ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನು ಮತ್ತು ಕವಿತೆ ವೇಷ ಬದಲಿಸಿಕೊಂಡೆವು…

ಬದಲು

ಡಾ. ಗೋವಿಂದ ಹೆಗಡೆ

ಒಮ್ಮೆ ನಾನು ಮತ್ತು ಕವಿತೆ

ವೇಷ ಬದಲಿಸಿಕೊಂಡೆವು

ಅವಳ ವೇಷ ನಾನು ಉಟ್ಟು

ನನ್ನ ಉಡುಗೆ ಅವಳು ತೊಟ್ಟು

 

ಮಜಾ ಅನ್ನಿಸ್ತು

ನಮಗೆ ನಾವೇ ಬೇರೆಯಾಗಿ

ತುಸು ಪರಕೀಯವಾಗಿ ಕಂಡೆವು

ಹೊಂದಿಕೊಳ್ಳಲು ಕೈಕಾಲು

ಜಾಡಿಸಿ ಮೈಮುರಿದು

ಇರಲಿ, ರೂಢಿಯಾದ್ರೆ ಸರಿಯಾಗ್ತದೆ

ಪರಸ್ಪರ ಹೇಳಿಕೊಂಡೆವು

ಮರುದಿನ ಮತ್ತೆ ಅದರ ಮರುದಿನ…

ಬರುಬರುತ್ತ

ಒಬ್ಬರು ಇನ್ನೊಬ್ಬರಂತೆ ವರ್ತಿಸಲೂ

ಕಲಿಯೋಣ ಅನ್ನಿಸಿ

ನಾನು ಅವಳಂತೆ ಹಾಡಲು

ಕುಣಿದು ಖುಷಿಯಾಗಿರಲು

ಅವಳು

ನನ್ನಂತೆ ಗೊಣಗುವುದು ಸಿಡುಕುವುದು

ಕನಲುವುದನ್ನು ಕಲಿಯುತ್ತ

ಕಂಗಾಲು

ಈಗ ನಾನು ಕವಿತೆಯೇ

ಕವಿತೆ ನಾನೇ ತಿಳಿಯದಂತೆ

ಶಪಿತ

ಗಿಡ ಸುಮ್ಮನೆ ಚಿಗುರುತ್ತದೆ

ಹೂವು ಸುಮ್ಮನೆ ಅರಳುತ್ತದೆ

ಚಿಟ್ಟೆ

ಹಾರುತ್ತದೆ ರೆಕ್ಕೆ ಮಿಡಿದು

ನಿಶ್ಶಬ್ಧ

ನದಿ ಹರಿಯುತ್ತದೆ ಸಮ

ಶ್ರುತಿಯಲ್ಲಿ

ನಿರುಮ್ಮಳ ಎಲ್ಲ

ಮನುಷ್ಯ ಮಾತ್ರ

ಕ್ರಿಯೆ-ಕಾರಣ

ಎಂದೆಲ್ಲ ಗೊಂದಲಿಸಿ

ತಪ್ತ

‍ಲೇಖಕರು avadhi

16 October, 2019

4 Comments

  1. Keshav Deshpande

    Nice

  2. ರಾಜು ಹೆಗಡೆ

    ಚಲೊ ಇದೆ

  3. T S SHRAVANA KUMARI

    ತುಂಬಾ ಚೆನ್ನಾಗಿದೆ

  4. Kotresh T A M Kotri

    ಇಷ್ಟವಾಯಿತು ಸರ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading