ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿಸ್ತಂತು ತಂತುಗಳ ನಾಜೂಕು ನಡಿಗೆ

ಯಾಕೊಳ್ಳಿ ಯ ಮಾ

ಯಾರೋ ಏನೋ ಗೊತ್ತಿರದ ಪರದೆಯಲಿ‌ ಕಂಡ ಮುಖವನ್ನೇ ನಂಬಿ ಮೂಡಿದ ಸಂಬಂಧಕ್ಕೆ ನಿಜವನರಸುವಾವ ಅವಶ್ಯಕತೆಯಾದರೂ ಏನಿದೆ?

ಪರದೆಯಲಿ ಕಂಡ ಮುಖ ಬೇಡವೆನಿಸಿದರೆ
ಎಷ್ಟು ಸರಳ ದೂರವಿರಿಸುವದು?
ಏನು ಕಟ್ಟೆ ಕಡಿದಿದ್ದೇವೆ
ಸ್ನೆಹಗಳಿಸಲಿ
ಕೈ ಬೆರಳ ಒಂದು ಒಪ್ಪಿಗೆಯ ಸನ್ನೆ ತಾನೆ.!
ಹಾಗೆ ಸುಮ್ಮನೆ ಬರೆಯುತ್ತ ಹೋದಂತೆ ಬಂದ ಸಾಲುಗಳಿಗೆ ಅರ್ಥವಿದೆಯೇ
ಹುಡುಕುವವರಾರು?
ಬಂದ ಲೈಕ್ ಗಳು‌
ಕಾಮೆಂಟುಗಳೂ
ಕೆಡವಿ ಬಿಡುತ್ತದೆ ಗೊಂದಲದಲ್ಲಿ

ಅವರ ಒಪ್ಪಿಗೆಗಾದರೂ ಒಪ್ಪ ಬೇಕೆಂಬ ಬಲವಂತೆಲ್ಲಿರುತ್ತದೆ ಬಿಡಿ!
ಸುಮ್ಮನಿರದ ಬೆರಳ‌ ನವೆಗೆ
ಬಸಿರಾದ ಅಕ್ಷರಗಳ
ಅವಸರದಹೆರಿಗೆಗೆ ಸಿಕ್ಕಿರುತ್ತದೆ
ಯಾವ ವಿಮರ್ಶೆಯ ಹಕ್ಜೊತ್ತಾಯ!

ಪರದೆಯಲಿ ಕಂಡ ಮುಖ ಬೇಡವೆನಿಸಿದರೆ
ಎಷ್ಟು ಸರಳ ದೂರವಿರಿಸುವದು?
ಏನು ಕಟದಟೆ ಕಡಿದಿದ್ದೇವೆ
ಸ್ನೆಹ ಗಳಿಸಲಿ
ಕೈ ಬೆರಳ ಒಂದು ಒಪ್ಪಿಗೆಯ ಸನ್ನೆ ತಾನೆ.!

ಎಷ್ಟೊಂದು ಸರಳವೀಗ ನೇಹಿಗರಾಗೋದು ಒಂದು ತುದಿಬೆರಳ ಒಪ್ಪಿಗೆಯಷ್ಟೇ..!
ಖಂಡಾಂತರಗಳಾಚೆಯ ಕಾಣದ ಮುಖಗಳೂ ನಮ್ಮ ‌ಪರಿಧಿಯೊಳಗೇ ಬಂದು ಬೀಳುವ ಬಂಧುಗಳು!

ನಿಜವೋ ಸುಳ್ಳೋ? ಗಂಡೋ ಹೆಣ್ಣೋ! ತಿಳಿಯದಯೋಮಯದ ವ್ಯವಹಾರ!

ನಾವೂ ಅಷ್ಟೇ! ನಾಜೂಕು ಮಂದಿ ನಮ್ಮಪ್ರೋಫೈಲಿನ ಸಕಲವನು ಬಂಧನದಲ್ಲಿರಿಸಿ ಮುಂದಿನ
ಆಗು ಹೋಗುಗಳ ಬಗೆಗೆ ತುಂಬ ಎಚ್ಚರಿಕೆಯೊಳಿಟ್ಟಿರುವ ಜನ

ಕಾದ ಕಾವಲಿಯ ಮೇಲೆ ಯಾರ ರೊಟ್ಟಿ ಬೇಯಿಸಿಕೊಂಡರೇನಿಗ?
ಯಾರಿಗುಂಟು ಸತ್ಯವನು ಕಾಣುವ ತುರ್ತು
ಅವರವರ ಅಗತ್ಯಕ್ಕಾಗುವ
ಶೀಘ್ರ ಸ್ಖಲನಕ್ಜೆ ಶಾಂತವಾಗುವ
ನಿಸ್ತಂತು. ಸಂಭಂಧಗಳ
ನಿಜ ನಿಲುವು!

‍ಲೇಖಕರು Avadhi

9 March, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading