ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನಗೂ ನಿನಗೂ, ನಿನಗೂ ನನಗೂ ಏನ್ ಈ ಸಂಬಂಧ…

ಈ ಹಾದಿ…

ನಾಗೇಶ ತಳವಾರ


ಯಾವುದ್ಯಾವುದು ಈ ಹಾದಿ
ಕಣ್ಣಿಗೆ ಕಂಡರೂ ಕಾಣದ
ಕಾನನದ ಹಾದಿ
 
ಬೆನ್ನಿಗೆ ಬಿದ್ದವರು ಬರ್ಲಿಲ್ಲ
ಹೊಂಟ ಹಾದಿಗುಂಟ
ಕಟ್ಟಿಕೊಂಡವರು ಇರ್ಲಿಲ್ಲ
ಕೊನೆಗಂಟ
ಸವಿಸಿದೆನು ಈ ಹಾದಿ
ಒಂಟಿಹಂಗ್S
 
ನಡುನಡುಕ ಸಿಕ್ಕರೂ
ಕೂಡಿಬರ್ಲಿಲ್ಲ ಜೊತೆಗೂಡಿ
ಟಿಸಿಲೊಡೆದು ಹೋದವು
ತಂಮ್ಮಪಾಡಿಗೆ ತಾವು
ಕೂಡಿ ಬರಲು ಇವುಕೇನ ದಾಡಿS
 
ನಿನ್ನೆ ಇಂದಿಗೆ ನಾಳೆ
ಯಾವುದೋ
ಅಂದಿಗಂದಿಗೆ ಈ ಬದುಕು
ಸಾಕೆನಿಸುವುದುS
 
ಕಟ್ಟಿಕೊಂಡ ಮೋಹವ ಕಳಚಿ
ಉಟ್ಟ ಉಡುಗೆಯಲ್ಲಿ ಹೊಂಟರೂ
ಬಿಡುವಲ್ಲದು ನಾನೆಂಬ
ಅಂಹಕಾರವ…
 
ನನಗೂ ನಿನಗೂ
ನಿನಗೂ ನನಗೂ
ಏನ್ ಈ ಸಂಬಂಧ
ಕಿತ್ತಿಟ್ಟ ಹೆಜ್ಜಿನ
ಹಿಂದಿಡಲು ಮುಂದಿಡಲು
ನೀ ಬಿಡುವಲ್ಲಿ…
 
ಯಾವುದ್ಯಾವುದು ಈ ಹಾದಿ
ಕಣ್ಣಿಗೆ ಕಂಡರೂ ಕಾಣದ
ಕಾನನದ ಹಾದಿ
 

‍ಲೇಖಕರು G

27 May, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading