ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತನ್ನ ನೆನಪಿನ ಗಿಡಕ್ಕೆ ಹೂಬಿಟ್ಟ ಸುದ್ದಿ..

ಅವಳ ಗಂಡ

Renuka ramanand

ರೇಣುಕಾ ರಮಾನಂದ್ 

ಮುಖಪುಟ ಚಿತ್ರ : ಶಿವಶಂಕರ ಬಣಗಾರ್

ಹಳೆಗೆಳೆಯನ ನೆನಪಿಗೆ
ಉತ್ತು ಬಿತ್ತದ ಹೊಲದಲ್ಲೊಂದು
ಪುಟ್ಟ ಮಾವಿನ ಸಸಿ ನೆಟ್ಟೆ
ಮೂರೇ ವಷ೯ಕ್ಕೆ ಫಲವೆಂದು
ಮಾರಿ ಹೋದವನ ಮಾತುಳಿಸಲೆಂಬಂತೆ
ಭತಿ೯ ಅಷ್ಟೇ ದಿನಕ್ಕೆ
ಹೂ ಬಿಟ್ಟು
ಘಮಘಮಿಸಿತು ಗಿಡ
ಮರಿದುಂಬಿ ಕಿರಿದುಂಬಿ
ಹೆದ್ದುಂಬಿಗಳ ಜಾತ್ರೆಗೆ
ಬೆಚ್ಚಿಬಿದ್ದವು ಸುತ್ತಲಿನ
ಬಂಜರು ಗಿಡಮರ

colorful treeತಡವಾಗಿಯಾದರೂ
ತಲುಪಿತ್ತು ಹುಡುಗನಿಗೆ
ತನ್ನ ನೆನಪಿನ ಗಿಡಕ್ಕೆ
ಹೂಬಿಟ್ಟ ಸುದ್ದಿ
ಪುರುಸೊತ್ತು ಮಾಡಿಕೊಂಡು
ಹೆಂಡಿರು ಮಕ್ಕಳೊಂದಿಗೆ
ಅವ ಬರುವುದರೊಳಗೆ
ಮಿಡಿಮಾವುಗಳ ಸಂತೆ
ಗಿಡದ ತುಂಬ

ಸುತ್ತಿದರು ಎಲ್ಲರೂ
ಸುಡುವ ಮೊದಲು
ಸಿಂಗರಿದ ಹೆಣಕ್ಕೆ
ಅಂತಿಮ ಸಲಾಮು ಸಲ್ಲಿಸುವವರಂತೆ
ಮಿಡಿ ಮುರಿದು ಸೊನೆಗೆ
ಕಡ್ಡಿ ಗೀರಿದರು
ಉಗುರು ಕಪ್ಪಿಸಿ ನೋಡಿದರು
ಉಪ್ಪಿನಕಾಯಿಗೆ ಯೋಗ್ಯವೋ
ಹಣ್ಣಿಗೋ
ಕುದಿಸಿ ಜಾಡಿಗೆ ತುಂಬಿಡುವ
ಕುಸುರುಗಾಯಿಗೋ….

ಕಟ್ಟಿತ್ತು ನನ್ನ ಬಾಯಿ
ಶಿಲೆಯಾಗಿತ್ತು ದೇಹ
ಉಗುರು ಕಪ್ಪಿಸಿ ಚಮ೯ದ
ಪೆಡಸು ಪರಿಶೀಲಿಸುವಾಗ
ಸೊನೆಗೆ ಕಡ್ಡಿಗೀರುವಾಗ
ಇಂದೇ ಕೊಯ್ದರೆ
ಉಪ್ಪಿನಕಾಯಿಗೆ ಹದವೆಂಬ
ಒಕ್ಕೊರಲಿನ ಒಮ್ಮತಕ್ಕೆ
ತುಂಬು ಬಸುರಿ ಗಿಡದ
ಹೀಚುಗಾಯನ್ನೆಲ್ಲ ಕೊಯ್ದು
ಚೀಲ ತುಂಬುವಾಗ

ನಿಮಗೇ ತಿಳಿದಿರುವಂತೆ
ಅದು ಅವನದೇ ನೆನಪಿನ ಗಿಡ
ಹಕ್ಕುಂಟು ಅವನಿಗೆ
ಉಗುರು ಕಪ್ಪಿಸಲು
ಕಡ್ಡಿ ಗೀರಲು
ಪೆಡಸು ಪರಿಶೀಲಿಸಲು
ಕೊನೆಗೊಮ್ಮೆ
ಮಿಡಿಗಾಯಿ ಹರಿದು
ಚೀಲ ತುಂಬಲು

ನಿನ್ನ ಹಿಮ್ಮಡಿಯ ಬಿರುಕಿನಲ್ಲೂ
ಅದ್ಭುತ ಸೌಂದಯ೯ವಿದೆ ಎನ್ನುತ್ತಿದ್ದ
ಅವನೀಗ
ಅವಳ ಗಂಡ.

 

‍ಲೇಖಕರು admin

20 April, 2016

8 Comments

  1. lalitha sid

    ರೇಣುಕಾ ,, ಕವಿತೆ ಬಹಳ ಇಷ್ಟ ಆಯ್ತ 🙂

    • Renuka ramananda

      ಜೈ ಮುರಿಗೆಮ್ಮ…ಅಕ್ಕಾ ನಾ ನಿಮ್ಮ ಕವಿತೆಗಳ ಭಕ್ತೆ

  2. lalitha sid

    ರೇಣುಕಾ ,, ಕವಿತೆ ಬಹಳ ಇಷ್ಟ ಆಯ್ತ 🙂

    • Renuka ramananda

      ಜೈ ಮುರಿಗೆಮ್ಮ…ಅಕ್ಕಾ ನಾ ನಿಮ್ಮ ಕವಿತೆಗಳ ಭಕ್ತೆ

  3. savitharavishankar

    ವಿಚಿತ್ರ ಸಂಕಟ, ತಳಮಳ. ಪುರುಷ ಮಣಿಯ ಉಸಿರಿಗೆ ಹೃದಯವೇ ಸ್ಥಬ್ದ ಗೆಳತಿ. Beautiful.

    • Renuka ramananda

      ಸವಿತಾ ಮ್ಯಡಮ್ ತುಂಬ ಖುಷಿ

  4. savitharavishankar

    ವಿಚಿತ್ರ ಸಂಕಟ, ತಳಮಳ. ಪುರುಷ ಮಣಿಯ ಉಸಿರಿಗೆ ಹೃದಯವೇ ಸ್ಥಬ್ದ ಗೆಳತಿ. Beautiful.

    • Renuka ramananda

      ಸವಿತಾ ಮ್ಯಡಮ್ ತುಂಬ ಖುಷಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading