ನಾಗರಾಜ ಎಂ ಹುಡೇದ ಓದಿದ ‘ಯಾರು ಜಾಣರು’

ಮಕ್ಕಳಲ್ಲಿ ಮೌಲ್ಯ ತುಂಬುವ ಕಥಾ ಸಂಕಲನ : ‘ಯಾರು ಜಾಣರು

ನಾಗರಾಜ ಎಂ ಹುಡೇದ

ಹಿರಿಯರಾದ ಹ.ಮ.ಪೂಜಾರ ಅವರು ವಿಜಯಪುರ ಜಿಲ್ಲೆಯ ಸಿಂದಗಿಯವರು. ಈಗಾಗಲೇ ಮಕ್ಕಳ ಸಾಹಿತ್ಯದಲ್ಲಿ ಹತ್ತಾರು ರಚಿಸಿ ಚಿರಪರಿಚಿತರಾಗಿದ್ದಾರೆ. ತಮ್ಮ ಅಮೂಲ್ಯವಾದ ಅನುಭವದ ಮೂಲಕ ವಿಭಿನ್ನ ಕಥಾಹಂದರದ ಕಥೆಗಳು ಇಲ್ಲಿವೆ. ಇಂದಿನ ಮಕ್ಕಳ ಬದುಕನ್ನು ಹಸನಾಗಿಸಬೇಕು, ಮೌಲ್ಯಗಳನ್ನು ಬಾಲ್ಯದಲ್ಲಿಯೇ ಬಿತ್ತಬೇಕೆಂಬ ಹಂಬಲವುಳ್ಳವರಾಗಿದ್ದಾರೆ. ಇಲ್ಲಿಯ ಕಥೆಗಳಲ್ಲಿ ಅವೆಲ್ಲವೂ ಎದ್ದು ಕಾಣುತ್ತವೆ. ಧೈರ್ಯ, ಸಾಹಸ, ದಯೆ-ಕರುಣೆ, ನಿಸ್ವಾರ್ಥ ಸೇವೆ, ನೀತಿ ಮೌಲ್ಯ ಬೆಳೆಸುವ , ಮೌಢ್ಯತೆ ತೊಲಗಿಸುವ ಕಥೆಗಳನ್ನು ಪೂಜಾರ ಅವರು ರಚಿಸಿದ್ದಾರೆ. ಶಬ್ದಗಳಾಡಂಬರವಿಲ್ಲದ, ಸರಳ ಸೌಂದರ್ಯ ತುಂಬಿದ ಕಥೆಗಳಾಗಿವೆ.

ಮಕ್ಕಳಿಗೆ ಸಾಂರ್ಭಿಕವಾಗಿಯೂ ಇಲ್ಲಿಯ ಕಥೆಗಳನ್ನು ಹೇಳಬಹುದು. ಹಾಗೆಯೇ ಒಂದೇ ಗುಕ್ಕಿನಲ್ಲಿ ಒಂದೊAದು ಕಥೆಯನ್ನು ಓದಿ ಮುಗಿಸಬಲ್ಲ ಕಥೆಗಳಾಗಿವೆ. ‘ಯಾರು ಜಾಣರು’ ಸಂಕಲನದಲ್ಲಿ ಒಟ್ಟು ಹನ್ನೊಂದು ಕಥೆಗಳಿವೆ. ಎಲ್ಲ ಕಥೆಗಳಿಗೂ ಸುಂದರ ಚಿತ್ರಗಳು , ಸೊಗಸಾದ ಮುಖಪುಟ ಮತ್ತು ಅಚ್ಚುಕಟ್ಟಾದ ಮುದ್ರಣವಿದೆ.

‘ಚಿಪ್…..ಚಿಪ್….ಮರಿ ಇಲಿಗಳು’, ಇದು ಮಕ್ಕಳಿಗೆ ಇಷ್ಟವಾಗುವ ಕಥೆ. ಇದರ ಕಥಾವಸ್ತವೂ ಹೊಸದಾಗಿದೆ. ಇಲಿ ಮತ್ತು ಇಲಿ ಮರಿಗಳ ನಡುವೆ ನಡೆಯುವ ಸಂಭಾಷಣೆ ಕುತೂಹಲ ಮೂಡಿಸುತ್ತದೆ. ತಾಯಿ ಇಲಿ ತನ್ನ ಮರಿಗಳಿಗೆ ಬೆಕ್ಕಿನ ಬಗ್ಗೆ ಎಚ್ಚರಿಕೆಯಿಂದಿರಲು ಹೇಳುತ್ತದೆ. ಉಪಾಯದಿಂದ ಅಜ್ಜಿ ಇಲಿ ಬೆಕ್ಕಿನಿಂದ ತಪ್ಪಿಸಿಕೊಂಡ ಬಗೆ ಬಹಳ ಇಷ್ಟವಾಗುತ್ತದೆ. ಮುಂದೆ ಕಾಮಿಯೊಂದು ಆಡಲು ಬಂದಾಗ ಎಚ್ಚರದಿಂದ ಪ್ರತ್ಯಕ್ಷ ಕಂಡರೂ ಪ್ರಮಾಣ ಸಿ ನೋಡಿದವು. ಹೀಗೆ ಕಥೆ ಚಿಕ್ಕದಾಗಿ ಚೊಕ್ಕದಾಗಿ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಓದುವ, ಕೇಳುವ ಮಕ್ಕಳಿಗೂ ಒಂದಿಷ್ಟು ಕಿವಿಮಾತು ಹೇಳಬಲ್ಲದು.

‘ಪ್ರಾಮಾಣ ಕ ಕಳ್ಳ’, ಕಥೆ ನವಿರಾದ ಹಾಸ್ಯದ ಜೊತೆಗೆ ಕುತೂಹಲ ಮೂಡಿಸುತ್ತದೆ. ಕಳ್ಳತನ ಮಾಡುವವರಿಗೂ ಅಮೃತದ ಸಿಂಚನವಾದಾಗ ಅವರೂ ಬದಲಾಗುತ್ತಾರೆಂಬುದನ್ನು ಈ ಕಥೆಯಲ್ಲಿ ತೋರಿಸಿ ಕೊಟ್ಟಿದ್ದಾರೆ. ಸತ್ಯಕ್ಕೆ ಅಗಾಧವಾದ ಶಕ್ತಿಯಿದೆ ಎಂಬುದನ್ನು ಓದುಗರಿಗೆ ತೋರ್ಪಡಿಸಿದ್ದಾರೆ. ಸತ್ಯಕ್ಕೆ ಯಾವತ್ತೂ ಸಾವಿಲ್ಲವೆಂಬ, ಯಾವತ್ತೂ ಒಳ್ಳೆಯದಾಗುತ್ತೆ ಎಂಬುದನ್ನು ತಿಳಿಸುತ್ತದೆ.

‘ಕನಸಿನ ಗೋಪುರ’ ಕಥೆಯು ಬರೀ ಹಗಲುಗನಸು ಕಾಣುವವರು ಏನೂ ಮಾಡಲು ಸಾಧ್ಯವಿಲ್ಲ. ನಾವು ಕಾರ್ಯಪ್ರವೃತ್ತರಾದಾಗ ‘ಕನಸು ನನಸಾಗುತ್ತದೆ’ ಎಂಬುದನ್ನು ಈ ಕಥೆ ಮಾರ್ಮಿಕವಾಗಿ ಹೇಳುತ್ತದೆ. ನಾವು ಎಲ್ಲವನ್ನೂ ಮಾತಾಡಿ , ಯಾವುದೋ ಬೆಡವಾದ ಮಾತಿಗೆ ಜಗಳ ಮಾಡಿಕೊಳ್ಳುತ್ತೇವೆ. ಉಸುಕಿನ ಗೋಪುರದಂತೆ ವ್ಯರ್ಥವಾಗುವುದನ್ನು ಈ ಕಥೆ ಹೇಳುತ್ತದೆ.

‘ಸಾರ್ಥಕ ಬದುಕು’ ಕಥೆಯಲ್ಲಿ ಎರಡು ಜನ ಶ್ರೀಮಂತ ವ್ಯಾಪಾರಿಗಳು ಇರುತ್ತಾರೆ. ಒಬ್ಬನು ದಾನ ಧರ್ಮ ಮಾಡುತ್ತಾ ವಿನವಮತನಾಗಿದ್ದರೆ, ಸೂರ್ಯಕಾಂತ ಎನ್ನುವ ವ್ಯಾಪಾರಿ ಯಾರಿಗೂ ಏನೂ ಸಹಾಯ ಮಾಡುತ್ತಿರಲಿಲ್ಲ. ಇವರಿಬ್ಬರ ಉದಾಹರಣೆ ಮೂಲಕ ನಿಸ್ವಾರ್ಥ ಸೇವೆಯ ಮಹತ್ವವನ್ನು ಮಕ್ಕಳಲ್ಲಿ ಬಿತ್ತಲು ಲೇಖಕರು ಪ್ರಯತ್ನಿಸಿದ್ದಾರೆ. ಮೌಲ್ಯಗಳು ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ಕಥೆ ಅವರಲ್ಲಿ ಅರಿವಿನ ಕಿಡಿ ಹಚ್ಚಬಲ್ಲದು. ಸುಂದರವಾದ ಕಥೆ.

‘ಜಯಶಾಲಿ’ ಕಥೆಯಲ್ಲಿ ಕ್ರೀಡಾ ಸ್ಫೂರ್ತಿಯ ಜೊತೆಗೆ ಮಾನವೀಯತೆಯೂ ಇನ್ನೂ ಶ್ರೇಷ್ಠವೆಂಬುದನ್ನು ತರ‍್ಪಡಿಸುತ್ತದೆ. ಓಟದ ಸ್ಪರ್ಧೆಯಲ್ಲಿ ಜಯಶಾಲಿಯಾಗಬೇಕಿದ್ದ ‘ಮೋಹನ್’ ಬಿದ್ದು ಗಾಯಗೊಂಡಾಗ ಎರಡನೇ ಸ್ಥಾನದಲ್ಲಿದ್ದ ‘ಅನಿಲ’ ಅವನನ್ನು ಎಬ್ಬಿಸಿ ಸಹಾಯ ಮಾಡಿದ. ಹೀಗೆ ಮಾನವೀತೆಯ ಕಾರಣ ಅನಿಲ ಗೆದ್ದಿದ್ದು ಕಥೆಯ ಗೆಲುವು ಆಗಿದೆ. ಹೀಗೆ ಮಕ್ಕಳಿಗೆ ಮಾದರಿಯಾಗಬಲ್ಲ ಕಥೆಯಾಗಿದೆ.

‘ ಚಾಣಾಕ್ಷ ಬಾಲಕ’ ಕಥೆಯು ದನ ಮೇಯಿಸಲು ಹೋಗುವ ಮಕ್ಕಳ ಕಥೆ. ಪೊದೆಯೊಳಗೆ ಅವಿತು ಕುಳಿತ ದುರುಳನೊಬ್ಬ ಆ ಹುಡುಗರನ್ನು ವಿಚಿತ್ರವಾಗಿ ಕೂಗಿ ಹೆದರಿಸಲು ಪ್ರಯತ್ನಿಸುತ್ತಾನೆ. ನಾನು ಪಿಸಾಚಿ ನನಗೆ ಊಟ ಕೊಡಿ ಎಂದು ಹೇಳುತ್ತಾನೆ. ಪಿಸಾಚಿಯಂತೆ ನಟಿಸುತ್ತಾನೆ. ಅವರಲ್ಲಿಯೇ ಹೆದರದ ಬಾಲಕನೊಬ್ಬ ಮರು ಪ್ರಶ್ನೆ ಹಾಕುತ್ತಾನೆ. ಬುದ್ದಿವಂತಿಕೆಯಿAದ ಹುಡುಗರು ಆ ದುರುಳನನ್ನು ಹಿಡಿದು ಪೋಲಿಸರಿಗೆ ಒಪ್ಪಿಸುತ್ತಾರೆ. ಇದೆ ಕಥಾವಸ್ತು ಇರುವ ಕಥೆಗಳು ಸಾಕಷ್ಟು ಬಂದಿವೆ. ಆದರೂ ಹೊಸ ಶೈಲಿಯೊಂದಿಗೆ ಕಥೆ ವಿಶೇಷವೆನಿಸುತ್ತದೆ.

‘ಯಾರು ಜಾಣರು’ ಕಥೆಯು ಈ ಸಂಕಲನದ ಶೀರ್ಷಿಕೆಯಯಾಗಿರುವ ಕಥೆಯಾಗಿದೆ. ಶ್ರೀಮಂತ ವ್ಯಾಪಾರಿಯೊಬ್ಬ ತನ್ನ ಮೂವರು ಮಕ್ಕಳು ದುಡಿಯದೇ ಆಲಸಿಯಾಗಿದ್ದರು. ಅವರ ಬುದ್ದಿವಂತಿಕೆ ಪರೀಕ್ಷಿಸಲು ಪ್ರತಿಯೊಬ್ಬರಿಗೂ ೫೦೦ ರೂಗಳಂತೆ ಕೊಟ್ಟು ಇದರಲ್ಲಿ ನಿಮ್ಮ ನಿಮ್ಮ ಕೋಣೆ ತುಂಬಬೇಕು, ಏನು ಮಾಡುತ್ತೀರಿ ಮಾಡಿ ಎಂದನು. ಇಬ್ಬರು ಮಕ್ಕಳು ಐದುನೂರು ರೂಪಾಯಿ ಖರ್ಚು ಮಾಡಿ ಅವರ ಅವರ ಕೋಣೆ ತುಂಬಿಸಿದರು. ಆದರೆ ಅವರ ಕಿರಿಯ ಮಗ ಕೇವಲ ಐದು ರೂಪಾಯಿ ಖರ್ಚು ಮಾಡಿ ಮೇಣದ ಬತ್ತಿಯನ್ನು ಹಚ್ಚಿಟ್ಟ. ‘ತಮಸೋಮ ಜೋತಿರ್ಗಮಯ ಅಂದರೆ ಬೆಳಕು ಕತ್ತಲೆಯನ್ನು ನಿವಾರಿಸುತ್ತದೆ. ನಮ್ಮಲ್ಲಿರುವ ಅಜ್ಞಾನ ತೊಲಗಬೇಕು, ಜ್ಞಾನ ನೆಲೆಸಬೇಕೆಂಬ’ ಅರ್ಥವನ್ನು ಕಿರಿಯ ಮಗ ಹೇಳಿದ. ಹೀಗೆ ಕಥೆ ಮಾರ್ಮಿಕವಾಗಿದೆ. ನಿಜವಾಗಲೂ ಯಾರು ಜಾಣರೆಂಬುದನ್ನು ತೆರೆದಿಡುತ್ತದೆ.

ಹೀಗೆ ಎಲ್ಲ ಕಥೆಗಳೂ ನೀತಿ ಮೌಲ್ಯಗಳನ್ನು ಹೊಂದಿವೆ. ಹಿರಿ-ಕಿರಿಯರಿಗೂ ಮಾರ್ಗದರ್ಶಿಗಳಾಗಿವೆ. ಪೂಜಾರ ಗುರುಗಳು ರಾಷ್ಟç ಪ್ರಶಸ್ತಿ ವಿಜೇತರು, ಪ್ರೌಢಶಾಲಾ ಶಿಕ್ಷಕರಾಗಿ ನಿವೃತ್ತರಾಗಿರುವ ಅವರ ತುಡಿತವೆಲ್ಲ ಕಥೆಯಾಗಿವೆ. ಮುದ್ದು ಮಕ್ಕಳ ಭವಿಷ್ಯತ್ತಿನ ಬಗ್ಗೆ ಅಗಾಧವಾದ ಕಾಳಜಿ ಎದ್ದು ಕಾಣುತ್ತದೆ.

‍ಲೇಖಕರು Admin

December 5, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: