ಗೌರಮ್ಮನವರು `ಬಾಳಂತಿ ಪುರಾಣ’ ಬಿಡುಗಡೆ ಮಾಡಿದ್ದು…

ನನ್ನಜ್ಜಿ ಗೌರಮ್ಮ `ಬಾಳಂತಿ ಪುರಾಣ’ ಪುಸ್ತಕವನ್ನು ಬಿಡುಗಡೆ ಮಾಡಿದ್ರು…
ಶ್ರೀಕಲಾ ಡಿ ಎಸ್

ಫೋಟೊ- ಪುಟ್ಟು ಮಾಣಿ

ಇದು ಸಾಮಾನ್ಯವಾಗಿ ಎಲ್ಲಾ ಕಡೆ ನಡೆಯುವ ಬುಕ್ ರಿಲೀಸ್ ಫಂಕ್ಷನ್ ಅಲ್ಲ.

ಕುರ್ಚಿಗಳನ್ನು ಹಾಕಿರಲಿಲ್ಲ. ಬ್ಯಾನರ್ ಕಟ್ಟಿರಲಿಲ್ಲ. ಮಾತನಾಡಲು ಮುಖ್ಯ ಅತಿಥಿಗಳು, ಪುಸ್ತಕದಲ್ಲೇನಿದೆ ಎಂದು ತಿಳಿಸಲು ಸಾಹಿತಿಗಳು ಬಂದಿರಲಿಲ್ಲ. (ಹೀಗೆ ನಡೆಯುವ ಪುಸ್ತಕ ಬಿಡುಗಡೆಯ ಬಗ್ಗೆ ಆಕ್ಷೇಪ ಖಂಡಿತ ಅಲ್ಲ ಮತ್ತಿದು.)

ನನ್ನ ಪಾಲಿಗೆ ಇದು ತುಂಬಾ ಮಹತ್ವದ್ದು ಮತ್ತು ಅಷ್ಟೇ ಆಪ್ತವಾದದ್ದು ಯಾಕೆಂದರೆ ‘ಬಾಳಂತಿ ಪುರಾಣ’ದ ಹಿರೋಯಿನ್ ಆಗಿರುವ ಅಜ್ಜಿಯೇ ಇಲ್ಲಿ ಪುಸ್ತಕ ಬಿಡುಗಡೆ ಮಾಡಿದರು.

ಇದೆಲ್ಲಾ ನಡೆದದ್ದು ಸಾಗರ ಸಮೀಪದ ಲಿಂಗದಹಳ್ಳಿಯಲ್ಲಿ ನನ್ನ ಚಿಕ್ಕತ್ತೆ ಮಗನ ಮದುವೆಯ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯಲ್ಲಿ. `ಅಯ್ಯೋ, ಮದುವೆಮನೆಯಲ್ಲಿ ಬುಕ್ ರಿಲೀಸಾ?’ ಅಂದ್ರೆ ಹೌದು. ಇಲ್ಲವೆಂದರೆ ಅಜ್ಜಿ, ನನ್ನತ್ತೆ ಕನ್ಯಾಕುಮಾರಿ, ಚಿಕ್ಕತ್ತೆ ಉಷಾ, ಮಾವ ಲಕ್ಷ್ಮೀನಾರಾಯಣ ಹೆಗಡೆ, ಚಿಕ್ಮಾವ ಸೋಮಶೇಖರ್ ಎಲ್ಲರನ್ನೂ ಹೀಗೆ ಜೊತೆಯಾಗಿ ಕಲೆಹಾಕಲು ಸಾಧ್ಯವೇ ಇಲ್ಲ. ಬಾಣಂತನದ ಅವಧಿಯಲ್ಲಿ ಇವರೆಲ್ಲರ ಸಹಕಾರ ಸಿಕ್ಕಿದ್ದು ನನ್ನ ಪುಣ್ಯ. ಅವರೆಲ್ಲರ ಜೊತೆಗೆ ಹೀಗೆ ಪುಸ್ತಕ ಹಿಡಿದು ನಿಲ್ಲುವುದು ನನ್ನ ಪರಮ ಭಾಗ್ಯ ಎಂದುಕೊಳ್ಳುವೆ.

“ನೀನೇ ಈ ಪುರಾಣದ ಹಿರೋಯಿನ್ ಗೊತ್ತಾ?” ಎಂದು ಅಜ್ಜಿಗೆ ಹೇಳಿದರೆ ಅದನ್ನು ಗಂಭೀರವಾಗಿ ಪರಿಗಣಿಸುವುದೇ ಇಲ್ಲ ಅವಳು. “ಏನೋ.. ನಮ್ಮ ಕೆಲಸ ನಾವು ಮಾಡದು. ನೀನು ಅದನ್ನೆಲ್ಲಾ ಬರೆದ್ಯಾ?” ಎನ್ನುತ್ತಾಳೆ. ಈ ಪುಸ್ತಕದ ತುಂಬೆಲ್ಲಾ ಅಜ್ಜಿಯೇ ಇರುವುದನ್ನು ಅವಳಿಗೆ ಪರಿಪರಿಯಾಗಿ ಹೇಳಿದ್ದೇನೆ. ಆದರೂ ಅದೆಷ್ಟು ಅವಳ ಒಳಗಿಳಿದಿದೆ ಎಂಬ ಬಗ್ಗೆ ನನಗಿನ್ನೂ ಸಂಶಯವೇ. ತನ್ನ ಫೋಟೊ ಪುಸ್ತಕದ ಒಳಗಿರುವುದನ್ನು ನೋಡಿ ಖುಷಿಪಟ್ಟಿದ್ದಾಳೆ ಅಷ್ಟೆ.

ಸೀರೆ ನೆರಿಗೆ ಕಾಲಿಗೆ ತೊಡರದಂತೆ ಹಿಡಿದುಕೊಂಡು ಕೊಂಚ ಆತಂಕದಲ್ಲೇ ವೇದಿಕೆ ಏರಿದ್ದ ಅವಳು ಇದೇ ಮೊದಲು ಹೀಗೆ ವೇದಿಕೆಯಲ್ಲಿ ಪುಸ್ತಕದ ಜೊತೆಗೆ ನಿಂತಿರುವುದಂತೆ! “ನನಗೂ ಇದು ಮೊದಲನೆಯದ್ದೇ ಬಿಡು, ಇಬ್ಬರದೂ ಸೇಮ್ ಪಿಂಚ್” ಅಂದೆ. ಮುಖ ನೋಡಿ ನಕ್ಕಳು.

************

ಬಾಳಂತಿ ಪುರಾಣ ಆನ್ ಲೈನ್ ಖರೀದಿಯ ಲಿಂಕ್-
https://www.bahuroopi.in/Baalanti-Purana-p135791872

https://www.amazon.in/…/pro…/8193853377/ref=cx_skuctr_share…

ಅಂಕಿತ, ನವಕರ್ನಾಟಕ, ಆಕೃತಿ, ಐ ಬಿ ಎಚ್, ಸ್ನೇಹ ಪ್ರಕಾಶನ ಸೇರಿದಂತೆ ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ಲಭ್ಯ.
#ನನ್ನಮೊದಲಪುಸ್ತಕ
#ಬಾಳಂತಿಪುರಾಣ

www.bahuroopi.in

‍ಲೇಖಕರು avadhi

May 30, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: