ಸತೀಶ್ ಹುಳಿಯಾರ್
ಬಲು ದೂರ ಇದೆ ನಮ್ಮೀ ಪಯಣ
ಸೋಲನು ಮರೆತು ಮುಂದೆ ಸಾಗೋಣ, ಹುಡುಕುತ ಜೀವನ
ಈ ಬಾಳ ಹಾದಿಲಿ ನೋವನು ಮರೆತು
ಜೊತೆಯಲಿ ನಗುತಾ ಸಾಗುವ ಪ್ರತಿದಿನ
ಯಾರೋ ಬಂದು ಬಳಿ ನಿಂದು ನೋಡಿದ ಹಾಗೆ
ಕಣ್ಣ ಮುಚ್ಚಿ ಮನಸ ತೆರೆದು ಕೂಗಿದ ಹಾಗೆ
ಸವಿ ನುಡಿದಂತೆ ಮೌನ ಮುರಿದಂತೆ
ಕೈಯ ಹಿಡಿದು ದಾರಿ ತೋರಿ ಮುಂದೆ ಸಾಗಿದಂತೆ
ಬೀಸೋ ಗಾಳಿ ತನ್ನ ಲಯವ ಮೀರದ ಹಾಗೆ
ಬಳ್ಳಿ ತನ್ನ ಮರವ ತೊರೆದು ಬಾಳದ ಹಾಗೆ
ಎಲೆ ಚಿಗುರಿದಂತೆ ಹೂವು ಅರಳಿದಂತೆ
ಮಳೆ ಹನಿಯು ಎಲೆಯ ಮೇಲೆ ಬದುಕ ನೆಡೆಸುವಂತೆ
ಬೀಳೋ ಕನಸು ಬಾಳ ಕಹಿಯ ಮರೆಸಿದ ಹಾಗೆ
ನೋವ ನುಂಗಿ ನಗುವ ಧರಿಸಿ ಬಾಳುವ ಹಾಗೆ
ಸುಖ ಕನಸಿನಂತೆ ನೋವು ನೆರಳಿನಂತೆ
ಪ್ರೀತಿ ಬಯಸಿ ಎಲ್ಲವ ಮರೆತು ಮತ್ತೆ ನಗುವಂತೆ
0 ಪ್ರತಿಕ್ರಿಯೆಗಳು