ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ನಿಂತ ನೀರಿಗೆ ಸುಖವಿಲ್ಲ..’ – ರಾಘವೇಂದ್ರ ಜೋಶಿ ಕವನ


ರಾಘವೇಂದ್ರ ಜೋಶಿ

ಕನಸು ಕನವರಿಕೆ


ಅತ್ತ,
ಮಾತಿಗೆ
ಮಾತು
ಮಥಿಸಿ
ಮಳೆ ತರಿಸಿದೆವು
ಅಂತ
ಎರಡು ಮೋಡಗಳು
ಮಾತನಾಡಿಕೊಳ್ಳುತ್ತಿದ್ದರೆ-
 
ಇತ್ತ,
ಅಂಗಳದಲ್ಲಿ
ಹರಿಯುತ್ತಿದ್ದ ನೀರಿನಲ್ಲಿ
ಕಾಗದದ ದೋಣಿ
ತಯಾರಿಸುತ್ತಿರುವ
ಪೋರನ
ಅವಸರದ ಬಗ್ಗೆ
ಮಳೆರಾಯನಿಗೆ
ಕೆಟ್ಟ ಕುತೂಹಲವಿದೆ.

ಓಡುವ,
ಧಾವಿಸುವ,
ಹರಿದುಹೋಗುವ,
ಬತ್ತುವ ಮೊದಲೇ
ನದಿ ಸೇರಬಯಸುವ
ಮಳೆನೀರಿಗೆ
ಯಾವತ್ತೂ
ನೀರಡಿಕೆಯಾಗುವದಿಲ್ಲ
ಅಂತ ಅಂದುಕೊಂಡರೆ
ಅಲ್ಲಿಂದಲೇ ವಿಪ್ಲವ ಶುರು.
 
ನೀರಿನಲ್ಲಿ
ಅಲೆಯ ಉಂಗುರ
ಹುಡುಕಲು ಹೊರಟವನಿಗೆ
ಶಕುಂತಳೆಯ
ಉಂಗುರ ದಕ್ಕಿದರೆ
ನುಂಗಲಾಗದ
ಮೀನಿನ ತಪ್ಪೇ?
ಗುರಿಯಿಡಬಹುದೇ ಕಣ್ಣಿಗೆ?
ಗುರಿಯಿಡಬಹುದೇ ಹೆಣ್ಣಿಗೆ?

ಅತ್ತ ಇತ್ತಗಳ
ಮಧ್ಯೆಯೇ
ಈ ಕವಿತೆಗೊಂದು
ಉಪಸಂಹಾರ ಮಾಡಿಬಿಡಿ.
ಸದ್ಯಕ್ಕೆ
ಕಪ್ಪೆಯಾಗಿರುವ
ಶಪಿತ ಸುಂದರಿಗೊಂದು
ಧ್ವನಿವರ್ಧಕ ಕೊಟ್ಟುಬಿಡಿ:
ಇಲ್ಲೀಗ
ಎಷ್ಟು ಶಾಪಗಳೋ
ಅಷ್ಟೇ ವಿಮುಕ್ತಿಗಳು..
 

‍ಲೇಖಕರು G

1 November, 2013

7 Comments

  1. pravara

    tumba padya odida khushi…

  2. jyothi

    Beautiful
    Guri idabahude kaNNige
    Guri idabahudE heNNige…
    Ellavu chandada saalygaLu…

  3. mmshaik

    tumba kaaduva saalugaLu..sir..deepavaLiya shubhashayagaLu..avadhigu..

  4. Anil Talikoti

    ಚೆನ್ನಾಗಿದೆ ಜೋಶಿಯವರೆ. #ಶಾಪ=#ವಿಮುಕ್ತಿ ಆದರೆ ನಿಂತ ನೀರು ಕೊರಗಬೇಕಾಗಿಲ್ಲ ಅಲ್ಲವೆ?
    -ಅನಿಲ ತಾಳಿಕೋಟಿ

  5. Arun

    ನದಿ ಸೇರಬಯಸುವ ಮಳೆನೀರಿಗೆ ನೀರಡಿಕೆಯಾಗುವುದೇ? ಯಾವತ್ತೂ ಕೇಳಿಲ್ಲ. ಆದರೆ, ನನಗಂತೂ ನೀರಡಿಕೆ ನೀಗಿಲ್ಲ. ಬರೆಯುತ್ತಾ ಇರಿ. ಶುಭವಾಗಲಿ.

  6. Vidyashankar Harapanahalli

    Usual free flowing and thought provoking poetry from RJ 🙂

  7. bharathi b v

    chennagide joshi ….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading