ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನಪ್ಪ ಯಾವಾಗಲೂ ಹಿಂದೆ ಬಿದ್ದಿಲ್ಲ..

ಜಹಾನ್ ಆರಾ ಕೋಳೂರು

ತಂದೆ ತಾಯಿಯ ಹೆಸರನ್ನು ಕೂಡಿ ಹೇಳುವ ನನ್ನಪ್ಪ
ಅಪ್ಪ-ಅಮ್ಮ ನಲ್ಲಿ ಭೇದ ಮಾಡೋದನ್ನ ಹೇಳಿಕೊಡಲಿಲ್ಲ
ಅಮ್ಮ ಗೆಳತಿಯಾದಳು ಅಬ್ಬು ಡಾರ್ಲಿಂಗ್ ಆದ
ಅಂದು ಹಿಡಿದ ಬೆರಳು ಇನ್ನೂ ಹಿಡಿದೇ ನಡೆದಿದ್ದಾನೆ
ನನ್ನಪ್ಪ ಯಾವಾಗಲೂ ಹಿಂದೆ ಬಿದ್ದಿಲ್ಲ

ಇದ್ದ ಬಿಡಿಗಾಸಿನ ನೌಕರಿಯಲ್ಲಿಯೂ
ನನ್ನ ಕನಸುಗಳ ಸೌಧವನ್ನು ಕಟ್ಟಲು ನಿಲ್ಲಿಸಿಲ್ಲ
ಬೇಡುವ ಮುಂಚೆಯೇ ತುಂಬುತ್ತಿತ್ತು ಕಾಸಿನ ಚೀಲ
ಬೆನ್ನ ಹಿಂದೆ ತಾನಿಂದು ತೋರಿಸಲು ಜಗದ ಜಾಲ
ನನ್ನಪ್ಪ ಯಾವಾಗಲೂ ಹಿಂದೆ ಬಿದ್ದಿಲ್ಲ

ಈ ರಾಜಕುಮಾರಿಯ ಮಹಾರಾಜನು ಅವನು
ರಾಜ್ಯ ಮಾತ್ರ ಅವನ ಹತ್ತಿರವಿಲ್ಲ ಅದು ಬೇಕಾಗಿಲ್ಲ
ಅದೇ ಗತ್ತು ಅದೇ ಗಾಂಭೀರ್ಯ ಸದಾ ಅವನದು
ಸ್ನೇಹ ಜ್ಞಾನದ ದಾಹದಂತೆ ಅವನಿಗೆ ನಗದ ಮೋಹ ಮೂಡಲೇ ಇಲ್ಲ
ಆದರೂ ನನ್ನಪ್ಪ ಯಾವಾಗಲೂ ಹಿಂದೆ ಬಿದ್ದಿಲ್ಲ

ನೋಡಿ ಈಗ ಅವನು ಮಗುವಾಗಿದ್ದಾನೆ.
ನನ್ನಮ್ಮನಿಗೆ ನನಗೂ ಅವನ ಮೊಮ್ಮಗಳಿಗೂ
ಒಮ್ಮೊಮ್ಮೆ ಬೆರಗುಗಣ್ಣು ಒಮ್ಮೊಮ್ಮೆ ಮಂದಹಾಸ
ಜಗತ್ತನ್ನೇ ನುಂಗಿಬಿಡುವಷ್ಟು ಮೌನ
ಕೆಲವೊಮ್ಮೆ ಅವನಿಗೆ ಗೊತ್ತಿಲ್ಲದೆ ಹರಿಯುವ ಕಣ್ಣ ನದಿಗಳು
ದಿವಾನ್ ಕಾಟಿನ ಮೇಲೆ ಇಡೀ ದಿನ ತಪಸ್ಸಿಗೆ ಕುಳಿತರು
ನನ್ನಪ್ಪ ಯಾವಾಗಲೂ ಹಿಂದೆ ಬಿದ್ದಿಲ್ಲ

ಬಣ್ಣ ಬಣ್ಣದ ಬಟ್ಟೆಗಳ ಜೊತೆ ಕನಸು ಕಟ್ಟಿಕೊಟ್ಟ ಅವನು
ತನಗೆ ಮಾತ್ರ ಬಟ್ಟೆ ತರಬೇಡಿ ಎಂದು ತಾಕೀತು ಮಾಡುವವನು
ಗಳಿಸಿದ್ದನ್ನೆಲ್ಲ ನಮ್ಮ ಮಡಿಲಿಗೆ ಹಾಕಿ
ನಿಮ್ಮ ದುಡಿಮೆ ನೀವೇ ಅನುಭವಿಸಿ ಎಂದು ಉಪದೇಶ ಮಾಡುವವನು
ಬುದ್ಧನಂತೆ ಅವನೂ ಹಿಂದೆ ಬಿದ್ದಿಲ್ಲ

‍ಲೇಖಕರು Admin

28 April, 2022

1 Comment

  1. Jahan Ara Kolur

    Thank you sir

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading