ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡಾ. ಜಯಲಲಿತಾ ಅವರಿಗೆ ಎಚ್ ವಿ ಸಾವಿತ್ರಮ್ಮ ಪ್ರಶಸ್ತಿ

ಕರ್ನಾಟಕ ಲೇಖಕಿಯರ ಸಂಘ 2025 ನೆಯ ಸಾಲಿನ ಎಚ್. ವಿ. ಸಾವಿತ್ರಮ್ಮ ಪ್ರಶಸ್ತಿ ಘೋಷಿಸಿದೆ. ಈ ಬಾರಿ ಅನುವಾದ ವಿಭಾಗಕ್ಕೆ(ಯಾವುದೇ ಭಾಷೆಯಿಂದ ಕನ್ನಡಕ್ಕೆ) ಪುಸ್ತಕಗಳನ್ನು ಆಹ್ವಾನಿಸಲಾಗಿತ್ತು.

ಡಾ. ಜಯಲಲಿತಾ ಅವರ ತೊಲ್ಗಾಪ್ಪಿಯಂ( ತಮಿಳಿನಿಂದ ಕನ್ನಡಕ್ಕೆ) ಕೃತಿ ಪ್ರಶಸ್ತಿಗೆ ಆಯ್ಕೆಯಾಗಿದೆ. ಪ್ರಶಸ್ತಿಯು 25000 ರೂ ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಡಾ. ಆರ್. ಸುನಂದಮ್ಮ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತೀರ್ಪುಗಾರರಾಗಿ ರಶ್ಮಿ ಎಸ್. , ಕೆ. ರಾಜಕುಮಾರ್ ಹಾಗೂ ಪ್ರೊ. ಸೆಲ್ವಕುಮಾರಿ ಅವರು ಇದ್ದರೆಂದು ತಿಳಿಸಿದ್ದಾರೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಗಸ್ಟ್ ನಲ್ಲಿ ನಡೆಯುತ್ತದೆ.

‍ಲೇಖಕರು Admin

25 June, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading