ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗೂಡು ಕಟ್ಟುವೆ..

ಕೆ ಪಿ ಮೃತ್ಯುಂಜಯ

ಗೂಡು ಕಟ್ಟುವೆ –
ಗುಬ್ಬಚ್ಚಿಯ
ಗೀಜಗನ ….
ರೀತಿಯ .

ಬೆಚ್ಚಗಿರು ಆ ಗೂಡಿನಲಿ
ಸುಖದ ಭಾವವಾಗಿ .
ನೀನು ಸುಖದ ಹುಡುಗಿ !
ಬೆಚ್ಚನ್ನ ಬೆಚ್ಚಗಿನ ಗೂಡು !

ಆಂತರ್ಯದೈಶ್ವರ್ಯವನೆ ನೇಯ್ದು ಕಟ್ಟಿದ ಗೂಡು .
ಮಿಥ್ಯೆಗಳ ನಿವಾರಿಸಿದೊಲವಿನ ಗೂಡು .
ನಿನ್ನ ಮನ
ನಿನ್ನ ತನು ಆರಾಮ

ತಂಗುವ ತಾಣ ನೆನವಿಗಚ್ಚು ಮೆಚ್ಚಿನ ಮನೆಯು. ಬಿಡು
ಬೀಡು .
ಸಿಂಗರಿಸು
ನಿನಗಿಷ್ಟದ ಹಾಗೆ .

ತಳಿರು ತೋರಣ ಕಟ್ಟು
ಇಷ್ಟಪಟ್ಟು.
ಬಿಡಿಸು ರಂಗೋಲಿ
ಮೂಡಿಸು ಚಿತ್ತಾರವ ಇಷ್ಟವಾಗುವಲ್ಲಿ .

ನನದಲ್ಲ. ನಿನ್ನದೇ ಗೂಡು.
ಒಲಿದಂತೆ ಹಾಡು.
ನೀನು ಒಲಿದಂತೆ.

‍ಲೇಖಕರು Avadhi

13 September, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading