ನಾನೆಂದಿಗೂ ನಿನಗೆ ಋಣಿ

ಆಕರ್ಷ ಆರಿಗ

ಜಗತ್ತಿನ ಅತಿ ದೊಡ್ಡ ಆಸ್ತಿಯೆಂದರೆ ಅದು ತಾಯಿ. ತಾಯಿಯ ಪ್ರೀತಿ ವರ್ಣಿಸಲು ಸಾಧ್ಯವಿಲ್ಲ. ತನ್ನೆಲ್ಲಾ ನೋವನ್ನು ಬದಿಗೊತ್ತಿ ಮಕ್ಕಳ ಖುಷಿಯಲಿ ಖುಷಿ ಕಾಣುವ ಮಮತೆಯ ಮಾತೆ, ಹುಟ್ಟಿ ಚಿಕ್ಕವನಿದ್ದಾಗ ಮೊದಲ ಅಕ್ಷರ ಕಲಿಸಿದ ಮೊದಲ ಗುರು. ಬೆಳೆದಂತೆಲ್ಲ ನಮ್ಮ ತಪ್ಪುಗಳನ್ನ ತಿದ್ದಿ ಬುದ್ದಿ ಹೇಳಿ ಸಮಾಜದಲ್ಲಿ ಯಾರ ಕೈಗೊಂಬೆಯಾಗದಂತೆ ಬದುಕಲು ಕಲಿಸಿದ ಮಹಾ ಗುರುಮಾತೆ ನೀನು.

ಅಮ್ಮಾ ನನ್ನ ಜೀವನ ಪರ್ಯಂತ ನಿನ್ನ ಋುಣ ತೀರಿಸಲು ಆಗಲ್ಲಾ, ನಾನು ನಿನ್ನ ಋಣದಲ್ಲೇ ಪ್ರಪಂಚ ತೊರೆಯುತ್ತೇನೆ. ನಾನು ಬೆಳ್ಳಿಗ್ಗೆ ಏಳುವುದು ದಿನಾಲೂ ತಡವಾಗುತ್ತದೆ. ಕಾಲೇಜಿಗೆ ಹೋಗಬೇಕು, ಬೇಗ ಏಳೋಕೆ ಆಗಲ್ವಾ ಎನ್ನುವ ಅಮ್ಮನ ಮಂತ್ರಾಕ್ಷತೆ ದಿನವೂ ತಪ್ಪದೇ ಸಿಗುತ್ತದೆ.

ಬೇಸರ ಅನ್ನಿಸಿದಾಗಲೆಲ್ಲ ನಾನು ಮೊದಲು ಹುಡುಕುವ ದನಿ ಅಮ್ಮನದ್ದೇ. ಬೇಸರ ಆದಾಗ ನಾವು ಯೋಚನೆ ಮಾಡುವುದು ಒಂದೇ ದೃಷ್ಟಿಕೋನದಲ್ಲಿರುತ್ತದೆ. ಬೇಜಾರಾದಾಗ ನಮ್ಮನ್ನು ನಾವು ಸಂತ್ರಸ್ತರಂತೆ ನೋಡಿಕೊಳ್ಳುವ ಸಂದರ್ಭವೇ ಹೆಚ್ಚು. ಆದರೆ ಏನೇ ಆದರೂ ಆ ಘಟನೆಯ ಆಚೆ ನಿಂತು ಯೋಚಿಸಬೇಕು.

ಬಹಳಷ್ಟು ಸಂದರ್ಭದಲ್ಲಿ ಯಾರತ್ರಾನೂ ಹೇಳಿಕೊಳ್ಳದಂತಹ ವಿಷಯವನ್ನು ಹಂಚಿಕೊಂಡಿದ್ದೇನೆ ಹಾಗೂ ಪ್ರತಿ ಬಾರಿ ಅಪ್ಪ ಬಯ್ಯುವಾಗ ನನ್ನ ಸುರಕ್ಷಾ ಕವಚ ನೀನೇ ಆಗಿದ್ದೆ. ನನಗೆ ಅಪ್ಪ ಅಂದರೆ ಅಚ್ಚುಮೆಚ್ಚು ಆದರೆ ಎಲ್ಲಾ ವಿಷಯವನ್ನು ಬಿಚ್ಚಿಕೊಳ್ಳಲು ಸಾಧ್ಯವಿಲ್ಲ. ಅಮ್ಮ ಹಾಗಲ್ಲ – ನನ್ನ ಕಷ್ಟಸುಖಗಳಿಗೆ ಜೊತೆಯಾಗಿ ಸದಾ ನನ್ನೊಂದಿಗೆ ಇರುತ್ತಾಳೆ. ಆದ್ದರಿಂದ ಅಮ್ಮ ‘ನನ್ನ ಆಪ್ತ ಗೆಳತಿ’ ಎಂದು ಹೇಳಿಕೊಳ್ಳುತ್ತೇನೆ.

ಅಪ್ಪ ಎಂದರೆ ವಿಪರೀತ ಭಯ. ಆದ್ದರಿಂದ ಪ್ರತಿ ಸಲ ಏನಾದರೂ ಬೇಕಿದ್ದರೂ ಅಮ್ಮನ ಮೂಲಕ ಹೇಳುತ್ತಿದ್ದೆ ಹಾಗಾಗಿ ಎಷ್ಟು ಬಾರಿ ನನ್ನಿಂದ ಅಮ್ಮ ಅಪ್ಪನ ಜೊತೆ ಬೈಸಿಕೊಂಡದ್ದು ಇದೆ. ಎಲ್ಲ ತಾಯಂದಿರು ತನ್ನ ಮಕ್ಕಳು ಚೆನ್ನಾಗಿರಬೇಕು ಹಾಗೂ ನಮ್ಮ ಕಷ್ಟಗಳೆಲ್ಲ ಮಕ್ಕಳಿಗೆ ಬರಬಾರದು ಎಂದು ಬೇಡಿಕೊಳ್ಳುತ್ತಾರೆ. ಆ ಸಂದರ್ಭದಲ್ಲೂ ಕೂಡ ತಾಯಿ ಮಕ್ಕಳನ್ನು ಬಿಟ್ಟು ಕೊಡುವುದಿಲ್ಲ. ಇದು ಬಹುಶಃ ಆಕೆ ಪ್ರೀತಿಯ ಶಕ್ತಿ.

ಇಂದಿಗೂ ತನ್ನ ಕಷ್ಟದ ಮೂಟೆಗಳನ್ನು ಬೆನ್ನಿಗಂಟಿಸಿಕೊಂಡು ತೊಂದರೆಯೇ ಇಲ್ಲದಂತೆ ನಟಿಸುವ ಮಹಾನಟಿ‌ ನಮ್ಮಮ್ಮ. ನಾವು ಹುಟ್ಟಿದ ಮೇಲೆ ತನಗಾಗಿ ಬದುಕುವುದನ್ನೆ ಮರೆತ ಮರುವಗೇಡಿ ಇವಳು. ಅದೊಂದು ದಿನ ಕೂಡು ಕುಟುಂಬದಿಂದ ಹೊರಬಂದಾಗ ನೋವನ್ನುಂಡು ಅವಳು ತ್ಯಾಗಿಯಾದ ಆ ದಿನಗಳು ಇಂದಿಗೂ ಕಣ್ಣುಕಟ್ಟಿವೆ.

‍ಲೇಖಕರು Avadhi

May 27, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: