ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡಾ. ಎ.ಎನ್. ನಾಗರಾಜ್ ನೆನಪುಗಳಲ್ಲಿ…

-ಎಲ್ ಸಿ ಸುಮಿತ್ರಾ

ಸೋಮವಾರ ಬೆಳಿಗ್ಗೆ ಎ ಎನ್ ನಾಗರಾಜ್ ನಾರಾಯಣ ಹೃದಯಾಲಯದಲ್ಲಿ ತೀವ್ರ ಅನಾರೋಗ್ಯದಲ್ಲಿ ತೀವ್ರ ನಿಗಾ ಘಟಕದಲ್ಲಿದ್ದಾರೆ ಎಂಬ ಸುದ್ದಿ ಸಂಜೆ ನಾಗರಾಜ್ ಇನ್ನಿಲ್ಲ ಎಂಬ ಸುದ್ದಿ. ಎಲ್ಲವೂ ಅನಿರೀಕ್ಷಿತ. ರಾತ್ರಿ ಎಂಟುವರೆಯಿಂದ ಹತ್ತು ಗಂಟೆ ವರೆಗೆ ಭೀಮನ ಕಟ್ಟೆಯಲ್ಲಿದ್ದೆವು. ನಾಗರಾಜ್ ಅವರ ಮೂವರು ಮಕ್ಕಳೂ ಅಮೆರಿಕಾದಲ್ಲಿ ಇರುವುದರಿಂದ ಇಲ್ಲಿ ಅವರ ಕುಟುಂಬ ಸ್ನೇಹಿತರಾದ ಕೆ ಜಿ ಶ್ರೀಧರ್, ಶ್ರೀಧರ್ ಕಲ್ಲಹಳ್ಳ ಗಂಗಾಧರ್ ಅವರೇ ನಾಗರಾಜ್ ಅವರ ಯೋಗಕ್ಷೇಮವನ್ನು ನೋಡಿಕೊಳ್ಳು ತ್ತಿದ್ದರು. ಅಸ್ಪತ್ರೆ ಗೆ ಕರೆದುಕೊಂಡು ಹೋಗಿ ಮತ್ತೆ ಮರಳಿ ಭೀಮನ ಕಟ್ಟೆ ಗೆ ಬಂದು ಕೊನೆಯ ಕ್ರಿಯೆ ಗಳನ್ನು ಮಾಡುವ ವರೆಗೂ ಅವರ ದೇ ಜವಾಬ್ದಾರಿ ಆಗಿತ್ತು. ಯಾವುದೇ ಸಂಪ್ರದಾಯ ವಿಧಿಗಳ ನ್ನೂ ಮಾಡಬಾರದು ಎಂದು ನಾಗರಾಜ್ ಹೇಳಿದ್ದ ಪ್ರಕಾರವೇ ಸ್ನೇಹಿತರು, ಊರು ಮನೆ ಯವರು, ಬಂಧುಗಳು ಬಂದು ಗೌರವ ಸಲ್ಲಿಸಿ ಅಂತಿಮ ದರ್ಶನ ಪಡೆದರು. ಕೊನೆಯಲ್ಲಿ ಮನೆಯಿಂದ ಹೊರಗೆ ಕರೆದೊಯ್ಯುವಾಗ ಶಿವಮೊಗ್ಗದ ರೇಖಾಂಬ ಪ್ರಭು ಮತ್ತು ಗೆಳತಿಯರು ಕುವೆಂಪು ಅವರ ಅನಿಕೇತನ ಗೀತೆಯನ್ನು ಭಾವಪೂರ್ಣವಾಗಿ ಹಾಡಿದರು. ಮನ ತಟ್ಟಿತು. ಅಮೆರಿಕಾ ದಲ್ಲಿ ರುವ ಮಕ್ಕಳು ವೀಡಿಯೊ ಕಾಲ್ ಮೂಲಕ ನೋಡಿದರು.

ನಾಗರಾಜ್ ಅವರು ತಮ್ಮ ಅಮೆರಿಕನ್ ಸಂಜಾತ ಪತ್ನಿ ನ್ಯಾನ್ಸಿ ಮತ್ತು ಮೂವರು ಮಕ್ಕಳು ಕಮಲಾ, ಕೈಲಾಸ್ ಮತ್ತು ಆಶಾ.ಅವರ ಜತೆ 1980 ರಲ್ಲಿ ತೀರ್ಥಹಳ್ಳಿ ಗೆ ಬಂದರು . ಭೀಮನ ಕಟ್ಟೆ ಯಲ್ಲಿ 1982 ರಲ್ಲಿ ಸ್ವಂತ ಮನೆ ಆಗುವವರೆಗೆ ಸೊಪ್ಪುಗುಡ್ಡೆ ಯಲ್ಲಿ ಬಾಡಿಗೆ ಮನೆಯಲ್ಲಿ ಇದ್ದ ರು. ತೀರ್ಥಹಳ್ಳಿ ಗೆ ಬಂದಾಗ ಅವರಿಗೆ ಐವತ್ತು ವರ್ಷ. ಹೋದಾಗ 97 . ಬದುಕಿನ ಬಹುಭಾಗ ಅಂದರೆ 47 ವರ್ಷ ತೀರ್ಥಹಳ್ಳಿ ಯಲ್ಲಿ ಕಳೆದರು. ಅವರ ಸಂಪರ್ಕ ಕ್ಕೆ ಬಂದವರ ಮೇಲೆ ಅವರ ವಿಚಾರಗಳ ಪ್ರಭಾವ ಆಗುತ್ತಿತ್ತು. ಹಿಂದೊಮ್ಮೆ ಅವರ ಕುರಿತು ನಾನು ಬರೆದ ಲೇಖನ ವನ್ನು ಈ ಮುಂದೆ ಕೊಟ್ಟಿದ್ದೇನೆ.
ಡಾ. ಎ ಎನ್.ನಾಗರಾಜ್.

ಡಾ.ನಾಗರಾಜ್ ಗೆ ಈಗ 98 ನೆ ವಯಸ್ಸು. ತೀರ್ಥಹಳ್ಳಿ ಯಿಂದ ಐದು ಕೀ ಮೀ ದೂರದ ಭೀಮನಕಟ್ಟೆ ಎಂಬ ತುಂಗಾ ನದಿಯ ದಡದಲ್ಲಿರುವ ಹಳ್ಳಿಯ ಬಹಳ ಸರಳ ವಾದ ಕುಟೀರ ದಂತಹ ಮನೆಯಲ್ಲಿ ಅವರ ವಾಸ.

1981 ರಲ್ಲಿ ತುಂಗಾ ಕಾಲೇಜ್ ನಲ್ಲಿ ಅಧ್ಯಾಪಕಿಯಾಗಿ ಸೇರಿದ್ದ ಹೊಸದರಲ್ಲಿ ನನ್ನ ಜತೆ ಇಂಗ್ಲಿಷ್ ಅಧ್ಯಾಪಕಿ ಪೂರ್ಣಾದೇವಿ, (ಶಿವಾನಂದ ಸಾಸ್ವೇಹಳ್ಳಿ, ಅವರ ತಂಗಿ) ಮತ್ತು ಎಕನಾಮಿಕ್ಸ್ ಅಧ್ಯಾಪಕಿ ಚಂಚಲಾಕ್ಷಿ ಇದ್ದರು. ಒಮ್ಮೆ ಸ್ನೇಹಿತರು ಯಾರೋ ಏ ಎನ್ ಮೂರ್ತಿರಾವ್ ಮಗ ಏ ಎನ್ ನಾಗರಾಜ್ ಅಮೆರಿಕದಿಂದ ಮರಳಿ ಬಂದವರು ಮೈಸೂರಿನಲ್ಲಿ ಕೆಲವು ಕಾಲ ಇದ್ದವರು ಈಗ ತೀರ್ಥಹಳ್ಳಿಗೆ ಬಂದು ನೆಲೆಸಿದ್ದಾರೆ ಹೆಂಡತಿ ನ್ಯಾನ್ಸಿ ಮತ್ತು ಮೂವರು ಮಕ್ಕಳು ಕಮಲ, ಆಶಾ, ಮತ್ತು ಕೈಲಾಸ್ ಅವರ ಜತೆ. ನಮ್ಮ ಸೊಪ್ಪು ಗುಡ್ಡೆ ಯಲ್ಲಿಯೇ ಇದಾರೆ ಎಂದು ಹೇಳಿ ದಾಗ ನಾವು ಅವರನ್ನೂ ಭೇಟಿ ಆಗುವ ಎಂದು ಯೋಚಿಸಿದೆವು. ಒಂದೆರಡು ದಿನದಲ್ಲಿಯೇ ಅವರು ಪತ್ನಿ ನ್ಯಾನ್ಸಿ ಜತೆ ರಸ್ತೆಯಲ್ಲಿ ಭೇಟಿ ಆಗಿ ಮನೆಗೆ ಆಹ್ವಾನಿಸಿದರು.

ಅಮೆರಿಕಾ ದಿಂದ ಮರಳಿ ಬಂದವರು ಮೈಸೂರಿನ ಕಲಳ ವಾಡಿ ಎಂಬಲ್ಲಿ ಜಮೀನು ಕೊಂಡು ಕೆಲವು ಕಾಲ ಅಲ್ಲಿದ್ದು ಆಮೇಲೆ ಅದನ್ನು ಮಾರಿ ತೀರ್ಥ ಹಳ್ಳಿ ಗೆ ಬಂದರು. ಇಲ್ಲಿ ಸ್ವಂತ ಮನೆ ಭೀಮನ ಕಟ್ಟೆಯಲ್ಲಿ ಆಗುವವರೆಗೆ ಸೊಪ್ಪುಗುಡ್ಡೆ ಯಲ್ಲಿ ಬಾಡಿಗೆ ಮನೆಯಲ್ಲಿ ಇದ್ದರು. ಅಮೆರಿಕಾ ದಲ್ಲಿ ಇದ್ದು ಬಂದವರೂ ಎಂಬ ಕಲ್ಪನೆಯಲ್ಲಿ ನಾನು, ಪೂರ್ಣ, ಚಂಚಲಾಕ್ಷಿ ಅವರ ಮನೆಗೆ ಹೋದೆವು. ಎರಡು ರೂಮ್ ಗಳ ಸಾಧಾರಣ ಮನೆಯ ವೆರಾಂಡಾ ದಲ್ಲಿ ನ್ಯಾನ್ಸಿ ಚಪಾತಿ ತಿನ್ನು ತ್ತಾ ಕುಳಿತಿದ್ದರು. ನಾವು ಹೋಗಿದ್ದರಿಂದ ಮುಜುಗರ ಪಟ್ಟುಕೊಳ್ಳದೆ ತಮ್ಮ ಪಾಡಿಗೆ ತಿನ್ನುವುದನ್ನು ಮುಂದುವರೆಸಿದರು. ನಾಗರಾಜ್ ಅವರು ಒಂದು ತಟ್ಟೆಯಲ್ಲಿ ಸ್ವಲ್ಪ ಹಸಿ ಶೇಂಗಾ ತಂದು ನಮ್ಮೆದುರಿಗೆ ಇಟ್ಟರು. ಯಾರೋ ಗೆಸ್ಟ್ ಬಂದರೂ ಅಂತ ತಿಂಡಿ ತಿನ್ನುವುದನ್ನು ಬಿಟ್ಟು ಬಂದವರಿಗೆ ಉಪಚಾರ ಮಾಡುವ ಅಗತ್ಯ ಇಲ್ಲ ಅನ್ನುವ ಅವರ ಪದ್ಧತಿ ನಮಗೆ ಹೊಸದು. 45 ವರ್ಷಗಳ ಹಿಂದೆ ಆಗ ಮುಂಚಿತವಾಗಿ ತಿಳಿಸಲು ಫೋನ್ ಇರಲಿಲ್ಲ. ಶೇಂಗಾ ಸಿಪ್ಪೆ ಬಿಡಿಸಿ ತಿನ್ನಲೂ ನಮಗೆ ಸೋಮಾರಿತನ. ಅವರ ಜೀವನ ಶೈಲಿ ಕುರಿತು ಅವರೇ ಹೇಳಿದ ಮೇಲೆ ತಿಳಿಯಿತು. ಎಣ್ಣೆ, ಕರಿದ ಆಹಾರ ತಿನ್ನುವುದಿಲ್ಲ. ರಾತ್ರಿ ಯ ಊಟ ಸಂಜೆಯೇ ಆಗುತ್ತದೆ. ಅಮೆರಿಕಾ ದ ಜೀವನ ಸಾಕಾಗಿ ಇಲ್ಲಿಗೆ ಬಂದಿದ್ದರು ಕೆಲವು ಅಲ್ಲಿಯ ಸಾಮಾಜಿಕ ರೂಢಿ ಗಳನ್ನು ಪಾಲಿಸುತ್ತಿದ್ದರು. ಮಕ್ಕಳು ಹದಿನೆಂಟು ವರ್ಷಗಳ ನಂತರ ತಮ್ಮ ಜವಾಬ್ದಾರಿ ತಾವೇ ನೋಡಿಕೊಳ್ಳಬೇಕು ಅನ್ನುವುದು ಅವುಗಳಲ್ಲಿ ಒಂದು.ಅವರ ಮಗಳು ಕಮಲ ಪೀ ಯು ಗೆ ಓದು ನಿಲ್ಲಿಸಿದಳು. ನಾಗರಾಜ್ ಸಂಸಾರ ಭೀಮನ ಕಟ್ಟೆಯಲ್ಲಿ ಮನೆಕಟ್ಟಿಕೊಂಡು ಅಲ್ಲಿಗೆ ಹೋದರು. ಮಗ ಕೈಲಾಸ್ p u c ಗೆ ನಮ್ಮ ಕಾಲೇಜ್ ಗೆ ಬರುತ್ತಿದ್ದ. ಕೊನೆಯ ಮಗಳು ಆಶಾ ಹೈಸ್ಕೂಲ್ ನಲ್ಲಿದ್ದಳು. ಕಮಲ ತಾನು ಇಷ್ಟ ಪಟ್ಟ ಹುಡುಗನನ್ನು ಮದುವೆ ಆಗಿ ಅಮೆರಿಕಾಕ್ಕೆ ಹೋದಳು. ಅವಳು ಅಲ್ಲಿ ಹುಟ್ಟಿದ್ದರಿಂದ ಮತ್ತೆ ಹೋಗುವುದು ಸುಲಭ ಆಯಿತು.

ನಾಗರಾಜ್ ಅವರ ಆಹಾರ ಪರಿಸರ ಕುರಿತ ವಿಚಾರಧಾರೆ ನಮಗೆಲ್ಲ ಆಕರ್ಷಕ ಅನಿಸಿದ್ದರಿಂದ ಅವರ ಜತೆ ಮಾತು ಕತೆ ಎಲ್ಲರಿಗೂ ಇಷ್ಟ ಆಗುತ್ತಿತ್ತು. ನಮ್ಮ ಕಾಲೇಜ್ ಗೆ ಹಲವು ಸಲ ಬಂದು ವಿದ್ಯಾರ್ಥಿಗ ಳನ್ನೂ ಉದ್ದೇಶಿಸಿ ಮಾತಾಡಿದ್ದರು. ಏ ಎನ್ ಮೂರ್ತಿ ರಾವ್ ಸಹ ಮಗನ ಮನೆಗೆ ಬಂದವರು ಆಹ್ವಾನಿತ ರಾಗಿ ನಮ್ಮ ಕಾಲೇಜ್ ಗೆ ಎರಡು ಸಲ ಬಂದಿದ್ದರು. ನನ್ನ ತವರು ಮನೆ ಲಕ್ಷ್ಮೀಪುರ ದ ಮನೆಗು ನ್ಯಾನ್ಸಿ ಮತ್ತು ನಾಗರಾಜ್ ಒಮ್ಮೆ ಬಂಡಿದ್ದರೂ. ವಿಶ್ವಾಸದಿಂದ ಮಾತನಾಡಿಸಿ ಕರೆದವರ ಮನೆಗೆ ಹೋಗುವ ಸರಳ ಸ್ವಭಾವ ಅವರದು. ಮೈಸೂರಿನ ಜಯಲಕ್ಷ್ಮಿ ಪುರದ ನಮ್ಮ ಮನೆ ಸಮೀಪದಲ್ಲಿ ಪಂಚವಟಿ ಸರ್ಕಲ್ ನಲ್ಲಿ ಮೂರ್ತಿ ರಾವ್ ಅವರ ಹೊಸ.ಮನೆ ಆಗಿತ್ತು.( ಅಲ್ಲಿ ಟ್ರಾಫಿಕ್ ಗಲಾಟೆ ಅಂತ ಆ ಮನೆಯನ್ನು ಅವರು ಮಾರಿದರು. ಕೊಂಡವರು ಆ ಹೊಸ ಮನೆ ಬೀಳಿಸಿ ಪೆಟ್ರೋಲ್ ಪಂಪ್ ಹಾಕಿ ಈಗ ಅಲ್ಲಿ ಏನೂ ಇಲ್ಲ). ಅಲ್ಲಿಗೆ ಬಂದಾಗಲೂ ನಾಗರಾಜ್ ಪತ್ನಿ ಸಹಿತ ನಮ್ಮ ಮನೆಗೆ ಬಂದಿದ್ದರು. ನಾಗರಾಜ್ ಅವರ ಮುಕ್ತ ವಿಚಾರಧಾರೆ ಸ್ಥಳೀಯರುಕೆಲವರಿಗೆ ಇಷ್ಟ ಇರಲಿಲ್ಲ. ಉಳಿದ ಇಬ್ಬರು ಮಕ್ಕಳು ಓದು ಮುಂದುವರೆಸಲು ಅಮೆರಿಕಾಕೇ ಹೋದ ಮೇಲೆ ನ್ಯಾನ್ಸಿ ಸಹ 1986 ರಲ್ಲಿ ಮರಳಿ ಹೋದರು. ಅಲ್ಲಿ ಬೇರೆ ಸಂಗಾತಿ ಯ ಜತೆ ಬದುಕು ಮುಂದುವರೆಯಿತು. ಕಳೆದ ನಾಲ್ಕು ದಶಕ ಗಳಿಂದ ನಾಗರಾಜ್ ಒಬ್ಬರೇ ಭೀಮನ ಕಟ್ಟೆಯಲ್ಲಿ ವಾಸಿಸುತ್ತಿದ್ದಾರೆ. ಆಗಾಗ ಮಕ್ಕಳನ್ನು ಭೇಟಿ ಆಗಲು ಅಮೆರಿಕಾ ಕೆ ಹೋಗಿಬರುತ್ತಾರೆ.

ಒಂದು ರೀತಿ ಯಲ್ಲಿ ನಾಗರಾಜ್ ಅವರ ಬದುಕು ಸಂತನಂತೆ. ಅಗತ್ಯಕ್ಕೆ ಬೇಕಾದಷ್ಟೇ ವಸ್ತುಗಳು. ಆಶ್ರಮ ದಂತಹ ಸಣ್ಣ ಮನೆ. ತಾನು ನಂಬಿದ ಆಚರಿಸುವ ಜೀವನ ಪದ್ಧತಿ ಯ ಕುರಿತು ಮಾತು. ವೈದ್ಯರಿಂದ ದೂರ ವಿ ದ್ದು ಔಷಧ ಇಲ್ಲದೆ ಆಹಾರ ಪದ್ಧತಿ ಮತ್ತು ಜೀವನ ಶೈಲಿಯ ಮೂಲಕವೆ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ಎಂಬುದನ್ನು ಕುರಿತು ಅವರು ಪುಸ್ತಕ ಗಳ ನ್ನೂ ಬರೆದಿದ್ದಾರೆ. ಆನಂದದ ಹುಡುಕಾಟದಲ್ಲಿ ಎಂಬ ಹೆಸರಿನಲ್ಲಿ ಆತ್ಮ ಚರಿತ್ರೆ ಬರೆದಿದ್ದಾರೆ. ಮೂರ್ತಿ ರಾಯರ ಮಗ ಎಂಬ ಕಾರಣಕ್ಕೆ ತಮಗೆ ಬೇಕಾದಷ್ಟು ಪ್ರೀತಿ, ವಿಶ್ವಾಸ ಸಿಕ್ಕಿದೆ ಅನ್ನುತ್ತಾರೆ.

ಅವರ ಆರೋಗ್ಯ ಕುರಿತು ಮಾತನಾಡುವಾಗ ಅವರು ಹೇಳುವುದು ಸೂಕ್ತ ಆಹಾರ, ನಡಿಗೆಗಳ ಜತೆ ಭೂತದ ಭಾರವನ್ನು ಮನಸ್ಸಿನ ಮೇಲೆ ಹೊರಿಸಬೇಡಿ ಅಂತ.

ಮೂರ್ತಿರಾವ್ ಮತ್ತು ನಾಗರಾಜ್ ಇಬ್ಬರ ಜತೆ ನಾನು ಇರುವ ಪಟ 27 ವರ್ಷಗಳ ಹಿಂದೆ ನಮ್ಮ ಕಾಲೇಜ್ ಗೆ ಮೂರ್ತಿ ರಾವ್ ಅವರು ಕಾರ್ಯಕ್ರಮ ಒಂದಕ್ಕೆ ಬಂದಾಗ ತೆಗೆದಿದ್ದು.

‍ಲೇಖಕರು Admin

23 September, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading