ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಂದಿನಿ ಹೆದ್ದುರ್ಗ ಹೊಸ ಕವಿತೆ- ಮಾತು ಸತ್ತ ಹೊತ್ತಿನಲ್ಲಿ…

ನಂದಿನಿ ಹೆದ್ದುರ್ಗ

ಮಾತು ಸತ್ತ ಹೊತ್ತಿನಲ್ಲಿ
ನಾನು
ಗರಿಕೆಯನ್ನೋ
ನೀಲಿಕೊಕ್ಕಿನ
ಪುಟ್ಟ ಹಕ್ಕಿಯನ್ನೋ
ಜೇಡವನ್ನೋ
ನೋಡುತ್ತೇನೆ

ಸೊರಗಿದ್ದ ಝರಿಯೊಂದು
ಮೆಲ್ಲಗೆ
ಹರಿಯುತ್ತದೆ

ಹಿಡಿ ತೇವ ಜಿನುಗದಷ್ಟು
ನವೆದ ಕ್ಯಾನ್ವಾಸಿನಲ್ಲಿ
ಮಳೆ ಸುರಿವ ಚಿತ್ರ
ಬಿಡಿಸಿದ್ದೇನೆ
ಎಂದೋ ಉಡುಗೊರೆಗೆ
ಸಿಕ್ಕಿದ್ದ
ಹೂಬೀಜ ಹುಡುಕಿ
ಚಿತ್ರದಲ್ಲಿ ಬಿತ್ತುವ
ಹುಚ್ಚು

ವಿಧಿ ಸೋತು
ಹೂವರಳಿಸುತ್ತದೆ

ಪರಿಮಳದ ಹಾದಿಯಲ್ಲಿ
ಅವನೊಡನೆ
ನಡೆವಾಗ
ಕಳೆದು ಹೋದರೆ
ಹಾಗೇ…

ಕಣ್ಣು ಹಾಕಬೇಡಿ
ಮತ್ತೆ
ಬೆಳಗಲೆಂದೇ ತಳೆದವಳು
ನಾನು!

‍ಲೇಖಕರು Admin

22 December, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading