– ಶಿವಕುಮಾರ್ ಕಂಪ್ಲಿ
ಗಜಲ್
ನೆರಳಾದ ಮರವೇ ಉರಿವ ಚಿತೆಯಾಗಲು
ಯಾವ ಕೊಡವನು ತರಲಿ ಸುಡುಗಾಡಲಿ?
ಜೀವನದಿಯ ಒಡಲೇ ವಿಷದ ಕಡಲಾಗಲು
ಯಾವ ದೋಣಿಯ ತರಲಿ ಸುಡುಗಾಡಲಿ?
ಬಿದ್ದ ಮಳೆಯೇ ಉಕ್ಕೋ ಪ್ರವಾಹವಾಗಲು
ಯಾವ ಸೆರಗನು ತರಲಿ ಸುಡುಗಾಡಲಿ?
ಮುಗಿಲ ರೆಕ್ಕೆಯೇ ಮುರಿದು ಪಾತಾಳಕಾಣಲು
ಯಾವ ಮದ್ದನು ತರಲಿ ಸುಡುಗಾಡಲಿ?
ಕಣ್ಣ ಕನ್ನಡಿಯೇ ಒಡೆದು ಇರುಳು ಕವಿಯಲು
ಯಾವ ದೀಪವ ತರಲಿ ಸುಡುಗಾಡಲಿ?






0 Comments