ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೂತನ ದೋಶೆಟ್ಟಿ ಹೊಸ ಕವಿತೆ- ಮುಖದ ಮೇಲೆ ಮಸಿ

ನೂತನ ದೋಶೆಟ್ಟಿ

ಮಸಿ ಬಳಿದವರ ಮನದ
ಕತ್ತಲು ಬೆತ್ತಲಾಯಿತು
ಮರೆಯ ಮಲಿನತೆಯ
ಮುಸುಕು ಸರಿಯಿತು

ಬಣ್ಣಕ್ಕೊಂದು ಅರ್ಥ
ಕೊಟ್ಟವರು ಯಾರು?
ಕಪ್ಪು-ಬಿಳುಪುಗಳ
ಒಳಿತು-ಕೆಡಕುಗಳಿಗೆ
ಆರೋಪಿಸಿದವರೆ ತಾನೆ?

ಆ ಸಂತತಿಯಲ್ಲಿ ಸಂತನನ್ನು
ಕಾಣ ಬಯಸುವವರೇ
ಬದಲಾಯಿಸಿ ಬಿಡಿ
ಬಣ್ಣದ ಅರ್ಥಗಳ

ಅದಲು ಬದಲಾಗಲಿ
ಛಾಯೆಗಳು
ಕರಿಯು ದೀವಳಿಗೆಯ ಬೆಳಕಾಗಲಿ
ಬಿಳುಪು ಬಿಳಚಿದ ಮರ್ಮವಾಗಲಿ

ಸೈರಣೆಯ ಕಾಲವಿದಲ್ಲ
ಸೆಡ್ಡು ಹೊಡೆಯಬೇಕು
ಸೆಣೆಸಿ ಗೆಲ್ಲಬೇಕು
ಬಣ್ಣಗಳೇ ದಾಳವಾಗಲಿ ಬಿಡಿ.

‍ಲೇಖಕರು Avadhi

23 February, 2021

3 Comments

  1. ನಾಗರಾಜ್ ಹರಪನಹಳ್ಳಿ

    ಧ್ವನಿಪೂರ್ಣ ಕವಿತೆ.
    ಬಣ್ಣಗಳಿಗೆ ಸಂತನ ದೃಷ್ಟಿ ಕಲ್ಪಿಸುವುದು ಕವಿತೆ ಮಾತ್ರ ಸಾಧ್ಯ..

    • ನೂತನ ದೋಶೆಟ್ಟಿ

      ಧನ್ಯವಾದಗಳು ನಾಗರಾಜ್ ಅವರೆ

  2. Anju

    ಅರ್ಥ ಪೂರ್ಣ ಕವನ,ಮನ ಮೆಚ್ಚಿದ ಶಬ್ದಾವಳಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading