ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಟಿ ಎಸ್ ಗೊರವರ ಕವಿತೆ, ’ಅವಳ ವಿಳಾಸ ಸಿಕ್ಕಿತು’

– ಟಿ ಎಸ್ ಗೊರವರ

ಗದ್ದೆಯ ಬದುವಿನಲಿ
ಸ್ವಚ್ಛಂದ ಹಕ್ಕಿಯಂತೆ ಹಾರಾಡಿಕೊಂಡಿದ್ದವಳೇ
ತೆನೆಗಟ್ಟಿದ ಪ್ರೇಮವ ಬೊಗಸೆಗೆ ಸುರಿದು
ಜಗವ ಮರೆಸಿದೆ
 
ನಿನಗಾಗಿ ಜಗವ ಸುತ್ತಿದೆ
ಕಂಡ ದಾರಿಗಳಲಿ ಅಂಡಲೆದೆ
ನೀನಲ್ಲವಾಗಿ ಬೇಸರಿಸಿದೆ
ನಿಡುಸುಯ್ದೆ

ನೀನೋ ಲಹರಿಯಲಿ ಗಾಳಿಗೆ ಓಲಾಡುತ್ತಾ
ಓಲಾಟದಲೂ ಧ್ಯಾನ ಕದಡದ ಭತ್ತದಂತೆ ನಿಂತಿರುವೆ
ಎಲೆ ಮರೆಯ ಹಣ್ಣು ಸಿಕ್ಕಂತಾಗಿ
ಸ್ವರ್ಗಕ್ಕೆ ಏಣಿ ಹಾಕಿದ್ದೇನೆ
 
ಕೊನೆಗೂ ನಿನ್ನ ವಿಳಾಸ ಸಿಕ್ಕಿತು
ನೀ ಬರುವ ದಾರಿಯ ಕಿರು ತಿರುವಿನಲಿ ನಿಂತು
ಮುಗುಳ್ನಗೆ ಚೆಲ್ಲಿ ಕಾಯುತಿರುವೆ
 

‍ಲೇಖಕರು G

8 April, 2015

8 Comments

  1. ಹನುಮಂತ ಹಾಲಿಗೇರಿ,

    ಅಂತೂ ಹುಡುಕಾಟ ಫಲಿಸಿದ್ದರ ಕುರಿತು ಬಾಳ ನವಿರಾಗಿ ಬರೆದಿದ್ದಿರಿ..

  2. bidaloti ranganath

    ವಿಳಾಸ ಸಿಕ್ಕಿದ ಮೇಲೆ ಇನ್ನೇಕೆ ತಡ ತಟ್ಟಿ ರುದಯದ ಬಾಗಿಲ

  3. suresh rajamane, rannabelagali

    NIce sir

  4. mmshaik

    uttama kavana..

  5. mahesh kalal

    naviru bhavanegala sankula

  6. Anonymous

    ಗೊರವರವರೇ ಕವಿತೆ ಚೆನ್ನಾಗಿದೆ..

  7. Bandesab Megeri

    kavite tumba chennagide sir

  8. Gayatri Badiger

    Channagide sir..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading