ಚನ್ನಪ್ಪ ಕಟ್ಟಿ ಅವರಿಗೆ ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ

ಕನ್ನಡದ ಸಣ್ಣ ಕತೆಗಾರರಿಗೆ ಉತ್ತೇಜನ ನೀಡಲು ಪ್ರತಿ ವರ್ಷ ನೀಡುತ್ತಿರುವ ಡಾ. ಬೆಸಗರಹಳ್ಳಿ ರಾಮಣ್ಣ ಕಥಾ ಸಂಕಲನ 2019ರ ಪ್ರಶಸ್ತಿ ಚನ್ನಪ್ಪ ಕಟ್ಟಿ ಅವರ “ಏಕತಾರಿ” ಕಥಾ ಸಂಕಲನಕ್ಕೆ ಸಂದಿದೆ.

ಡಾ. ಎಸ್ ಜಿ ಸಿದ್ದರಾಮಯ್ಯ, ಅರುಣ್ ಜೋಳದ ಕೂಡ್ಲಗಿ ಮತ್ತು ವಿನಯಾ ವಕ್ಕುಂದ ಅವರುಗಳಿದ್ದ ಸಮಿತಿ ಈ ಕಥಾಸಂಕಲನವನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಕನ್ನಡ ಕಥಾ ಪರಂಪರೆಗೆ ವಿಶಿಷ್ಟ ನುಡಿಗಟ್ಟು/ಕಾಣ್ಕೆಯ ಪರಿಚಯ; ಮಾನವೀಯ ಸಂಗತಿಯ ಹೊಸ ಹೊಳವು; ಬದುಕಿನ ಘಟನೆಗಳಲ್ಲಿಯೇ ಹೊಸ ಮಿಂಚಿನ ಹೊಳಪು ಮೂಡಿಸುವ ಶಕ್ತಿ ಕತೆಗಳಲ್ಲಿ ಇರಬೇಕು ಎನ್ನುವ ಮೂರು ಆಯ್ಕೆ ಮಾನದಂಡಗಳನ್ನು ಸಮಿತಿ ರೂಪಿಸಿಕೊಂಡಿತ್ತು.

ಈ ಮಾನದಂಡಗಳ ಆಧಾರದಲ್ಲಿ ಚನ್ನಪ್ಪ ಕಟ್ಟಿ ಅವರ “ಏಕತಾರಿ” ಲೋಕೇಶ ಅಗಸನ ಕಟ್ಟೆಯವರ “ಮೀಸೆ ಹೆಂಗಸು ಮತ್ತು ಇತರ ಕಥೆಗಳು” ಹಾಗೂ ದೀಪ್ತಿ ಭದ್ರಾವತಿಯವರ “ಗೀರು” ಕಥಾ ಸಂಕಲನಗಳು ಅಂತಿಮವಾಗಿ ಪೈಪೋಟಿಗೆ ಇಳಿದಿದ್ದವು.

ಚನ್ನಪ್ಪ ಕಟ್ಟಿಯವರ ಕಥಾ ಸಂಕಲನದ ಎಲ್ಲಾ ಕಥೆಗಳು ನೆಲದ ಬೇರುಗಳನ್ನು ಹೀರಿಕೊಂಡು ಬದುಕಿನ ಸ್ಥಿತ್ಯಂತರಗಳನ್ನು ಸೂಕ್ಷ್ಮವಾಗಿ ಕಟ್ಟಿ ಕಲಾಕೃತಿಯ ಅನುಭವ ನೀಡುತ್ತಾ, ಬದಲಾದ ಕಾಲಘಟ್ಟಗಳ ಮನುಷ್ಯ ಸಂಬಂಧಗಳ ನಾಡಿ ಮಿಡಿತವನ್ನು ನೀಡುತ್ತವೆ. ಈ ಕಾರಣಕ್ಕಾಗಿ “ಏಕತಾರಿ” ಕಥಾ ಸಂಕಲನವನ್ನು ಸಮಿತಿ ಒಮ್ಮತದಿಂದ ಆಯ್ಕೆ ಮಾಡಿದೆ.

~ ಡಾ. ಬೆಸಗರಹಳ್ಳಿ ರಾಮಣ್ಣ ಟ್ರಸ್ಟ್

‍ಲೇಖಕರು nalike

May 29, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Mahantesh navalkal

    ಕಟ್ಟಿಯವರು ಶಕ್ತಿಶಾಲಿ ಕಥೆಗಾರರು ೨೦೦೮ ರಲಿ ನನಗೂ ಈ ಪ್ರಶಸ್ತಿ ಬಂದಿತ್ತು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: