-ದತ್ತು ಕುಲಕರ್ಣಿ
ಹೊಳೆಯುವ ಚಿನ್ನ
ಹೀಗೆ ಮೊನ್ನೆ ನವೆಂಬರ್ ಒಂದರಂದು
ಸಿಡ್ನಿಯ ನಮ್ಮ ಆಫೀಸಿನಲ್ಲಿ
ಎಮರ್ಜೆನ್ಸಿ ಸನ್ನಿವೇಶ
ಒಳಗೆ ಬೆಂಕಿಯೋ ಹೊಗೆಯೋ
ಗಂಟೆ ಹೊಡೆಯಲಾರಂಭಿಸಿತು
ಎಲ್ಲರೂ ಎದ್ದೆವೊ ಬಿದ್ದೇವೊ ಅಂತ
ಹೊರಗೆ ಓಡಿದರು
ನಾನೇ ಎಮರ್ಜೆನ್ಸಿ ಆಫೀಸರ್
ಎಲ್ಲರನ್ನು ಹೊರಗೆ ಕರೆದು ತಂದು
ಒಂದು ಕಡೆ ಸೇರಿಸಿ ಸುರಕ್ಷಿತವಾಗಿರುವವರ
ತಲೆ ಎಣಿಸಲಾರಂಬಿಸಿದೆ
ಒಂದು ಎರಡು ಮೂರು
ಒಟ್ಟು ಹದಿನಾರು
ವಾಟ್, ಹೌ ಮೆನಿ ಮೇಟ್
ಅಂದ ಆಸಿ ಸಹೋದ್ಯೋಗಿ
ಹದಿನಾರು ಅಂದೆ ಮತ್ತೊಮ್ಮೆ
ಅವನ ಹಣೆ ಮೇಲೆ ಮೂಡಿದ ಗೆರೆಗಳಲ್ಲಿ
ನಮ್ಮೂರ ಕನ್ನಡ ಸಾಲಿ ಗೆಳೆಯನ
ಮಚ್ಚೆ ಕಾಣಿಸಿತು…..
ಇದನ್ನು ಹೀಗೆ ಇನ್ನೊಬ್ಬರಿಗೆ ಹೇಳಿದೆ.
ಅವರು ನೀನು ಒಬ್ಬ ನವೆಂಬರ್ ಕನ್ನಡಿಗ ಬಿಡು
ಅಂದರು
ಅವರಿಗೇನು ಗೊತ್ತು
ಬೆಂಕಿಗೆ ಬಿದ್ದಾಗಲೇ ಚಿನ್ನ
ಹೊಳೆಯುವದು ಅಂತ.






0 Comments