ಡಾ.ಬ್ರಹ್ಮಾನಂದ ನಾಯಕ್ ಬೆಂಗಳೂರಿನ ಅತ್ಯುತ್ತಮ ಆಯುರ್ವೇದ ವೈದ್ಯರು.
ಜೊತೆಗೆ ಅವರು ಉತ್ಸಾಹಭರಿತ ಲೇಖಕರು, ಆರೋಗ್ಯ ರಕ್ಷಣಾ ತಂತ್ರಜ್ಞರು ಮತ್ತು ದಾರ್ಶನಿಕರು.
ಡಾ. ನಾಯಕ್ 1994 ರಲ್ಲಿ ಬೆಳಗಾವಿಯ ಕೆಎಲ್‌ಇ’ಎಸ್ ಬಿಎಂಕೆ ಆಯುರ್ವೇದ ಮಹಾವಿದ್ಯಾಲಯದಿಂದ ಬಿಎಎಂಎಸ್ ಮತ್ತು 1998 ರಲ್ಲಿ ಬೆಂಗಳೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನಿಂದ ಎಂಡಿ (ಆಯುರ್ವೇದ) ಪದವಿ ಪಡೆದರು.
ಬೆಂಗಳೂರಿನ ಅತ್ಯಂತ ಯಶಸ್ವಿ ಆಯುರ್ವೇದ ಅಂಗಡಿಗಳ ಸರಪಳಿಯಾದ ಆಯುರ್ ಸೆಂಟ್ರಲ್ ಅನ್ನು ಸಹ-ಸ್ಥಾಪಿಸಿದರು.
ಇದೀಗ ‘ಅವಧಿ’ಯಲ್ಲಿ ‘ಕಾಂಗರೂ ನಾಡಿನಲ್ಲಿ’ ಶೀರ್ಷಿಕೆಯ ಹೊಸ ಸರಣಿಯೊಂದಿಗೆ ಬರುತ್ತಿದ್ದಾರೆ.
ಸರಣಿ – 8
ಫೋಟೋ ಕೃಪೆ : ಪ್ರವೀಣ್ ಮೂರ್ತಿ
Melbourneನ Queen Victoria Marketನಲ್ಲಿ ಮೊದಲಿಗೆ ಕಣ್ಣಿಗೆ ಬೀಳುವುದು ಬಣ್ಣ. ಹಣ್ಣುಗಳ ಬಣ್ಣ. Cheeseಗಳ ಬಣ್ಣ. Coffee cups ಹಿಡಿದು ಓಡಾಡುವ ಜನರ ಬಣ್ಣ. ವಿವಿಧ ಭಾಷೆಗಳ ಶಬ್ದ. Tram bell ದೂರದಲ್ಲಿ ಕೇಳುತ್ತದೆ. ಚಳಿ ಗಾಳಿ shed ಒಳಗೆ ನುಗ್ಗುತ್ತದೆ. ಆದರೆ ಇವೆಲ್ಲದರ ಮಧ್ಯೆ ನನಗೆ ಹೆಚ್ಚು ನೆನಪಿನಲ್ಲಿ ಉಳಿದದ್ದು ಒಂದು ಬಿಸಿ ಕಾಗದದ cup.
“Try this,” ಎಂದು ನೈನಾ ಕೈಗೆ ಕೊಟ್ಟಳು.
ಅದರೊಳಗೆ ಉದ್ದವಾದ, ದಪ್ಪವಾದ, ಬಿಸಿ sticks ಇದ್ದವು. ಮೇಲೆ cinnamon ಮಿಶ್ರಿತ ಸಕ್ಕರೆ ಪುಡಿ. ಮೊದಲ ನೋಟಕ್ಕೆ ಅದು snack ಅನ್ನಿಸಲಿಲ್ಲ. ಯಾರೋ ಚಕ್ಕುಲಿಯನ್ನು ತೆಗೆದು ಅದರ geometry ಬದಲಿಸಿದಂತೆ ಅನ್ನಿಸಿತು. ನಾನು ಮತ್ತು ರಂಜನಾ ಒಬ್ಬರ ಮುಖ ಒಬ್ಬರು ನೋಡಿಕೊಂಡೆವು.
“ಇದೇನು?”
“Churros.”
ಮೊದಲ biteನಲ್ಲಿ ಮೆದುಳು ಸ್ವಲ್ಪ ಗೊಂದಲಕ್ಕೊಳಗಾಯಿತು. ಹೊರಗೆ crisp. ಒಳಗೆ ಮೃದು. ಒಳಗಿನಿಂದ ಬಿಸಿ ಆವಿ. ಸಕ್ಕರೆ ಪುಡಿ ಕೈಗೆ ಬೀಳುತ್ತದೆ. ಕಚ್ಚುವಾಗ ಸಣ್ಣ ಶಬ್ದ. ನಂತರ softness.
ಕೈಯಲ್ಲಿ churros ಇತ್ತು. ತಲೆಯಲ್ಲಿ ಚಕ್ಕುಲಿ ಇತ್ತು. ಎರಡೂ ಒಂದೇ ಅಲ್ಲ ಎನ್ನುವುದು ಮಾತ್ರ ಸ್ಪಷ್ಟವಾಗಿತ್ತು.
ಕೆಲವು ಆಹಾರಗಳು ತಿನ್ನುವ ಮೊದಲೇ ಅರ್ಥವಾಗುತ್ತವೆ. ಕೆಲವು ಆಹಾರಗಳು comparison ಬೇಡಿಕೊಳ್ಳುತ್ತವೆ. Churros ಎರಡನೆಯ category.

ನನಗೆ ಚಕ್ಕುಲಿ ನೆನಪಾಯಿತು. ಆದರೆ ಅದು ಚಕ್ಕುಲಿ ಅಲ್ಲ. ಅದು festival snack ಅಲ್ಲ. ಅದು steel ಡಬ್ಬದ ವಾಸನೆ ಅಲ್ಲ. ಅದು ಗಣೇಶ ಚೌತಿ ಮಧ್ಯಾಹ್ನ ಅಲ್ಲ. ಇದು ಬೇರೆ ದೇಶದ ಕಥೆ.
Churros ಬಗ್ಗೆ funny history ಇದೆ. ಇದರ origin ಬಗ್ಗೆ ಇಂದಿಗೂ debate ಇದೆ. ಜನಪ್ರಿಯ ಕಥೆಯ ಪ್ರಕಾರ Spanish shepherds ಬೆಟ್ಟಗಳಲ್ಲಿ bread bake ಮಾಡಲು ಸಾಧ್ಯವಾಗದಾಗ ಸುಲಭವಾಗಿ fry ಮಾಡಿಕೊಳ್ಳಲು ಆರಂಭಿಸಿದರು. ಇನ್ನೊಂದು theory ಪ್ರಕಾರ Portuguese travellers ಚೀನಾದ long fried dough snacks ನೋಡಿ concept ತಂದರು. ಯಾವ version ಸರಿ ಎನ್ನುವುದು ಗೊತ್ತಿಲ್ಲ. ಆದರೆ ಒಂದು ಸಂಗತಿ ಸ್ಪಷ್ಟ. ಒಮ್ಮೆ ಇದು shepherd food ಆಗಿರಬಹುದು. ನಂತರ worker food ಆಯಿತು. ಈಗ airport food ಆಗಿದೆ.
ಆಹಾರಗಳಿಗೆ passports ಇರುವುದಿಲ್ಲ. ಅವಕಾಶ ಸಿಕ್ಕರೆ ಅವು migration ಮಾಡುತ್ತವೆ.
ನಾವು market ಮಧ್ಯೆ ನಿಂತು churros ತಿನ್ನುತ್ತಿದ್ದೆವು. ಹತ್ತಿರ coffee machine ಶಬ್ದ ಮಾಡುತ್ತಿತ್ತು. ದೂರ violin ಕೇಳುತ್ತಿತ್ತು. ಚಳಿ ಗಾಳಿ ಬರುತ್ತಿತ್ತು. ಸಕ್ಕರೆ ಪುಡಿ jacket ಮೇಲೆ ಬೀಳುತ್ತಿತ್ತು. ಹಾದು ಹೋಗುವ ಜನರಲ್ಲಿ ಕೆಲವರು woollen caps ಹಾಕಿದ್ದರು. ಕೆಲವರು gloves. ಕೆಲವರು coffee cup ಹಿಡಿದು ಕೈ ಬಿಸಿಮಾಡುತ್ತಿದ್ದರು.

ಅಲ್ಲಿ ಒಂದು ವಿಚಿತ್ರ ಸಂಗತಿ ಅರ್ಥವಾಯಿತು. ಜನರು churros ತಿನ್ನುತ್ತಿರಲಿಲ್ಲ. ಅವರು ಚಳಿಯನ್ನು manage ಮಾಡುತ್ತಿದ್ದರು. Australiaಗೆ ಬಂದಾಗ ಬಹಳ ಜನ kangaroo, beaches, famous buildings ಬಗ್ಗೆ ಮಾತನಾಡುತ್ತಾರೆ. ಯಾರೂ churros ಬಗ್ಗೆ ಹೇಳುವುದಿಲ್ಲ. ಆದರೆ ದೇಶಗಳನ್ನು ಕೆಲವೊಮ್ಮೆ snacks ಚೆನ್ನಾಗಿ explain ಮಾಡುತ್ತವೆ.
Churros ಹೊರಗಡೆ ಬದುಕಲು ಹುಟ್ಟಿದ ಆಹಾರ. ನಡೆಯುತ್ತಾ ತಿನ್ನಬೇಕು. ಚಳಿಯಲ್ಲಿ ಕೈ ಬಿಸಿಯಾಗಿಸಬೇಕು. ಒಂದು ಕೈ pocketನಲ್ಲಿ ಇರಬೇಕು. ಇನ್ನೊಂದು ಕೈಗೆ ಸಕ್ಕರೆ ಪುಡಿ ಅಂಟಿರಬೇಕು. ಬಹುಶಃ ಅದಕ್ಕೇ ಇದು snack ಅಲ್ಲ. Street food.
ಒಂದು market ಮಧ್ಯೆ ನಿಂತು ಜನರನ್ನು ನೋಡಿದೆ. Student couple ಒಂದು churros share ಮಾಡುತ್ತಿದ್ದರು. ಒಬ್ಬ ಚಿಕ್ಕ ಹುಡುಗ ಮುಖದ ಮೇಲೆ ಸಕ್ಕರೆ ಪುಡಿ ಹಚ್ಚಿಕೊಂಡಿದ್ದ. ಒಬ್ಬ ವಯಸ್ಸಾದ ವ್ಯಕ್ತಿ coffee ಜೊತೆ ನಿಧಾನವಾಗಿ ತಿನ್ನುತ್ತಿದ್ದ. ಕೆಲವು tourists photo ತೆಗೆದುಕೊಳ್ಳುತ್ತಿದ್ದರು. Suddenly churros food ಅನ್ನಿಸಲಿಲ್ಲ.

ಅದು weather, migration, sugar ಮತ್ತು habit ಸೇರಿಕೊಂಡ ಚಿಕ್ಕ social technology ಅನ್ನಿಸಿತು. ಮೊದಲ churros curiosityಗಾಗಿ. ಎರಡನೇದು confirmationಗಾಗಿ. ಮೂರನೇದು memoryಗಾಗಿ.
ನಂತರ ರಂಜನಾ ಹೇಳಿದಳು.
“ಇದು ಮತ್ತೆ ಸಿಕ್ಕರೆ ತಿನ್ನಬಹುದು.”
ಅರ್ಧ ಗಂಟೆ ಹಿಂದೆ ಅದರ ಹೆಸರು ಗೊತ್ತಿರಲಿಲ್ಲ. ಈಗ ಮತ್ತೆ ಸಿಕ್ಕರೆ ತೆಗೆದುಕೊಳ್ಳುತ್ತೇನೆ ಎಂದು ಯೋಚಿಸುತ್ತಿದ್ದೆ.
ಬಹುಶಃ travel ಅಂದರೆ ಅದೇ ಇರಬಹುದು.
Marketನಿಂದ ಹೊರಗೆ ಬರುತ್ತಿದ್ದಾಗ ಕೈಗೆ ಇನ್ನೂ ಸಕ್ಕರೆ ಪುಡಿ ಅಂಟಿಕೊಂಡಿತ್ತು. ಚಳಿ ಇನ್ನೂ ಇತ್ತು. Tramಗಳು ಇನ್ನೂ ಓಡುತ್ತಿದವು. ಆದರೆ ಒಂದು simple fried dough ಸುಮ್ಮನೆ ತನ್ನ ಕೆಲಸ ಮಾಡಿಕೊಂಡಿತ್ತು.
ಅದು foreign ಅನ್ನುವ ಭಾವನೆ ಸ್ವಲ್ಪ ಕಡಿಮೆ ಮಾಡಿತ್ತು.
ಬಹುಶಃ migration ಕೂಡ ಹೀಗೆಯೇ ಆರಂಭವಾಗಿರಬಹುದು. ಮೊದಲು ವಿಚಿತ್ರ. ನಂತರ acceptable. ಕೊನೆಗೆ favourite.
। ನಾಳೆಗೆ ।






0 Comments