ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನ ನಿನ್ನ ಬಿಡುಗಡೆ ಸುದ್ದಿ..

ಮುತ್ತು ಬಳ್ಳಾ ಕಮತಪುರ

ತಲೆಯಾಗ ಬಂದ ಮಾತು ಹೃದಯದಾಗ ಇನ್ನೂ ಉಳಿದಿಲ್ಲ|
ಮನಸ್ಸಿನ್ಯಾಗ ಇಳಿದ ಮಾತು ಕನಸಿನ್ಯಾಗ ಇನ್ನೂ ಉಳಿದಿಲ್ಲ ||

ಒಲ್ಲದ ಬೆಳಕಿನ ಸ್ವರ್ಗವೂ ! ಕತ್ತಲ ಗವಿಯಾಗ ತಳ್ಳಿದಂಗ ಸಖಾ |
ಮಾತಿನ ಮಂಟಪದಲಿನ ಸೆಳವು ಹಿತ್ತಲದಾಗ ಇನ್ನೂ ಉಳಿದಿಲ್ಲ ||

ನನ್ನ ನಿನ್ನ ಬಿಡುಗಡೆ ಸುದ್ದಿ ಜಿಟಿ ಜಿಟಿ ಹೋದು ಬಂದ ಮಳೆಹನಿ |
ಜರಿದ ಭಾವಬೆಸುಗೆ ಚಿಂತಿಯ್ಯಾಗ ಹಣ್ಣಾದಾಗ ಇನ್ನೂ ಉಳಿದಿಲ್ಲ ||

ದಿಂಬು, ಹೊದ್ದ ಹಾಸಿಗೆ ವಿರಸ ಸರಸದ ಪಾಠವನ್ನು ಅನುಭವಿಸಿದೆ |
ಇರುಳು ಸರಿದ ಸಮಯ ಒಂಟಿತನ ಕಾಡಿಸಿದಾಗ ಇನ್ನೂ ಉಳಿದಿಲ್ಲ ||

ಅಂತರಂಗದ ಕಲ್ಪನೆಯ ಪ್ರೀತಿಗೆ ‘ಮುತ್ತು’ವಿನ ಚೆಂಬೆಳಕು ಹೊನಲಾಗಿದೆ |
ಕಡಲ ತೀರದ ದಾಹ ಮೊಡಗಳಿಗೆ ಉಸಿರು ಕಟ್ಟಿಸಿದಾಗ ಇನ್ನೂ ಉಳಿದಿಲ್ಲ ||

‍ಲೇಖಕರು Admin

15 November, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading