ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನು ಕವನಗಳನ್ನು ಕದ್ದು ಮಾರುತ್ತೇನೆ..!!

ಯಮುನಾ ಗಾಂವಕರ್ ರವರು ಬರೆದ ‘ನಾನು ಕವನವನ್ನು ಕದಿಯುತ್ತೇನೆ’

ಈ ಕವನ ನನ್ನೊಳಗೆ ಮೂಡಿಸಿದ ಭಾವ ಇಲ್ಲಿದೆ geetha-hegde

ಗೀತಾ ಹೆಗ್ಡೆ 

ನನ್ನೊಳಗಿನ ಭಾವನೆಗಳು
ಹೊತ್ತು ಗೊತ್ತಿಲ್ಲದಂತೆ ಧಾಂಗುಡಿ ಇಟ್ಟಾಗ
ಮೌನದ ಕೋಟೆ ಕಟ್ಟಿ
ಮುಗ್ಧತೆಯ ಮುಲಾಮು ಹಚ್ಚಿ
poetry crowಜನರ ಕಣ್ಣಿಗೆ ಮಣ್ಣೆರೆಚುವ
ಗೂಢ ಶಬ್ಧಗಳ
ಗುಟ್ಟಾಗಿ ಲಪಟಾಯಿಸಿ
ಮುಗಮ್ಮಾಗಿ ಜೋಡಿಸಿ
ಸಂಭಾವಿತರ ಸೋಗಿನಲ್ಲಿ
ಯಾರಿಗೂ ಕಾಣದಂತೆ
ಕಳ್ಳತನ ಮಾಡುತ್ತೇನೆ.

ಅಲ್ಲಿ
ನಾನು ಮತ್ತೆ ನಾನು
ಇವೆರಡಕ್ಕೇ ಗೊತ್ತು
ನನ್ನ ಹಿಕ್ಮತ್ತು
ಬೇಕಿಲ್ಲ ಯಾವ ಸವಲತ್ತು
ಅಲ್ಲಿಗೆ ಮುಗೀತು
ಕದ್ದ ಮಾಲು ರೆಡಿಯಾಯಿತು.

ಶುರುವಾಯಿತು ಕವನ
ಮಾರುವ ಜರೂರತ್ತು
ಕಾಸು ಕವಡೆಯ ಹಂಗು ತೊರೆದು
ಎಲ್ಲ ಮಾರಿ ಬಿಡುತ್ತೇನೆ
ದುಡ್ಡಿಗಲ್ಲ ;
ಅದು ಕದ್ದ ಮಾಲಲ್ಲವೆ…!
ಮತ್ತಿನ್ನೇನು?
ಬಿಕರಿಯಾಗಿ ಊರೆಲ್ಲ ಡಂಗುರವಾದರೆ
ಸಿಗುವುದಲ್ಲ ದೊಡ್ಡ ಸಂಪತ್ತು…!!

‍ಲೇಖಕರು Admin

14 November, 2016

2 Comments

  1. Anonymous

    ವಾಹ್..! ಕದ್ದು ಮಾರಿದರೂ ಪರವಾಯಿಲ್ಲ… ಕೊಂಡುಕೊಳ್ಳುತ್ತೇವೆ…

  2. Sangeeta Kalmane

    ಓಹ್! ಖುಷಿ ಆಯಿತು. ಧನ್ಯವಾದಗಳು

Trackbacks/Pingbacks

  1. ನಾನು ಕವನಗಳನ್ನು ಕದ್ದು ಮಾರುತ್ತೇನೆ..!! | | Sandhyadeepa…. - […] http://avadhimag.online/2016/11/14/%e0%b2%a8%e0%b2%be%e0%b2%a8%e0%b3%81-%e0%b2%95%e0%b2%b5%e0%b2%a8%e0%… […]
  2. ನಾನು ಕವನಗಳನ್ನು ಕದ್ದು ಮಾರುತ್ತೇನೆ..!! | – Sandhyadeepa…. - […] http://avadhimag.online/2016/11/14/%e0%b2%a8%e0%b2%be%e0%b2%a8%e0%b3%81-%e0%b2%95%e0%b2%b5%e0%b2%a8%e0%… […]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading