ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ನನ್ನದೊಂದು ಬೇಡಿಕೆ’

ಇಮ್ತಿಯಾಜ್ ಶಿರಸಂಗಿ

ಬುಲ್ದೊಸರ್ ನ
ಹಲ್ಲುಗಳು
ಮರಗುತ್ತವೆ.
ಸತ್ತವರಿಗೆ ಕುಣಿ ತೋಡುವ
ಬದಲು ಬದುಕಿದವರ
ಬಾಳನ್ನೇ ಕುಣಿ ಯಾಗಿಸುತ್ತಿರುವ
ಬಗೆ ಯೋಚಿಸಿ.

ಹೊಲಸು ರಾಜಕಾರಣದ
ಧರ್ಮ ದಂಗಲ್ನಲ್ಲಿ
ನಿಯಮಗಳ ಚೆಂಡು,
ಈ ಕಡೆಯಿಂದ ಆ ಕಡೆ

ಆ ಕಡೆಯಿಂದ ಈ ಕಡೆ
ಒದಿಸಿಕೊಂಡು, ಕೊನೆಗೆ
ಬಡವನ ಹೊಸ್ತಿಲಿಗೆ ಬರತ್ತದೆ
ಸುಂಕ ಕೇಳಲು.

ತಮ್ಮ ಸ್ವಾರ್ಥದ ಹರಕತ್ತಿನ
ವಕಾಲತ್ತಿಗಾಗಿ
ನಡುರಾತ್ರಿಯಲ್ಲೂ ನ್ಯಾಯದ
ಕದ ತಟ್ಟುವವರಿಗೆ.
ಆದೇಶದ ಪ್ರತಿ
ತಲುಪಲಿಲ್ಲವಂತೆ ಕೂಗಳತೆಯ
ದೂರವಿದ್ದರೂ..

ಪವಿತ್ರ ರಂಜಾನ್ ತಿಂಗಳಲ್ಲಿ
ಅಲ್ಲಾ:….! ನಿನ್ನಲ್ಲಿ
ನಾ ಬೇಡಿಕೊಳ್ಳುವುದಿಷ್ಟೇ
ನಿಷ್ಪಕ್ಷವಾಗಿ:
ಧರ್ಮದ ಹೆಸರಿನಲ್ಲಿ
ಶಾಂತಿ ಕೆಡಿಸುತ್ತಿರುವವರನ್ನು
ಶಿಕ್ಷಿಸು …

ಕಲ್ಲು ಎಸೆದವನ,
ಕಲ್ಲಂಗಡಿ ಒಡೆದವ,
ಮನೆ ಕೆಡವಿದವನ
ಮನದಲ್ಲಿ ದ್ವೇಷ ಕಳೆದು
ಪ್ರೀತಿ ಹುಟ್ಟಿಸು….

‍ಲೇಖಕರು Admin

5 May, 2022

1 Comment

  1. prathibha nandakumar

    ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading