ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚೈತ್ರಾ ಶಿವಯೋಗಿಮಠ ಹೊಸ ಕವಿತೆ – ಸಾಫ್ಟ್ ಮನ

ಚೈತ್ರಾ ಶಿವಯೋಗಿಮಠ

ಮೊನ್ನೆ ಮಾತನಾಡಿಸಿದವರು ಇಂದು ಉಸಿರು ನಿಲ್ಲಿಸಿದಾಗ
ಮಾಲ್ವೇರು, ransomeವೇರುಗಳು ಬೆದರಿಸುತ್ತಿಲ್ಲ

ದಿನಕ್ಕೆ ಸಾವಿರಗಟ್ಟಲೆ ಜ ನ ಸಾಯುತ್ತಿರುವಾಗ
ಕತ್ತರಿ ಬಿದ್ದ ಹೈಕು ತಲೆ ಕೆಡಿಸುತ್ತಿಲ್ಲ

ನೀರವ ರಸ್ತೆಗಳಲ್ಲಿ ಸಾವು ಗಸ್ತು ತಿರುಗುತ್ತಿರುವ ಗುಮಾನಿಯಿರುವಾಗ
ಟೆಸ್ಟಿಂಗ್ ನಲ್ಲಿ ಫೈಂಡಿಂಗ್ ಮಿಸ್ ಆಗಿರುವ ಭಯ ಕಾಡುತ್ತಿಲ್ಲ

ಅಗದಿ ಸಣ್ಣ ವಯಸಿನವ ಆಸ್ಪತ್ರೆಯಿಂದ ಮನೆಗೆ ಮರಳಲೇ ಇಲ್ಲ
ಸಿಗದ ನೂರು ಪರ್ಸೆಂಟ್ ಬೋನಸ್ ಗೆ ದುಃಖವಾಗುತ್ತಿಲ್ಲ

ದೂರದಲ್ಲಿ ಉಸಿರಾಡಲೂ ಹೆಣಗುತ್ತಿದ್ದಾರಂತೆ ಮಂದಿ
ಛೇ ವಿಪರೀತ ವರ್ಕ್ ಪ್ರೇಶರ್ ಎಂದು ನಿಟ್ಟುಸಿರುಗರೆಯಲೂ ಮನಸ್ಸಿಲ್ಲ

ಏನೇ ಆಗಲಿ ಮನೆಯೊಳಗೆ ಬೆಚ್ಚಗೆ ಕೂತು ಕೆಲಸ ಮಾಡುತ್ತಾ
ತಣ್ಣನೆಯ ಜ್ಯೂಸ್ ಹೀರುವವರಿಗೆ ʼದಿಸ್ ಟೂ ಶಾಲ್ ಪಾಸ್ʼ ಅನ್ನಿಸಲಿ!

‍ಲೇಖಕರು Avadhi

28 April, 2021

2 Comments

  1. Sriprakash

    ಪ್ರಸ್ತುತ ಪರಿಸ್ಥಿತಿಯ ಕ್ರೌರ್ಯವನ್ನು ತಣ್ಣನೆ ಪರಿಣಾಮಕಾರಿಯಾಗಿ ಹೇಳಿರುವ ಕವನ

  2. T S SHRAVANA KUMARI

    ಅದೆಷ್ಟು ಸೊಗಸಾಗಿ ಬರ್ದಿದೀ ಚೈತ್ರಾ.❤

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading