ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೇವು ಶಿರಮಳ್ಳಿ ಕವಿತೆ- ಆನ್ಲೈನ್ ತರಗತಿ 

 ಡಾ. ದೇವು ಶಿರಮಳ್ಳಿ

ಇಣುಕು ಒಮ್ಮೆ
ಆನ್ಲೈನ್ ಕಿಟಕಿಯೋ?
ಬಾಗಿಲೋ? ಸುಮ್ಮನೆ ಇಣುಕು
ಒಳಗೆ ಬಹಳವೇ ಕತ್ತಲೆ
ನಮ್ಮ ಕಣ್ಣುಗಳು ಹೊಸತರವು
ಈ ಕಿಟಕಿ ಬಾಗಿಲುಗಳಿಗೆ
ತಡವಾಗಿಯಾದರೂ ಕತ್ತಲೆ
ಹರಿದೀತು

ಇಷ್ಟವಿಲ್ಲ ನನ್ನಿಂದಾಗದು
ಇತ್ಯಾದಿಗಳು ಬೇಡ ಎಲ್ಲವೂ
ನಿನ್ನಿಷ್ಟದಂತೆ ಎಲ್ಲ ಕಾಲದಲ್ಲೂ ಇರುವುದಿಲ್ಲ
ನಾಳೆಗಳು ಹಾಗೆ

ಅವರೆಲ್ಲ ಓಡುವಾಗ
ನಾವು ಕುಂಟುವುದಾದರೂ
ಬೇಡವೇ
ಈ ಕಾಲಕ್ಕೆ ಒಂದಿಷ್ಟು ಪ್ರಶ್ನೆಗಳು
ಕುತೂಹಲಗಳು ಬೇಕು

ಹೆಚ್ಚಿಗೆ ತಾಳ್ಮೆ ಬೇಕಂತೆ
ಹಕ್ಕಿಪುಕ್ಕದಂತ ಸ್ಪರ್ಶ ಬೇಕಂತೆ
ಏನು ಮಾಡುವುದು?
ತಾಳ್ಮೆ ಇರದ ನನ್ನ ಕೈ
ಕುಟುಕಿಗೆ ನನ್ನ ಕೀಲಿಮಣೆಯ
ಕೀಯೊಂದು ಕೆಲಸಕ್ಕೆ
ರಾಜೀನಾಮೆ ನೀಡಿದೆ
ಆಘಾತವೆನಿಲ್ಲ ರಿಪೇರಿ
ಮಾಡಿಸಿದರೆ ಆಯಿತು
ನಮ್ಮದೇ ಕಾಸಿನಲ್ಲಿ!

ಏನುಂಟು ಏನಿಲ್ಲ
ಎಲ್ಲ ರಂಗು ರಂಗಿನ ಲೋಕ
ನಿನಗೆ ಬೇಕಿದ್ದಲ್ಲಿ ಕಣ್ಣುಹೊರಳಿಸು
ಬೇಕಿದ್ದಷ್ಟೆ ಕಣ್ಣು ಅರಳಿಸು
ಮಾರುಕಟ್ಟೆಯಲ್ಲಿ
ಕಳೆದು ಹೋಗುವುದು ಬೇಡ
ಮರಳಿ ಪುಸ್ತಕಕ್ಕೆ ಬಂದು ಬಿಡು

‍ಲೇಖಕರು nalike

3 August, 2020

1 Comment

  1. Venue Jalibenchi

    ತಾಳ್ಮೆ ಇರದ ನನ್ನ ಕೈ
    ಕುಟುಕಿಗೆ ನನ್ನ ಕೀಲಿಮಣೆಯ
    ಕೀಯೊಂದು ಕೆಲಸಕ್ಕೆ
    ರಾಜೀನಾಮೆ ನೀಡಿದೆ ಈ ಸಾಲು ಬಹು ಚರ್ಚಿತ ಆನ್ ಲೈನ್ ತರಗತಿಯ ಸಮಸ್ಯೆಯ ಕಡೆಗೆ ಬೊಟ್ಟು ಮಾಡುತಿದ್ದರೆ

    ಏನುಂಟು ಏನಿಲ್ಲ
    ಎಲ್ಲ ರಂಗು ರಂಗಿನ ಲೋಕ
    ನಿನಗೆ ಬೇಕಿದ್ದಲ್ಲಿ ಕಣ್ಣುಹೊರಳಿಸು
    ಬೇಕಿದ್ದಷ್ಟೆ ಕಣ್ಣು ಅರಳಿಸು
    ಮಾರುಕಟ್ಟೆಯಲ್ಲಿ
    ಕಳೆದು ಹೋಗುವುದು ಬೇಡ
    ಮರಳಿ ಪುಸ್ತಕಕ್ಕೆ ಬಂದು ಬಿಡು ಈ ಸಾಲಿನಲ್ಲಿ ಕವಿಗಳು ಆ ಸಮಸ್ಯೆಗೆ ಮರಳಿ ಪುಸ್ತಕಗಳ ಕಡೆಗೆ ಹೊರಳುವುದೇ ಜೀವಂತ ಕಲಿಕೆಗೆ ಇರುವ ನಿಜದಾರಿ ಎಂದು ಸಮಾಧಾನ ಹೇಳಿರುವುದು ಸರಿಯಾಗಿಯೇ ಇದೆ.ನಾವು ಎಷ್ಟೇ ಆಧುನಿಕರಾದರೂ ಜೀವಂತಿಕೆಯನ್ನು ಕಳೆದುಕೊಳ್ಳಬೇಕೆ? ಎಂಬ ಪ್ರಶ್ನೆ ಎಲ್ಲ ಕಾಲಕ್ಕೂ ಪ್ರಸ್ತುತ…. ಉತ್ತಮ ಆಲೋಚನಾ ಭರಿತ ಕವನ ಅಭಿನಂದನೆಗಳು…..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading