ಡಾ.ಬ್ರಹ್ಮಾನಂದ ನಾಯಕ್ ಬೆಂಗಳೂರಿನ ಅತ್ಯುತ್ತಮ ಆಯುರ್ವೇದ ವೈದ್ಯರು.
ಜೊತೆಗೆ ಅವರು ಉತ್ಸಾಹಭರಿತ ಲೇಖಕರು, ಆರೋಗ್ಯ ರಕ್ಷಣಾ ತಂತ್ರಜ್ಞರು ಮತ್ತು ದಾರ್ಶನಿಕರು.
ಡಾ. ನಾಯಕ್ 1994 ರಲ್ಲಿ ಬೆಳಗಾವಿಯ ಕೆಎಲ್‌ಇ’ಎಸ್ ಬಿಎಂಕೆ ಆಯುರ್ವೇದ ಮಹಾವಿದ್ಯಾಲಯದಿಂದ ಬಿಎಎಂಎಸ್ ಮತ್ತು 1998 ರಲ್ಲಿ ಬೆಂಗಳೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನಿಂದ ಎಂಡಿ (ಆಯುರ್ವೇದ) ಪದವಿ ಪಡೆದರು.
ಬೆಂಗಳೂರಿನ ಅತ್ಯಂತ ಯಶಸ್ವಿ ಆಯುರ್ವೇದ ಅಂಗಡಿಗಳ ಸರಪಳಿಯಾದ ಆಯುರ್ ಸೆಂಟ್ರಲ್ ಅನ್ನು ಸಹ-ಸ್ಥಾಪಿಸಿದರು.
ಇದೀಗ ‘ಅವಧಿ’ಯಲ್ಲಿ ‘ಕಾಂಗರೂ ನಾಡಿನಲ್ಲಿ’ ಶೀರ್ಷಿಕೆಯ ಹೊಸ ಸರಣಿಯೊಂದಿಗೆ ಬರುತ್ತಿದ್ದಾರೆ.
ಸರಣಿ – 5
ಫೋಟೋ ಕೃಪೆ : ಪ್ರವೀಣ್ ಮೂರ್ತಿ
ಮೆಲ್ಬೋರ್ನ್ ನಗರವನ್ನು ಮೊದಲ ಬಾರಿ ನೋಡಿದಾಗ ಅದು ಕಾಫಿ ಕುಡಿಯುವ ನಗರ ಎನ್ನುವುದಕ್ಕಿಂತ, ಕಾಫಿಯ ಸುತ್ತ ಬದುಕು ಕಟ್ಟಿಕೊಂಡ ನಗರ ಅನ್ನಿಸಿತು.
ಇಲ್ಲಿ coffee ಒಂದು drink ಅಲ್ಲ. ಅದು ಒಂದು ಸಾಮಾಜಿಕ ಒಪ್ಪಂದ. ಒಂದು excuse. ಒಂದು ritual.
ಕೆಲವರು “ಹೇಗಿದ್ದೀರ?” ಎಂದು ಕೇಳುವ ಮೊದಲು “Coffee catch-up ಮಾಡೋಣವಾ?” ಎಂದು ಕೇಳುತ್ತಾರೆ. office meeting ಇರಲಿ, breakup discussion ಇರಲಿ, startup idea ಇರಲಿ, old friends reunion ಇರಲಿ — ಎಲ್ಲಕ್ಕೂ coffee ಮಧ್ಯಸ್ಥಿಕೆ.
ಪ್ರವೀಣ್ ನನ್ನನ್ನು ಹಲವಾರು cafeಗಳಿಗೆ ಕರೆದೊಯ್ದ. ಪ್ರತಿಯೊಂದು cafe ಒಳಗೆ ಹೋಗುವ ಮುನ್ನ ಅವನು almost documentary narrator ಹಾಗೆ background ಕೊಡುತ್ತಿದ್ದ.
“ಇಲ್ಲಿ chicory ಹಾಕೋದಿಲ್ಲ.” “ಈ ಕೆಫೆಯಲ್ಲಿ ಬೇರೆ roaster beans use ಮಾಡ್ತಾರೆ.” “Melbourneನಲ್ಲಿ same coffee ಅಂತ ಇಲ್ಲ.”
ಆ ಮಾತು ಮೊದಲಿಗೆ exaggeration ಅನ್ನಿಸಿತು. ನಂತರ ಗೊತ್ತಾಯಿತು — ಇಲ್ಲಿ coffee individuality ಕೂಡ almost fingerprint ತರಹ.
ಒಂದು cafeನಲ್ಲಿ ಕುಡಿದ coffeeಗೆ ವಿಚಿತ್ರ ಹಣ್ಣಿನ ವಾಸನೆ ಇತ್ತು. Bitter ಕೂಡ ಅಲ್ಲ. Sweet ಕೂಡ ಅಲ್ಲ. ಯಾರೋ ಅಪರಿಚಿತರು ವಿನಯದಿಂದ ನಕ್ಕ ಹಾಗೆ.
ಪ್ರತಿ cafe counter ಹತ್ತಿರ “ಇವತ್ತು ಯಾವ roaster beans use ಮಾಡಿದ್ದೇವೆ” ಎಂದು ಬರೆದಿರುತ್ತಿತ್ತು. wine menu seriousness.
ಇಲ್ಲಿ independent coffee culture ತುಂಬಾ ಗಟ್ಟಿಯಾಗಿದೆ. ದೊಡ್ಡ chainಗಳಿಗಿಂತ standalone cafes ಹೆಚ್ಚು ಗೌರವ ಪಡೆಯುತ್ತವೆ. Starbucks ಇಲ್ಲಿ late entry ಮಾಡಿದ್ದು ಕೇವಲ business story ಅಲ್ಲ. ಅದು Melbourne ego story ಕೂಡ.

“ನಮ್ಮಲ್ಲಿ already ಒಳ್ಳೆಯ coffee ಇದೆ,” ಎಂದು ನಗರ collective ಆಗಿ ಹೇಳಿದಂತೆ.
ಪ್ರವೀಣ್ ನನ್ನನ್ನು Brunetti Cafeಗೂ ಕರೆದೊಯ್ದ. ಅದು cafeಗಿಂತ Italian theatre ಹಾಗೆ ಕಾಣಿಸಿತು. pastry counters jewel shop ತರಹ ಮಿನುಗುತ್ತಿವೆ. cakes ನೋಡಿ ಕೆಲವರು silent ಆಗಿ calorie surrender ಮಾಡುತ್ತಿದ್ದರು. ವಿಚಿತ್ರ ಸಂಗತಿ ಏನೆಂದರೆ ಇಲ್ಲಿ ಬಹುತೇಕ ಜನ coffeeಗೆ sugar ಹಾಕೋದಿಲ್ಲ. ಆದರೆ croissant ಮಾತ್ರ ಒಂದು ಚಿಕ್ಕ ದೇಶದ ಗಾತ್ರ.
ಒಬ್ಬ barista cappuccino ಮಾಡುತ್ತಿದ್ದ. ಹಾಲಿನ froth ಮೇಲೆ chocolate powder. ಮೇಲೆ heart shape. ಕೆಲವೊಮ್ಮೆ leaf art.
“ಎಲ್ಲರೂ ಇದೇ heart, leaf ಮಾಡ್ತಾರೆ,” ಎಂದ ಪ್ರವೀಣ್ ನಗುತ್ತಾ.
ನನಗೆ suddenly ನಮ್ಮ ಬೆಂಗಳೂರಿನ ದೋಸೆ ಹೋಟೆಲ್ ನೆನಪಾಯಿತು. ಅಲ್ಲಿ ಕೂಡ ಎಲ್ಲ ಪ್ಲೇಟ್ ಗಳಲ್ಲಿ almost same coconut chutney art.
ಆದರೆ ಇಲ್ಲಿ ಆ art ಹಿಂದೆ full-time science ಇದೆ.
Melbourneನಲ್ಲಿ barista courses ತುಂಬಾ serious. Latte art schools ಇವೆ. milk temperature, extraction timing, microfoam texture — ಎಲ್ಲಕ್ಕೂ engineering precision.
ಒಂದು cafeನಲ್ಲಿ “Magic” ಅನ್ನೋ coffee ಕುಡಿದೆವು. Melbourneನಲ್ಲಿ ಹುಟ್ಟಿದ coffee style ಅಂತೆ. double ristretto shot. ಕಡಿಮೆ froth. perfect milk balance. ಅದು coffeeಗಿಂತ well-edited novel ಹಾಗೆ. unnecessary ಏನೂ ಇಲ್ಲ.

Espresso machineಗಳ ಜೊತೆ ಬಂದ Italian migrants ನಿಧಾನವಾಗಿ ಈ ನಗರದ ಬೆಳಗಿನ ರಕ್ತಸಂಚಾರವನ್ನೇ ಬದಲಿಸಿದರು. ಇಂದು Melbourneನಲ್ಲಿ ನೂರಾರು independent roasters ಇದ್ದಾರೆ. ಕೆಲವರು beansನ್ನೇ ತಮ್ಮ cafeಗಳಲ್ಲಿ ಮಾರುತ್ತಾರೆ.
“ಇದೇ beans ನೀವು ಈಗ ಕುಡಿದ coffeeದಲ್ಲಿ,” ಎಂದು ಹೆಮ್ಮೆಯಿಂದ ತೋರಿಸುತ್ತಾರೆ.
ಇಲ್ಲಿ coffee freshnessಗೆ almost religious importance. Bitter punch ಕೂಡ sharp. ಬೆಂಗಳೂರು ಫಿಲ್ಟರ್ ಕಾಫಿ ನಿಮ್ಮನ್ನು ನಿಧಾನವಾಗಿ ಎಬ್ಬಿಸಿದರೆ, Melbourne espresso ಕೆಲವೊಮ್ಮೆ ನಿಮ್ಮ ಆತ್ಮವನ್ನೇ brisk walkಗೆ ಕಳುಹಿಸುತ್ತದೆ.
ಒಂದು ದಿನ tramನಲ್ಲಿ ಹೋಗುತ್ತಿದ್ದಾಗ ಗಮನಿಸಿದೆ. metro, bus, train, office lobby, street corner — ಎಲ್ಲೆಡೆ takeaway coffee cups. ಇಲ್ಲಿ coffee on-the-go ಕೂಡ fashion accessory ಹಾಗೆ. ಕೆಲವರು cup ಹಿಡಿದ seriousness ನೋಡಿದರೆ ಅದು share market file ಅನಿಸುತ್ತೆ.
ಈಗ winter season. ಹೊರಗೆ ಚಳಿ ಗಾಳಿ. ವಿಚಿತ್ರ ಸಮಸ್ಯೆ ಏನೆಂದರೆ cafeಯಿಂದ ಹೊರಬರುವಷ್ಟರಲ್ಲಿ coffee ತಣ್ಣಗಾಗಲು ಶುರು.
“Extra hot ಬೇಕಾ?” ಎಂದು almost ಪ್ರತಿಯೊಂದು cafeನಲ್ಲಿ ಕೇಳುತ್ತಾರೆ. ಅದು ಕೇಳಿದಾಗ ನನಗೆ ಬೆಂಗಳೂರಿನ darshiniಗಳಲ್ಲಿ “extra chutney ಬೇಕಾ?” ಎಂದು ಕೇಳುವ ಸ್ಟೈಲ್ ನೆನಪಾಯಿತು. ಹವಾಮಾನ ಬದಲಾದ್ರೆ ಸಂಸ್ಕೃತಿಯ ಪ್ರಶ್ನೆಗಳೂ ಬದಲಾಗುತ್ತವೆ.
ಇಲ್ಲಿ milk options ಕೂಡ personality test ತರಹ. Whole milk, oat milk, almond milk. Coffee order ಮಾಡುವಷ್ಟರಲ್ಲಿ ಕೆಲವರಿಗೆ ತಮ್ಮ ಜೀವನದ ಬಗ್ಗೆ existential doubt ಶುರುವಾಗಬಹುದು.
ಪ್ರವೀಣ್ ಒಂದು cafe loyalty card ತೋರಿಸಿದ.
“Five coffee. One free.”
ಆ ಕ್ಷಣದಲ್ಲಿ ನನಗೆ ಒಂದು ವಿಚಾರ ಅರ್ಥವಾಯಿತು. Melbourneನಲ್ಲಿ caffeine addiction ಕೂಡ beautifully organised.

ಆದರೆ ಈ ಸಿಟಿಗೆ ಒಂದು silent sadness ಕೂಡ ಇದೆ. ಸಂಜೆ ಐದು ಗಂಟೆಯ ನಂತರ ಬಹುತೇಕ cafes ಮುಚ್ಚುತ್ತವೆ. ಏಕೆಂದರೆ ಅವು ಬೆಳಿಗ್ಗೆ ಐದು ಗಂಟೆಗೆ ತೆರೆಯುತ್ತವೆ. Melbourne coffee culture early-rising civilisation.
ಆಮೇಲೆ option ಏನು?
“7-Eleven,” ಎಂದ ಪ್ರವೀಣ್.
ಆ ಉತ್ತರದಲ್ಲಿ resignation ಇತ್ತು. ಬೆಂಗಳೂರಿನಲ್ಲಿ midnight ಫಿಲ್ಟರ್ ಕಾಫಿ ಹುಡುಕುವವನಿಗೆ ರೈಲ್ವೆ ಸ್ಟೇಷನ್ ಸಿಗುವಂತೆ.
ಒಂದು ಮಳೆಯ ದಿನ cafe glass ಮೇಲೆ ನೀರಿನ ಹನಿಗಳು ಜಾರುತ್ತಿದ್ದವು. ಒಳಗೆ yellow lights. ಹೊರಗೆ grey winter. ಒಬ್ಬ ವೃದ್ಧ ಕಿಟಕಿಯ ಹತ್ತಿರ ಒಂಟಿಯಾಗಿ ಕುಳಿತಿದ್ದ. ಎದುರಿಗೆ ತೆರೆದ ಪುಸ್ತಕ. ಪಕ್ಕದಲ್ಲಿ ನಿಧಾನವಾಗಿ ಹೊಗೆ ಬಿಡುತ್ತಿರುವ coffee cup.
ಹೊರಗೆ ಜನರು ಚಳಿಯಿಂದ ವೇಗವಾಗಿ ನಡೆಯುತ್ತಿದ್ದರು. ಒಳಗೆ ಮಾತ್ರ ಸಮಯ ನಿಧಾನವಾಗಿತ್ತು.
ಪ್ರವೀಣ್ ಅಲ್ಲಿ unusually quiet ಆಗಿದ್ದ. ಕಪ್ ಕೈಯಲ್ಲಿ ಹಿಡಿದು ಹೊರಗಿನ ಮಳೆಯನ್ನು ನೋಡುತ್ತಿದ್ದ.
ಆ ಕ್ಷಣದಲ್ಲಿ ನನಗೆ ಅರ್ಥವಾದದ್ದು ಏನೆಂದರೆ Melbourne ಜನರು coffee ಕುಡಿಯುವುದಿಲ್ಲ.
ಅವರು ಕಾಫಿಯ ಮೂಲಕ ಚಳಿಯನ್ನು ಮನಸ್ಸಿಗೆ ತಟ್ಟದಂತೆ ಮಾಡಿಕೊಳ್ಳುತ್ತಾರೆ.
ಬಹುಶಃ ಅದಕ್ಕೇ ಇಲ್ಲಿ cafes ಇಷ್ಟು ಮುಖ್ಯ. ಇದು ಕೇವಲ caffeine business ಅಲ್ಲ. ಇದು urban loneliness management system.
ಭಾರತದಲ್ಲಿ coffee ಮನೆಯೊಳಗೆ ಬದುಕುತ್ತದೆ. ಸ್ಟೀಲ್ ಲೋಟಗಳಲ್ಲಿ. degree coffee ವಾಸನೆಯಲ್ಲಿ. ಬೆಳಗಿನ ಅಡುಗೆಮನೆಯ ಗದ್ದಲದಲ್ಲಿ. ರೈಲ್ವೆ platformಗಳ ನಿದ್ರಾಹೀನ ಮುಂಜಾನೆಯಲ್ಲಿ.
Melbourne coffee ಮಾತ್ರ future tenseನಲ್ಲಿ ಬದುಕುತ್ತದೆ. ಹೊಸದಾಗಿ roast ಆಗುತ್ತದೆ. ಪ್ರತಿದಿನ ತನ್ನನ್ನೇ ಮರುಹುಟ್ಟು ಮಾಡಿಕೊಳ್ಳುತ್ತದೆ. Experiment ಮಾಡುತ್ತದೆ. ಮತ್ತೆ ಮತ್ತೆ ತನ್ನ ರುಚಿಯನ್ನೇ ಪ್ರಶ್ನಿಸುತ್ತದೆ.
ಆದರೂ ವಿಚಿತ್ರವಾಗಿ, ಒಂದು ಚಳಿಯಾದ Melbourne ಬೆಳಗ್ಗೆ flat white cup ಕೈಯಲ್ಲಿ ಹಿಡಿದಾಗ ಅದರ ಉಷ್ಣತೆ ಮೊದಲು ಬೆರಳುಗಳಿಗೆ ತಟ್ಟಿತು. ನಂತರ, ಯಾವುದೇ ಎಚ್ಚರಿಕೆಯಿಲ್ಲದೆ, ಮನಸ್ಸಿನೊಳಗೆ ಮಲ್ಲೇಶ್ವರದ filter coffee ವಾಸನೆ ಎದ್ದಿತು.
ಬಹುಶಃ ಒಳ್ಳೆಯ coffeeಗಳ ಗುಣ ಅದೇ ಇರಬಹುದು. ಅವು ಕೇವಲ ದೇಹವನ್ನು ಎಬ್ಬಿಸುವುದಿಲ್ಲ. ಸಾವಿರಾರು ಕಿಲೋಮೀಟರ್ ದೂರ ಮಲಗಿರುವ ನಮ್ಮೊಳಗಿನ ಹಳೆಯ ನೆನಪುಗಳನ್ನೂ ನಿಧಾನವಾಗಿ ಕುದಿಸುತ್ತವೆ.
। ನಾಳೆಗೆ ।






0 Comments