ಚಂದ್ರಶೇಖರ ಹೆಗಡೆ ಕವಿತೆ- ನನ್ನದೇನಿಲ್ಲ

ಚಂದ್ರಶೇಖರ ಹೆಗಡೆ

ಬಿತ್ತಿ ಮಡುಗಟ್ಟಿ ಉಸಿರ ನೀರೆರೆದು
ತುದಿಗಾಲಿನಲಿ ನಿಂತು ಕಾದಡೆ
ಮುಗಿಲೆತ್ತರ ಬೆಳೆದು ಫಲ ಪುಷ್ಪ
ನೆರಳನೀಯುವ
ಕಾಯಕ ನಿಮ್ಮದೇ, ನನ್ನದೇನಿಲ್ಲ
ಎಣ್ಣೆಯನೆರೆದು ಹೊಸೆದ ಬತ್ತಿಗೆ
ನಿರ್ಮಲ ಚೈತನ್ಯವ ಹೊತ್ತಿಸೆ
ನಿನ್ನೊಳಗೆ ಉರಿದು ಹೊರಗೆ
ಬೆಳಕನೀಯುವ
ಕಾಯಕವು ನಿಮ್ಮದೇ; ನನ್ನದೇನಿಲ್ಲ

ಕೊರಡ ಸಂದಿಯಲೊಂದು
ನೆಲೆಯದೋರಿ ನಿಟ್ಟುಸಿರು ಬಿಡೆ
ಚೆಂದವಿಹುದೆಂದು ಬಳಗವ ಕರೆದು
ಕುಸುಮದೆದೆಯೊಳಗಿನ ಪ್ರೀತಿಯ
ಹೀರಿ ಹಂಚುವ
ಕಾಯಕವು ನಿಮ್ಮದೇ ; ನನ್ನದೇನಿಲ್ಲ
ಹುಲ್ಲಿನತ್ತ ಸೆಳೆದೊಯ್ದು ಬಯಸಿದರೆ
ಕೆರೆಯತ್ತ ಬಿಡೆ
ಜಗದೊಳಗಿನ ಭೇದದ ಹಂಗು ಹರಿದು
ಕ್ಷೀರಾಮೃತ ನೀಡುವ
ಕಾಯಕವು ನಿಮ್ಮದೇ; ನನ್ನದೇನಿಲ್ಲ

ಕಾಣದ ಕಿಟಕಿಯಾಚೆಗಿನ ತರತರಹದ
ಬೆಳಕು ತಂದು ತರಗತಿಯಲಿ ಹರಿಸಿದಡೆ,
ಮಥಿಸಿದ ಮಾತಿನಿಂ ಕಡೆದ
ನವನೀತವನುಣ್ಬ
ಕಾಯಕವು ನಿಮ್ಮದೇ; ನನ್ನದೇನಿಲ್ಲ
ಕ್ಷಣಕೊಂದು ಹಾದಿತೋರಿ
ಅನಂತತೆಯ ಮಮತೆಯೆರೆದಡೆ
ಲೀಲಾವಿಲಾಸದಿಂ ಕಾಣದಂತೆ ಎನ್ನ
ಕದ್ದೊಯ್ಯುವ
ಕಾಯಕವು ನಿಮ್ಮದೇ; ನನ್ನದೇನಿಲ್ಲ

ಹೊತ್ತು ನಲಿದು ಹೊಟ್ಟೆ ಹೊರೆದು
ಬುದ್ದಿಗೊಂದಿಷ್ಟು ಪಟ್ಟನೆರೆದಡೆ
ಎದ್ದು ಬಿದ್ದರೂ ಒಡೆಯದಂತೆ
ಬದುಕಿ ನಲಿವ
ಕಾಯಕ ನಿಮ್ಮದೇ; ನನ್ನದೇನಿಲ್ಲ
ಹಿಪ್ಪುನೇರಳೆಯನು ಹೆಪ್ಪಿಟ್ಟು ಎರೆದು
ನೂಲನೊರೆಯುವಂತೆ ಒಪ್ಪಿಟ್ಟು ಒತ್ತರಿಸಿದಡೆ
ಗೂಡಿನೊಳಗಿಂದಲೇ ಬಯಲಾಗಿ,
ರೇಷ್ಮೆಯ ನೀಡುವ
ಕಾಯಕ ನಿಮ್ಮದೇ; ನನ್ನದೇನಿಲ್ಲ

‍ಲೇಖಕರು Admin

September 20, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಆಣೆ

ಆಣೆ

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: