ತನ್ನ ಒಗಟಿಗೆ ತಾನೇ ಉತ್ತರ ಕೊಡುವಂತೆ..

ಹಾಡು
ಶರದ ಸೌಕೂರ
ನಸುಕು ಹರಿಯುವ ಮೊದಲು
ಕತ್ತಲ ಪೊದೆಯೊಳಗಿಂದ
ಏನು ಕೇಳುತ್ತದೆ ಈ ಪುಟಾಣಿಹಕ್ಕಿ
ಮತ್ತೆ ಮತ್ತೆ?
ಕೆಲವೊಮ್ಮೆ ಧಾಟಿ ಬದಲಿಸಿ
ಮತ್ತೇನನ್ನೋ ಉಲಿಯುತ್ತದೆ
ತನ್ನ ಒಗಟಿಗೆ ತಾನೇ
ಉತ್ತರ ಕೊಡುವಂತೆ.
ದಿನವಿಡೀ ದಿವ್ಯ ಮೌನಧರಿಸಿ
ಅದೃಶ್ಯವಾಗಿಬಿಡುವ ಈ ಹಕ್ಕಿಯ
ಹಾಡು ಮತ್ತೆ ಬೇಕೆಂದರೆ
ಕಾಯಬೇಕು ಇನ್ನೊಂದು ನಸುಕಿಗೆ.

ನೆನಪು

ಹಲವು ವರ್ಷದ ಬಳಿಕ
ನೆಚ್ಚಿನ ಪ್ರೊಫೆಸರರನ್ನು ಕಾಣಲೆಂದು
ಮನೆ ಹುಡುಕಿ ಹೊರಟೆ
ಕೈಯಲ್ಲಿ ಹಣ್ಣು ಹಿಡಿದು.
ತೊಂಬತ್ತರ ಅಂಚಿನಲ್ಲಿ
ಗಾಲಿಖುರ್ಚಿಯ ಮೇಲೆ
ಕಳಿತ ಹಣ್ಣಿನಂತೆ ಕುಳಿತಿದ್ದರು.
ನೆನಪು ಕೆದಕಲೆಂಬಂತೆ ನುಡಿದೆ:
“ನಾನು ನಿಮ್ಮ ವಿದ್ಯಾರ್ಥಿ, ಸರ್”
ಅವರು ಕಣ್ಣರಳಿಸಿ ತುಂಟನಗೆಯೊಂದಿಗೆ
ಅಕ್ಕರೆಯಿಂದ ಕೇಳಿದರು:
“ವಾಟ್ ಈಸ್ ಯುವರ್ ರೋಲ್ ನಂಬರ್?”
ಬಳಿಕ ನಾವಿಬ್ಬರೂ ಮಾತಿಲ್ಲದೆ
ಕಿಡಕಿಯಾಚೆಯ ಗಿಡಮರಗಳ
ಸಂಜೆ ಬಿಸಿಲಿನ ಜೊತೆಯ
ಕಣ್ಣಾಮುಚ್ಚಾಲೆ ನೋಡುತ್ತ
ಕುಳಿತಿರಬೇಕು.

‍ಲೇಖಕರು nalike

May 15, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: