-ಲಕ್ಷ್ಮಿ ದೇವಿ ಪತ್ತಾರ
ದೀಪಾವಳಿ ಬಂದಿತು
ದೀಪಾವಳಿ ಬಂದಿದೆ
ಮನೆಯನ್ನು ಶುಚಿಗೊಳಿಸಬೇಕು
ಹಾಗೆ ಮನವನ್ನು
ಮನೆ ತುಂಬಾ ತುಂಬಿರುವ ಬೇಡದ ವಸ್ತುಗಳನ್ನೆಲ್ಲಾ ಹೊರ ಹಾಕಬೇಕು
ಮೂಲೆ ಮೂಲೆಗಳಲ್ಲಿ ಕಟ್ಟಿರುವ
ಜೇಡವನ್ನು, ದೂಳವನ್ನು ಜಾಡಿಸಿ
ಎಸೆಯಬೇಕು
ಮನದಲ್ಲಿರುವ ಬೇಡದ ವಿಷಯಗಳನ್ನು ಕಹಿ ನೆನಪುಗಳನ್ನು ಗೂಡಿಸಿ ಹೊರಹಾಕಬೇಕು
ನಿಂದನೆ, ಚುಚ್ಚು ಮಾತುಗಳ ಕಲೆಗಳನ್ನು ಶುಭ್ರ ಬಟ್ಟೆಯಿಂದ ಒರೆಸಬೇಕು
ಮನೆ ,ಮನ ಸ್ವಚ್ಛವಾದ ಬಳಿಕ
ಒಳಗೂ, ಹೊರಗೂ
ಎಲ್ಲೆಲ್ಲೂ ಬೆಳಕೆ, ಬೆಳಕು.






0 Comments