ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗೊತ್ತು ನನಗೆ..

-ರಂಜನಿ ಪ್ರಭು

“ಗೊತ್ತು ನನಗೆ”

ಗೊತ್ತು ನನಗೆ
ನೀಬರುವ ಮಾರುಕಟ್ಟೆಯ ಹಾದಿಯಲಿ ಮಲ್ಲಿಗೆಯ ಘಮವೋ ಘಮ
ಆದರೂ ನನ್ನ
ಮುಡಿಯಲ್ಲಿ ಅರಳಿಲ್ಲ ಮಲ್ಲಿಗೆ
ಗೊತ್ತು ನನಗೆ
ನಿನ್ನ ಹೃದಯದ ತೆಪ್ಪ ನನ್ನ ಅಲೆಗೂದಲ ತೆರೆಗಳಲಿ ಜೋಕಾಲಿ ಆಡುತಿಲ್ಲ
ಗೊತ್ತು ನನಗೆ

ಗೊತ್ತು ನನಗೆ
ನನ್ನೆದೆಯ ಗೋಡೆಯ ಮೇಲೆ
ಅಸೂಯೆಯ ಪಾಚಿ ಮೂಡಿಸಲೆಂದೇ
ನೀನು ಅವಳೊಡನೆ
ಮಾತಿನಾ ಮಳೆಯ
ಸುರಿಸುತಿರುವೆ
ಮೀಸೆ ತುದಿಯಲಿ
ನಗುತಾ..
ಗೊತ್ತು ನನಗೆ
ಅವಳು ಉಟ್ಟ ಸೀರೆಯ ಬಣ್ಣ
ಕೂಡಾ ನಿಷಿದ್ಧ
ನಿನಗೆ
ಗೊತ್ತು ನನಗೆ

ನನ್ನ ಕಂಡ ಚಣ
ಬತ್ತಲಾಗುವುದು
ನಿನ್ನ ಹೃದಯ
ಗೊತ್ತು ನನಗೆ
ಅದಕೇ ಕಂಡೂಕಾಣದ
ಹಾಗೆ..
ಭಾವನೆಗೇ ಮುಖವಾಡ
ತೊಡಿಸುತಿರುವೆ
ಮಾತುಗಳನೇ
ನೀನು ಮರೆತಂತೆ
ನಟಿಸಿದರೂ..
ನಿನ್ನ ಕಣ್ಣ ಕೊನೆಯಲಿ ಇಣುಕುವಾ ಮೌನ
ಏನನೋ ಹೇಳುತಿದೆ
ಗೊತ್ತು ನನಗೆ

ಗೆದ್ದವನಂತೆ ಬೀಗುತ್ತಾ ನೀ ಹೆಜ್ಜೆ.
ಹಾಕುವುದು
ನನ್ನ ಕಂಬನಿಮೊಗವ
ಕಾಣದಂತಿರುವುದು
ಗೊತ್ತು ನನಗೆ
ತಿಳಿನೀಲಿ ಕೊಳವಿರುವ ಕನಸಿನಾ ಬೀದಿಯಲಿ ಸಂಧಿಸಲು ನಾಬಂದೆ ನೆನ್ನೆ ಇರುಳು
ಭೇಟಿಯಾಗಲಿಲ್ಲ
ಏಕೆಂದರೆ….
ಗೊತ್ತು ನನಗೆ
ನಿನ್ನ ಕಣ್ಣ ರೆಪ್ಪೆಯಾ
ಬಳಿಗೂ ಸುಳಿದಿರಲಿಲ್ಲ ನಿದಿರೆ….
ಗೊತ್ತು ನನಗೆ

‍ಲೇಖಕರು Admin

16 May, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading