–ಅಣೇಕಟ್ಟೆ ವಿಶ್ವನಾಥ್
ಇನ್ನೂ ನಮ್ಮ ರೈತರ ಅರಿವಿಗೆ ಬಂದಿರದ ವಿಷಯ ಇದು!!
ಮಳೆ ಬರಲು ಮಳೆರಾಯನೆ ಕಾರಣ ಅಂದುಕೊಂಡಿದ್ದೇವೆ. ಅಕಾಲಿಕ ಮಳೆ, ಹೆಚ್ಚು ಮಳೆ, ಬರಗಾಲ, ಕೆಂಡದಂತ ಬೇಸಿಗೆ, ಇಂತಹ ಹವಾಮಾನ ವೈಪರೀತ್ಯಗಳಿಂದ ರೈತನಿಗೆ ತೊಂದರೆ ಆಗುತ್ತಿದ್ದರೂ ಅದೊಂದು ಜಾಗತಿಕ ವಿದ್ಯಮಾನ ಎಂಬ ಅರಿವು ರೈತರಿಗೆ ಬಂದಿಲ್ಲ. ಆ ಕಾರಣದಿಂದ ನಾವು ಇಂದಿಗೂ ಹವಾಮಾನ ಬದಲಾವಣೆಯಿಂದ ಕೃಷಿಯನ್ನು ರಕ್ಷಿಸಲು ರೈತರ ಮಟ್ಟದಲ್ಲಿ ಚರ್ಚೆಗಳು ಹೇಳಿಕೊಳ್ಳುವಷ್ಟು ಇನ್ನೂ ನಡೆದೇ ಇಲ್ಲ.
ಒಂದು ಸೈಕಲ್ ಕಥೆ ಎಂಬ ಒಂದು ಕಿರುಚಿತ್ರ ರೈತರ ಭಾಷೆಯಲ್ಲಿ ರೈತರಿಗೆ ಅರಿವು ಮೂಡಿಸುವ ಪ್ರಯತ್ನ ಪ್ರಾರಂಭಿಸಿದೆ. ಮಗುವಿಗೆ ಸೈಕಲ್ ಕೊಡಿಸುವ ಭಾಷೆ ಕೊಡುವ ಒಂದು ಭಾವನಾತ್ಮಕ ಎಳೆಯನ್ನು ಹವಾಮಾನ ಬದಲಾವಣೆ ವಿಷಯದ ಜೊತೆಗೆ ಚೆನ್ನಾಗಿ ಹೆಣೆದಿದ್ದಾರೆ. ಬನವಾಸಿ ತೋಟದ ಅವಿನಾಶ್ ಅವರ ಈ ಪ್ರಯತ್ನ ನನಗೆ ಇಷ್ಟವಾಯ್ತು. ಮಲ್ಲಯ್ಯನ ಪಾತ್ರದಲ್ಲಿ ಅಭಿನಯಿಸಿರುವ ಅವರ ನಟನೆಯೂ ಸಹಜವಾಗಿದೆ.
ಚಿತ್ರದ ಯೂಟ್ಯೂಬ್ ಲಿಂಕ್ ಇಲ್ಲಿದೆ.






0 Comments