ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪದ್ಮಿನಿ ನಾಗರಾಜು ಹೊಸ ಕವಿತೆ – ದೇವಕನ್ಯೆ…

ಡಾ ಪದ್ಮಿನಿ ನಾಗರಾಜು

ಮೋಹಕ ಮುಗಳುನಗೆ
ದೇವಕನ್ಯೆಯಂತೆ
ಕ್ಷಣದಲ್ಲಿ ಅಳುಮುಖ
ಯಾವ ನೋವೋ
ಮತ್ತೆಕೋ ಸಿಂಡರಿಕೆ
ಅದೇನು ಕಂಡೋ
ಕಣ್ಣು ಬಿಡಲೋ
ಬೇಡವೋ ಎಂಬ
ಭಾವ ಕ್ಷಣಕ್ಷಣಕೂ
ಭಾವನಾಡಿಯಲಿ
ನಿನ್ನೊಡನೆ ನಾ
ತೇಲುತಿಹೆ

ಹೊರ ಒಳಗಿನ
ಮುಖವಾಡವಿಲ್ಲ
ಕಾಣದ್ದು ಬೇಕಿಲ್ಲ
ಈ ಕ್ಷಣಕ್ಕೆ ಬದುಕುವ
ಮಗುವಂತೆ ನಾವಾಗುವ
ನಿತ್ಯ ಸತ್ಯವ
ಕೈಗೂಸು ಕಲಿಸುತಿದೆ
ನಿನ್ನ ಮೌನದ
ಭಾಷೆ ನಾ ಅರಿಯೆ

ಒತ್ತಾಯ ಒಂದಕ್ಕೆ
ಹಸಿವ ನೀಗಿಸುವ
ಮೊಲೆ ಹಾಲಿಗೆ
ಸಂತೃಪ್ತಿ ಮೊಗದಲಿ
ಮತ್ತದೆ ಮಂಪರು
ನೊರೆಹಾಲ
ಹವಳದುಟಿಯಲ್ಲಿಟ್ಟು
ಕಣ್ಣ ಮುಚ್ಚುವುದು
ದೇವರಂತೆ!

‍ಲೇಖಕರು Admin

11 May, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading