ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನ್ಯಾಕೆ ಕೊಂದೆ?

-ಗೋಪಾಲ ತ್ರಾಸಿ

ಅಮೃತಕಾಲದಲ್ಲಿ….!!

ಸತ್ಯದ ಕತ್ತು ಹಿಚುಕುವುದು –
ಸುಳ್ಳಿನ ಧರ್ಮ
ಸತ್ತವರಂತೆ ಬದುಕುವುದಕ್ಕಿಂತ ಸಾವೇ ಲೇಸು-
ಸಿದ್ಧಾಂತ ಕರ್ಮ

ಪ್ರಾಣ ತ್ಯಾಗ ! ಯಾರಿಗಾಗಿ, ಯಾಕಾಗಿ?
ಸರ್ಕಾರ ಹೊಣೆ ?! ಛೇಛೇ !!
ಸತ್ತ ಮಕ್ಕಳ ಹೆತ್ತವರಲ್ಲಿ ಕೇಳಿ –
‘ ನಮ್ಮ ಮಗುವಿನದ್ದೆ ತಪ್ಪು, ತಿಳುವಳಿಕೆಯಿಲ್ಲದ ವಯಸ್ಸು-
ವಿಧಿ ಬರಹವೇ ಅಷ್ಟು’

ಯಾರು ಯಾರನ್ನು ಕೊಂದರೂ ,ಕೊಲ್ಲಲು ಹೊಂಚು ಹಾಕಿದರೂ-
ಸತ್ತವರು, ಸಾಯುವವರು ಹೇಗೂ ಮುಂದೊಮ್ಮೆ
ಸಾಯುವುದು ಸತ್ಯ
ಇದ್ದವರು ಲೊಚಗುಡುವುದು, ಭಾಷಣದಲ್ಲಿ ಉದ್ಧರಿಸುವುದು
ಫೋಟೊಗೆ ಹಾಕಿದ ಹೂಹಾರದಂತೆ ಅಲ್ಪಾಯಿಷಿ !

ಪಕ್ಷಭೇದವಿಲ್ಲದೆ ಆಡಳಿತಕ್ಕೆ –
ಪ್ರಶ್ನಿಸುವವರು ಬದುಕಿರಬಾರದು ಸತ್ತಂತೆಯೂ ಸಹ !

‘ನಾನ್ಯಾಕೆ ಕೊಂದೆ?’ ಆ ಕಾಲ ಮುಗಿಯಿತು
ಈಗೇನಿದ್ದರೂ ಅಮೃತಕಾಲದಲ್ಲಿ –
‘ನಾನೇಕೆ ಕೊಲ್ಲುವೆ‘ !

‍ಲೇಖಕರು Admin

17 July, 2026

1 Comment

  1. Dastgeersab Nadaf

    “ನಮ್ಮ ಹುಡುಗನದೇ ತಪ್ಪು, ಅವನ ಹಣೆಬರಹವೇ ಅಸ್ತಿತ್ತು ಎಲ್ಲವೂ ವಿಧಿಯ ಆಟ. ”
    ಗೋಪಾಲತ್ರ ಶ್ರೀ ಅವರ ಕವಿತೆ ಈ ಸಾಲುಗಳು *ಕರ್ಮ ರಿಟರ್ನ್ಸ್”
    ಸಿದ್ಧಾಂತ ಪ್ರತಿಪಾದಿಸುವ ಇಂದಿನ ಪ್ರಭುತ್ವಕ್ಕೆ ಚಾಟಿ ಏಟು ಬೀಸುವಂತೆ ಇವೆ.
    ಕಾಲಮಾನಕ್ಕೆ ಸೆಡ್ಡು ಹೊಡೆಯುವ ಕವಿತೆ ಬರೆಯುವ ಕವಿ ನಿಜವಾಗಲೂ ಬಂಡಾಯಗಾರ ಗೋಪಾಲತ್ರ ಶ್ರೀ ಅವರಿಗೆ ಅಭಿನಂದನೆಗಳು.
    ಡಿ ಎಂ ನದಾಫ್ ಆಫ್ಜಲ್ಪುರ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading