ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಛಂದ ಪುಸ್ತಕ ಸ್ಪರ್ಧೆಗೆ ಆಹ್ವಾನ

ಕಳೆದ ಆರು ವರ್ಷಗಳಿಂದ ಯಶಸ್ವಿಯಾಗಿ ಹೊಸ ಕತೆಗಾರರ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಛಂದ ಪುಸ್ತಕ 2010ನೇ ಸಾಲಿನ ಬಹುಮಾನಕ್ಕಾಗಿ ಹಸ್ತಪ್ರತಿಗಳನ್ನು ಆಹ್ವಾನಿಸುತ್ತಿದೆ.
–
ಇದುವರೆಗೂ ಒಂದೂ ಕಥಾಸಂಕಲನ ಹೊರತಂದಿರದ ಲೇಖಕರಿಗೆ ಮಾತ್ರ ಅವಕಾಶ. ಸಾಹಿತ್ಯದ ಇತರ ಪ್ರಕಾರಗಳಲ್ಲಿ ಒಂದೆರಡು ಪುಸ್ತಕಗಳು ಪ್ರಕಟವಾಗಿದ್ದರೆ ಪರವಾಯಿಲ್ಲ.  ತಮಗೆ ಉತ್ತಮವೆನಿಸಿದ ಸುಮಾರು 10 ಪ್ರಕಟಿತ/ಅಪ್ರಕಟಿತ ಸ್ವಂತ ಕತೆಗಳನ್ನು ಡಿಟಿಪಿ ಮಾಡಿಸಿ ಇಲ್ಲವೇ ಸ್ಫುಟವಾದ ಕೈಬರಹದಲ್ಲಿ ಬರೆದು ಕಳುಹಿಸಬೇಕು.  ಹಸ್ತಪ್ರತಿ ಹಿಂತಿರುಗಿಸಲಾಗುವದಿಲ್ಲ.
–
ಆಯ್ಕೆಯಾದ ಕತೆಗಾರರಿಗೆ ಹತ್ತು ಸಾವಿರ ರೂಪಾಯಿ ಬಹುಮಾನ ಕೊಟ್ಟು, ಅವರ ಕಥಾ ಸಂಕಲನವನ್ನು ಛಂದ ಪುಸ್ತಕ ಪ್ರಕಟಿಸುತ್ತದೆ.  ಈ ಪುಸ್ತಕವನ್ನು 2010ರ ನವೆಂಬರ್ ತಿಂಗಳ ಕೊನೆಯಲ್ಲಿ  ಬೆಂಗಳೂರಿನಲ್ಲಿ ನಡೆಯವ ಸುಂದರ ಸಮಾರಂಭದಲ್ಲಿ  ಬಿಡುಗಡೆ ಮಾಡಲಾಗುವುದು.
–
ಪುಸ್ತಕದ ಆಯ್ಕೆ ಮತ್ತು ಪ್ರಕಟಣೆಯಲ್ಲಿ ಪ್ರಕಾಶಕರದೇ ಅಂತಿಮ ನಿರ್ಧಾರ.  ಕತೆಗಳನ್ನು ಕಳಿಸಬೇಕಾದ
–
ವಿಳಾಸ:
ಛಂದ ಪುಸ್ತಕ, c/o ವಸುಧೇಂದ್ರ, ಐ-004, ಮಂತ್ರಿ ಪ್ಯಾರಡೈಸ್, ಬನ್ನೇರುಘಟ್ಟ ರಸ್ತೆ, ಬೆಂಗಳೂರು – 76 (ದೂ. 98444 22782)
ಕೊನೆಯ ದಿನಾಂಕ: ಜುಲೈ 10, 2010
ವಿವರಗಳಿಗೆ: vas123u@rocketmail.com
]]>

‍ಲೇಖಕರು avadhi

23 June, 2010

2 Comments

  1. v.n.laxminarayana

    ಮಾನ್ಯರೆ,
    ನೀವು ಕೊಟ್ಟ ಇ ಮೇಲ್ ವಿಳಾಸಕ್ಕೆ ಸ್ಪಷ್ಟನೆ ಕೋರಿ ಕಳಿಸಿದ ಇಮೇಲ್ ವಾಪಸ್ಸು ಬಂತು. ಇಮೇಲ್ ಮೂಲಕವೂ ಕತೆಗಳನ್ನು ಕಳಿಸಬಹುದೆ? ಹೌದಾದರೆ ಜಿಮೇಲ್ಅಥವಾ ತಲುಪಬಹುದಾದ ವಿಳಾಸ ಕೊಡಿ
    ವಿ.ಎನ.ಎಲ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading