ದಿಕ್ಕು ಕಾಣದೇ ನಿಂತಿಹನು..

ಶ್ರವಣ ಗೌತಮ

 ಡಾ.ಸುಜಾತಾ.ಸಿ.

ದಿಕ್ಕು ಕಾಣದೇ ನಿಂತಿಹನು
ಎಲ್ಲೆ ಮಿರಿದ ತವಕಕ್ಕೆ
ಈಡೀ ನಿಸರ್ಗವೇ
ಬೆರಗಾಗಿ ನೋಡುತಲಿತ್ತು ಅವನತ್ತ

ಪಕ್ಷಿಗಳು ಕೇಳುತಿಹವು
ಯಾಕೆ ಈ ಮೌನ ದೊರೆಯೇ
ಪ್ರಾಣಿಗಳು ಮೂಕವಿಸ್ಮಿತರಾಗಿ
ನೋಡುತ್ತಿರುವವು ಅವನನ್ನೇ

ಗಿಡ ಮರಗಳು ತಲೆಬಾಗಿ
ಸ್ವಾಗತಿಸುತಿಹರು ಜಗದ ಅಂಧಕಾರವನು
ನಿಗಿಸಲು ಹೊರಟ
ಕರುಣಾಮಯಿ ತಥಾಗತನನ್ನು

ಅತ್ತ ಕೊಲಿಯಾ
ಇತ್ತ ಕಪಿಲವಸ್ತು
ಮಧ್ಯೆ ಕೇಕೆಯ ಅಟ್ಟಹಾಸ
ಯುದ್ಧಗಳ ಭೀಕರತೆಯ
ನಡುವೆ ಸಿಕ್ಕ ಹೆಣದ ರಾಶಿಯ ಆಕ್ರಂದನ

ಶಾಕ್ಯ ವಂಶವೇ
ಕಣ್ಣೀರಿನ ಮಡುವಿನಲ್ಲಿ ಮಿಂದಿರಲು
ಕೊಲಿಯಾ ಕಪಿಲ ವಸ್ತುಗಳ ಮಧ್ಯೆ
ನಿರಾಭರಣನಾಗಿ ನಿಂತ ಗೌತಮ ಸಿದ್ಧಾರ್ಥ
ಪರಿವ್ರಾಜಕನಾಗಲು

ರೋಹಿಣಿ ಮೌನವಾಗಿ ಅಳುತ್ತಿರುವಳು
ಬಿಸಿ ಅಪ್ಪುಗೆಯ ಆಲಿಂಗನಕ್ಕಾಗಿ
ಜಲ-ಚರಗಳ ಬೇಟೆಯ ಸದ್ದಿಗಾಗಿ
ನೆರೆ-ತೊರೆಯ ಭೀತಿಗಾಗಿ

ನೋಡುತಲಿದ್ದಾನೆ ಶಾಂತಪ್ರಿಯ ಕಂಗಾಲಾಗಿ
ದೇಹವೇ ಇಲ್ಲದ ರುಂಡ-ಮುಂಡಗಳು
ಮೌನದಲ್ಲೆ ಸಿದ್ಧಾರ್ಥನ ನಿದ್ದೆಗೆಡಿಸಿದ್ದಕ್ಕಾಗಿ
ರೋಹಿಣಿ ನಡುವಿನ ಯುದ್ಧಕ್ಕಾಗಿ
ಕೋಲಾಹಲವೆದ್ದ ಭ್ರಮೆಗಾಗಿ

ಶಾಕ್ಯ ದೊರೆಯ ವಂಶಜನಾಗಿ
ಮಹಾಮಾಯೆಯ ಕಂದನಾಗಿ
ಪ್ರಿಯ ಆನಂದನ ಸಹೋದರನಾಗಿ
ಯಶೋಧರೆಯ ಪ್ರಿಯಕರನಾಗಿ
ರಾಹುಲನ ಜನ್ಮದಾತನಾಗಿ

ಕೊಟ್ಟ ಮಾತಿಗೆ ಅಣಿಯಾಗಿ
ದಾಯಾದಿಗಳ ಕಣ್ಣೀರೊರಿಸಲು
ಹೊರಟೆ ಬಿಟ್ಟ ಗೌತಮ
ಸಂಸಾರದ ಹಂಗು ತೊರೆದು
ಶಾಂತ ಭಿಕ್ಷುವಾಗಿ

ಯುದ್ಧ ಮಾಡಲಾರೆನು ಕತ್ತಿ ಹಿಡಿಯಲಾರೆನು
ಜೀವ ತೆಗೆವ ಹೇಯ ಕೃತ್ಯಕ್ಕೆ ಹೊಣೆಯಾಗಲಾರೆನು
ಪ್ರಾಣ ಹಿಂಡುವ ಹಿಂಸೆ ಮಾಡಲಾರೆನು
ಕತ್ತಿ ಭರ್ಜಿಗಳ ಸಹವಾಸ ಬೇಡ ಎನಗೆ
ಶಾಂತಿ ಬೇಕು ಎನಗೆ ನಮ್ಮವರಿಗಾಗಿ

ಮಾಯೆ ಮಮಕಾರ ತೊರೆದು ಸಾಗುವೆ
ಬುದ್ಧನಾಗಿ ಬದ್ಧತೆಯ ಧಮ್ಮಕ್ಕಾಗಿ
ಎಲ್ಲರ ಸುಖಃ ಶಾಂತಿಗಾಗಿ
ಬಹುಜನ ಹಿತಾಯ ಬಹುಜನ ಸುಖಾಃಯವೇ
ಕೊನೆಯುಸಿರಾಗಿ ಹೊರೆಟೆ ಬಿಟ್ಟ ಮೌನಪ್ರಿಯ
ಶ್ರವಣಗೌತಮ ಶಾಂತ ಬುದ್ಧನಾಗಲು

‍ಲೇಖಕರು nalike

May 15, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: