದ ಚಿತ್ರಣ ಇಲ್ಲಿ ಸರಳವಾಗಿ ಚಾಚಿಕೊಂಡಿದೆ. ಅನುಭವ, ಚಿಂತನೆ ಅಭಿವ್ಯಕ್ತಗಳನ್ನು ಸಮೀಕರಿಸಿರುವ ರೀತಿಯಿಂದಾಗಿ ಈ ಕೃತಿಯು ಮಹತ್ವದಾಗಿದೆ. ನೋವು – ನಲಿವುಗಳ ಅನುಭವಗಳನ್ನು ಓದುಗನಿಗೆ ತಲಿಪಿಸುವಲ್ಲಿ ಈ ‘ಬಯಲೆಂಬೋ ಬಯಲು’ ಬಯೋಪಿಕ್ ಕಾದಂಬರಿ ಯಶಸ್ವಿಯಾಗಿದೆ.

‍ಲೇಖಕರು Admin

December 28, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: