ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿಮ್ಮೊಳಗಿನ ಹಾಡು

‘ನನ್ನೊಳಗಿನ ಹಾಡು ಕ್ಯೂಬಾ’ ಓದಿ 

nam-parvati

ಪಾರ್ವತಿ ಎನ್ 

ನಿಮ್ಮೊಳಗಿನ ಹಾಡು

ನನ್ನ ಕಾಡ ಹತ್ತಿದೆ
ಬಾ

ಎಂದು ಕರೆಯಹತ್ತಿದೆ ಕ್ಯೂಬಾ

ಬಾರಿ ಬಾರಿ ಕೈ ಚಾಚಿ ಕರೆದು

ಹಾಡುತ್ತಲೇ ಮನವ ತೆರೆದು

ಕಾಡುತ್ತಲೇ ಕನಸ ಎರೆದು

cuba2

ಹಲ್ಲು ಕಚ್ಚಿ ಸಹಿಸಿ ಗೆದ್ದದ್ದಕ್ಕೆ

ಹೆಮ್ಮೆಯ ಹಾರ ಕೊರಳ ಅಪ್ಪಬೇಕು

ಬೆಂಕಿಯಲ್ಲಿ ದಹಿಸಿ ಬದುಕಿದ್ದಕ್ಕೆ

ಛಲದ ಹೂಗಳು ಎದೆಯಲ್ಲಿ ಅರಳಿ ತೀರಬೇಕು

ಎಲ್ಲ ದುರಂತಕ್ಕೂ ಕೊನೆಹಾಡಬೇಕು

ಸಾಕಿನ್ನು ಎಂದು ಹೇಳಲೇಬೇಕು

ಎನ್ನುತ್ತಾ ದುಂಬಾಲು ಬಿದ್ದಿದೆ

ಹಾಡುತ್ತಲೇ ಕಾಡುತ್ತಿದೆ

ಸಾಕೆಂದು ಹೇಳೇ ಹುಡುಗಿ

ಎಂದು ಬೆನ್ನು ಬಿದ್ದಿದೆ ಕನಸಾಗಿ

 

 

ಹೆಣ್ಣು ಎಂದರೆ ಕ್ಯೂಬಾ

ಕ್ಯೂಬಾ ಎಂದರೆ ಹೆಣ್ಣು

ಅಗ್ನಿದಿವ್ಯದಲ್ಲಿ  ಬೆಂದುಹೋಗದೆ

ಸೆಟೆದು ನಿಂತು

ಹೊಸ ಹುಟ್ಟು ಪಡೆದು

ನಡೆದಿದೆ

ದಿಟ್ಟವಾಗಿ

ಎಲ್ಲದರೊಟ್ಟಿಗೆ ಮಾಗಿ

ಬೆನ್ನ ಹುರಿಯಾಗಿ

 

ಇದೇ ಹಾಡು

ಇದೇ ಹಾಡು

ಒಮ್ಮೆ ಹಾಡಿಬಿಡು

ಹಗುರಾಗಿಬಿಡು

ಎಂದು

ಕಾಡುತ್ತಲೇ ಇದೆ

ನನ್ನೆದೆಯ ಹಾಡು

‍ಲೇಖಕರು Admin

10 December, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading