ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದಯಮಾಡಿ ಮತ್ತೆ ನಮ್ಮನ್ನ ಮರಿಬ್ಯಾಡ್ರಣ್ಣ..!

ವಿಶಾಲ್ ಮ್ಯಾಸರ್

**

ಅಲ್ಲಿ

ನಿಮ್ ತಾತುಂದು 

ದ್ವಾಡ್  ಮೂರ್ತಿ ನಿಲ್ಸೀವಿ

ಇಲ್ಲಿ ಇಲ್ಲೇ

ನಿಮ್ ತಾತ ನಡೆದಾನಲ್ಲ 

ಬಂಗಾರದ ಟಾರು ಹಾಕಿಸೀವಿ 

ಅಲ್ನೋಡಿ

ನಿಮ್ ತಾತ ನಮ್ಮುನ್ನೆಲ್ಲ ಒದ್ದು ಹೋದರು

ಅದರ ಗುರುತಿಗೆ ಒಂದು ಊರನ್ನೇ ಕಟ್ಟೀವಿ 

ಬನ್ನಿ ಬನ್ನಿ 

ಅಗೋ ಕಂಕುಳದಲ್ಲಿ ಇಟ್ಕಂಡ ಬುಕ್ಕಾ ಮಾತ್ರ ಮುಟ್ಬ್ಯಾಡಿ ಅದು ಮ್ಯಾಲೈತೆ 

ಇಷ್ಟುದ್ದ ನಿಂತಾನ ಇಲ್ಲೇ ಕಾಲಿಗೆ ಎರಗಿ

ಬನ್ರಪ್ಪ ಬನ್ರೋ

ಆತ ಹುಟ್ಟಿದ

ನಡೆದ ಹಾದ್ಯಾಗೆಲ 

ರೋವಸ್ಟು ಹೊತ್ತು ಇದ್ದು 

ಮನಗಿ ಹಾಯಾಗಿ

ದಯಮಾಡಿ ಆತನಂಗೆ ನಡೆದು ತ್ರಾಸು ತಗಬ್ಯಾಡ್ರಿ 

ಅಲ್ಲಾ ಕಣ್ರಣ್ಣ

ಆತನು ಒದ್ದ ಅಂತೇಳಿ ನೀವು ವದಿ ಬ್ಯಾಡ್ರಪ್ಪ ಬೇಕಾರೆ ಆ

ಕತೇನ ಇನ್ನು ಚಂದ್ವಾಗಿ ಹೇಳ್ತೀವಿ ಕುಂತ್ಗಂಡು ಕೇಳಿ

**

ಕೇಳಿದ್ದಾಯಿತು, ಕುಂತಿದ್ದಾಯಿತು, ಮನಗಿ ಎರಗಿದ್ದಾಯಿತು

ನೀವೇನು ಅನ್ಕಂಡಿಲ್ಲ ಅಂದ್ರೆ

ಒಂದ್ ಮಾತು ಹೇಳ್ತೀನಿ ಕೊನೆಗೆ

ದಯಮಾಡಿ ಮತ್ತೆ ನಮ್ಮನ್ನ ಮರಿಬ್ಯಾಡ್ರಣ್ಣ..!

‍ಲೇಖಕರು Admin MM

23 April, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading