-ಸಂತೆಬೆನ್ನೂರು ಫೈಜ್ನಟ್ರಾಜ್
ಗಝಲ್
ಹೆಜ್ಜೆ ಇಡುವಲ್ಲಿ ಚೆಲ್ಲಿದ ಗುಲ್ ಮೊಹರು ಹೂಗಳು ಹಾದಿಯ ಹೆಣವಾಗಿವೆ
ಹೂ ಅಂದವರಾರು ಅವು ? ಅವಳಿತ್ತ ಗಾಯಗಳು ಹಾದಿಯ ಹೆಣವಾಗಿವೆ
ಗುಲ್ಝಾರನ ಗಝಲಿನಿಂದ ಮೂಡಿ ಬಂದ ಒಲವಿನ ಮತ್ಲಾ ಆಗಿದ್ದಳು ನಿಜಕೂ
ಎದೆ ಸುಟ್ಟು ಬೂದಿ ಮಾಡುವ ಕೈಯಲ್ಲಿನ ಜಾಮುಗಳು ಹಾದಿಯ ಹೆಣವಾಗಿವೆ
ನೂರು ಕವಿತೆಗಳಿಗೂ ಮತ್ತೇರಿಸುವ ಮೈಖಾ಼ನೆಯಂತೆ ಒಲಿದ ಕಣ್ಣುಗಳು ನೋಡು
ಹೇಗೆ ಹೇಳಲಿ ಜೊತೆಯಾಗಿ ಕಂಡುಂಡ ಕನಸುಗಳು ಹಾದಿಯ ಹೆಣವಾಗಿವೆ
ಸಖಿಯ ಕೊರಳಲಿ ಅದೆಷ್ಟು ಶಾಯರಿಗಳು ಮೈ ಮರೆಸುವ ಮದಿರೆಯಾಗಿದ್ದವು
ಒಡೆದ ಹೃದಯದಲಿ ಈಗ ಗಝಲ್ ಆಗದ ಶೇರ್ ಗಳು ಹಾದಿಯ ಹೆಣವಾಗಿವೆ
ಅಂಗೈಯಲ್ಲಿನ ಅಕ್ಷತೆ ಕಾಳು ಅನ್ನವಾಯಿತು ಒಲವೇ ಒಲವಾಗಲು ಕಾದು ಕಾದು
ಫೈಜ್ ನ ಹೃದಯಮಸಣದಲಿ ಸೆರೆಯಾಗಿದ್ದ ನೆನಪುಗಳು ಹಾದಿಯ ಹೆಣವಾಗಿವೆ






0 Comments