ದಸ್ತಗೀರ್ ದಿನ್ನಿ
ಉದುರಿ ಬಿದ್ದ ಹೂವಿಗೆ ಬಾಧೆ ಕಾಡುತಿದೆ
ತಡರಾತ್ರಿಯಲಿ ಜೀರುಂಡೆ ಜ್ವರದಿ ಬಳಲುತಿದೆ.
ರಾಚುವ ಬಿಸಿಲಲೂ ಇರುವೆ ನಗೆ ಬೀರುತಿದೆ
ದನಗಾಹಿಯ ಪಿಳ್ಳಂಗೋವಿ ಹಾಡಿಗೆ ಹಕ್ಕಿ ತಲೆದೂಗುತಿದೆ.
ಮುಖದ ಸುಕ್ಕು ನೆನಪಿನ ಚಿತ್ರ ಬಿಡಿಸುತಿದೆ
ಮರವನಪ್ಪಿದ ಬಳ್ಳಿ ಜೀವ ಪ್ರೀತಿಯ ಅರುಹುತಿದೆ.
ಇಬ್ಬನಿಯ ಹಾದಿಯ ಬೆಳಗು ಬೆರಗಿನ ಹೂ ಮುಡಿಸುತಿದೆ
ಸಂಜೆಯ ಸೋನೆಮಳೆ ಕವಿತೆಯಾಗಿ ಹೆಜ್ಜೆ ಊರುತಿದೆ.
ಹರುಷದ ಮಾತು ಬಾಗಿಲಿಗೆ ತೋರಣ ಕಟ್ಟುತಿದೆ
‘ ದಿನ್ನಿ’ ಬಿರಿವ ಮಣ್ಣು ಭರವಸೆಯ ಬೆಳಕು ಸೂಸುತಿದೆ.
0 ಪ್ರತಿಕ್ರಿಯೆಗಳು