ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಟಾಲ್ಸ್ಟಾಯ್ ಮೌನವಾದ ಕ್ಷಣ ಅಪ್ಪಂದು!

ಮಣ್ಣಾದ ಅಪ್ಪ

ಸಂತೆಬೆನ್ನೂರು ಫೈಜ್ನಟ್ರಾಜ್

ಹೆಗಲ ಮಂಟಪದಿ ಸಾಗಿ ಮಣ್ಣಿಗಿಳಿದ
ಅಪ್ಪ  ಉಸ್ಸಪ್ಪ ಎಂದ  ದನಿ
ನಂಗಷ್ಟೇ ಕೇಳಿದ್ದು ಅಮ್ಮನಿಗೆ ಹೇಗೆ ಹೇಳಲಿ?
*
ಇಡೀ ಊರೇ ಅಪ್ಪಂದು
ನಡೆದಾಡುವ ನಾಯಕ ಒಮ್ಮೆಲೆ ಕುಸಿದು
ಕೋಲೂ  ಊರದೇ
ಕಡೆಯಾಗಿದ್ದು ಆಡಲು ಹೋದ ಹುಡುಗ ಮರೆಯಾದಂತಾಗಿದೆ!
*
ಮಣ್ಣ ಮತ್ತು ಅಪ್ಪನ ನಡುವೆ
ಅದೇನು ಮಾತೋ ಈಗ
ಬದುಕಿದ್ದಾಗ ತೋಟದ ತುಂಬಾ ಮಣ್ಣ ಹೆಜ್ಜೆ
ಮೂಡಿ ಭೂರ್ಜ್ವವನದ ಟಾಲ್ಸ್ಟಾಯ್ ಮೌನವಾದ ಕ್ಷಣ ಅಪ್ಪಂದು!
*
ವಾಕಿಟಾಕಿಗೂ ನಾಚಿಕೆ ಆಗಬೇಕು ಅಪ್ಪನ ಮಾತಿಗೆ,ಹಾಸಿಗೆಯ ಸಾಂಗತ್ಯದಲ್ಲಿ
ತಲೆ ಉಜ್ಜುಜ್ಜಿ ಮೌನ ಹೊದ್ದ  ಮನೆ ದಿನದಿನವೂ ಮಸಣ!

*
ಕೈಹಿಡಿದವಳ ಪ್ರೀತಿಸಿದ್ದೆಷ್ಟೋ…
ಮಂಚದಿಂದ ಮಣ್ಣಿಗೆ ಸಾಗುವತನಕ
ಒಲವ ಹೆಸರೇ ಮಂತ್ರ, ಕಡೆಗಾಲಕೂ
ಕಡೆಗಣಿಸದ ಪ್ರೀತಿಗೆ ಜೀವಕೊಡೋ ಶಕ್ತಿ
ದೂರವೆ!
*
ನೂರರ ಹತ್ತಿರದ ವಸಂತಗಳ
ಎದೆಯೊಳಗಿಟ್ಟು ಸಾವಿರಾರು ಮಾತುಗಳ
ಒಡಲ ಕೋಟೆಯಲ್ಲಿ ಹಳೆ ಮುತ್ತುಗಳಂತೆ
ಬಂಧಿಸಿಕೊಂಡೇ ಹೋಗಿದ್ದು
ಅಮ್ಮನಿಗೂ ಒಗಟು!

 

‍ಲೇಖಕರು avadhi

4 December, 2019

2 Comments

  1. T S SHRAVANA KUMARI

    ಚೆನ್ನಾಗಿದೆ

  2. ashfaq peerzade

    ಅಪ್ಪನ ನೆನಪಲ್ಲಿ….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading