ಡೊಡೊ ಹಕ್ಕಿಯೂ ಜಹಾಂಗೀರ್ ಸಾಮ್ರಾಟನೂ

ಪರಮೇಶ್ವರ ಗುರುಸ್ವಾಮಿ

ಭಾರತದ ಕಲೆಗೆ ಅದರಲ್ಲೂ ಚಿತ್ರಕಲೆಗೆ ಮೊಘಲ್ ಆಡಳಿತದ ಕೊಡುಗೆ ಬಹಳ. ಅದುವರೆಗೂ ಕಲೆ ಮತ್ತು ಸಾಹಿತ್ಯಗಳು ಧರ್ಮದ ಚೌಕಟ್ಟಿನೊಳಗೇ ಇದ್ದುವು. ಅಕ್ಬರ್, ರಾಮಾಯಣ ಮತ್ತು ಮಹಾಭಾರತಗಳನ್ನು, “ಈ ಗ್ರಂಥಗಳು ಜ್ಞಾನದ ಆಕರಗಳು. ಎಲ್ಲರೂ ತಿಳಿದುಕೊಳ್ಳ ಬೇಕು” ಎಂದು ಪರ್ಷಿಯನ್ ಭಾಷೆಗೆ ಅನುವಾದ ಮಾಡಿಸಿದ. ಹಸ್ತಪ್ರತಿಗಳಲ್ಲಿ illustrationಗಳಾಗಿ ಭಾರತೀಯ ಮತ್ತು ಪರ್ಷಿಯನ್ ಮಿಶ್ರ ಹೊಸ ಶೈಲಿಯಲ್ಲಿ miniature ಚಿತ್ರಗಳನ್ನು ಅವನ ಕಲಾವಿದರು ರಚಿಸಿದರು.( ಸರಿಸುಮಾರು ಅದೇ ಕಾಲದಲ್ಲಿ ಬಿಜಾಪುರದ ಇಬ್ರಾಹಿಂ ಷಾಹಿ ಭಾರತೀಯ ಗ್ರಂಥಗಳನ್ನು ಆಳವಾಗಿ ಅಧ್ಯಯನ ಮಾಡಿಕೊಂಡು ತನ್ನ ಗ್ರಂಥದಲ್ಲಿ ಸರಸ್ವತಿ ತನ್ನ ತಾಯಿ ಗಣಪತಿ ತನ್ನ ತಂದೆಗೆ ಸಮಾನರು ಎಂದು ನಮಿಸಿದ್ದಾನೆ.)

ಮೊಘಲ್ ಸಾಮ್ರಾಟರಲ್ಲಿ ಒಬ್ಬನಾದ ಜಹಾಂಗೀರ್ ಪ್ರಕೃತಿಯ ಸೂಕ್ಷ್ಮ ವೀಕ್ಷಕನಾಗಿದ್ದ. ಎಷ್ಟರ ಮಟ್ಟಿಗೆಂದರೆ ಮೊದಲ ಸಲ ಝೀಬ್ರಾವನ್ನು ನೋಡಿದಾಗ ಕಾಡುಗತ್ತೆಗೆ ಬಣ್ಣ ಬಳಿದಿದ್ದಾರೆಯೇ ಎಂದು ಪರೀಕ್ಷಿಸಿದ್ದ. ಪ್ರಾಣಿ ಪಕ್ಷಿಗಳ ಕುರಿತ ಅವನ ಟಿಪ್ಪಣಿಗಳು ಇಂದಿಗೂ ಪ್ರಸ್ತುತ.
ವಸಾಹತುಪೂರ್ವ ನಮ್ಮ ದೃಶ್ಯ ಸಂಸ್ಕೃತಿ ಬಗೆಗಿನ ನನ್ನ ಕುತೂಹಲ ಮರಳಿ ಆನಂದ್ ಕೆಂಟಿಶ್ ಕೂಮಾರಸ್ವಾಮಿಯವರ ಬಳಿಗೆ, ನಮ್ಮ ಪುರಾತನ ಶಿಲ್ಪ, ಚಿತ್ರ ಪರಂಪರೆಗೆ ಕರೆದೊಯ್ದಿತು. ಆ ಪಯಣದಲ್ಲಿ ಇಲ್ಲಿ ಹಾಕಿರುವ paintingನ ಪ್ರತಿ ಸಿಕ್ಕಿತ್ತು.

ಮಧ್ಯದಲ್ಲಿ ಚಿತ್ರಿಸಿರುವುದೇ 1681ಕ್ಕೆ ನಾಮಾವಶೇಷವಾದ ಡೊಡೊ ಪಕ್ಷಿ. ಕಲಾವಿದರು ಕಣ್ಣಾರೆ ಕಂಡು ರಚಿಸಿರುವ ಡೊಡೊ ಪಕ್ಷಿಯ ಚಿತ್ರಗಳು ಈಗ ಎರಡು ಮಾತ್ರ ಲಭ್ಯ. 1626-28ರಲ್ಲಿ ರಚಿತವಾಗಿರುವ ಅವೆರಡರಲ್ಲಿ ಒಂದು ಈ ಚಿತ್ರ. ಜಹಾಂಗೀರನ ಆಸ್ಥಾನ ಕಲಾವಿದರಾದ ಮನ್ಸೂರ್ ಅಥವಾ ಬಖೀರ್ ಅಥವಾ ಇಬ್ಬರೂ ಸೇರಿ ರಚಿಸಿರಬಹುದಾದ ಈ ಚಿತ್ರ 26 ಸೆಂ.ಮೀ ಎತ್ತರ 15.3 ಸೆಂ.ಮೀ ಅಗಲ ಇದೆ. ರಷ್ಯಾದ ಸೇಂಟ್ ಪೀಟರ್ಸ್ಬಬರ್ಗ್ ನಲ್ಲಿ ಪೌರಾತ್ಯ ಅಧ್ಯಯನ ಸಂಸ್ಥೆಯ ಲೈಬ್ರರಿಯಲ್ಲಿದೆ.
ಇದರಲ್ಲಿ ಚಿತ್ರಿತವಾಗಿರುವ ಡೊಡೊ ರಚನೆಯ ಬಗ್ಗೆ ನಮ್ಮ ಪಕ್ಷಿತಜ್ಞ ಸಲೀಂ ಅಲಿ ಮತ್ತು ಇತರ ತಜ್ಞರು “ವೈಜ್ಞಾನಿಕವಾಗಿ ಕರಾರುವಾಕ್ಕಾಗಿದೆ” ಎಂದಿದ್ದಾರೆ. ಈ ಕರಾರುವಾಕ್ ತನ ಉಳಿದ ಪಕ್ಷಿಗಳಿಗಳ ರಚನೆಗೂ ಅನ್ವಯಿಸುತ್ತದೆ.
ಎಡ ಮೇಲ್ತುದಿಯಲ್ಲಿರುವುದು ಭಾರತದಲ್ಲಿ ಕಂಡುಬರದ ‘ನೀಲಿ ತಲೆಯ ಗಿಣಿ’. ಇದು ಥಾಯ್ ಲ್ಯಾಂಡ್, ಮಲೇಶಿಯಾ, ಸಿಂಗಪುರ, ಬೋರ್ನಿಯೋ ಮತ್ತು ಸುಮಾತ್ರದಲ್ಲಿ ಮಾತ್ರ ಕಂಡು ಬರುವ ಪ್ರಬೇಧ. ಬಲ ಮೇಲ್ತುದಿಯಲ್ಲಿರುವುದು ‘ಗೌಜಿಗ’ ಜಾತಿಗೆ ಸೇರಿದ ಒಂದು ಪ್ರಬೇಧ. ಪಶ್ಚಿಮ ಹಿಮಾಲಯದಲ್ಲಿ ಮಾತ್ರ ಕಂಡುಬರುವ ಪಕ್ಷಿ. ಗಂಡು ಪಕ್ಷಿ. ಹೆಣ್ಣನ್ನು ಆಕರ್ಷಿಸಲು ನುಗ್ಗುವ ಅದರ ಭಂಗಿಯ ಒಂದು ಕ್ಷಣವನ್ನು ಕಲಾವಿದ ಚಿತ್ರಿಸಿದ್ದಾನೆ. ಎಡ ಕೆಳತುದಿಯಲ್ಲಿ ಬಾತುಕೋಳಿ ಜಾತಿಯ ಉತ್ತರ ಭಾರತಕ್ಕೆ ಚಳಿಗಾಲದಲ್ಲಿ ವಲಸೆ ಬರುವ ಒಂದು ಪ್ರಬೇಧದ ಜೋಡಿ ಹಕ್ಕಿಗಳು. ಬಲ ಕೆಳತುದಿಯಲ್ಲಿ ಗೌಜಿಗ ಹಕ್ಕಿಯ ಒಂದು ಪ್ರಬೇಧದ ಜೋಡಿಯನ್ನು ಚಿತ್ರಿಸಲಾಗಿದೆ. ಹೆಣ್ಣು ಕ್ರಿಮಿ ಹಿಡಿಯುತ್ತಿದ್ದರೆ ಗಂಡು ಏನನ್ನೊ ನಿರುಕಿಸುತ್ತಿದೆ
 

‍ಲೇಖಕರು G

October 14, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: