ಗುಲ್ಜಾರ್ ಸಾಬ್ ಗೆ ಜ್ಞಾನಪೀಠ: ಅವರು ಬರೆದ ‘ಕಲ್ಬುರ್ಗಿ’ ಕವಿತೆ ಇಲ್ಲಿದೆ

ಗುಲ್ಜಾರ್ ಅವರಿಗೆ ಜ್ಞಾನಪೀಠ ಸಂದಿದೆ.

‘ಅವಧಿ’ ಶುಭಾಶಯ ಹೇಳುತ್ತಾ ಈ ಹಿಂದೆ ಕಲ್ಬುರ್ಗಿ ಅವರ ಹತ್ಯೆಯ ಬಗ್ಗೆ ಅವರು ಬರೆದ ಕವಿತೆಯನ್ನು ನಿಮ್ಮ ಓದಿಗೆ ಮತ್ತೆ ನೀಡುತ್ತಿದೆ.

ಕಲ್ಬುರ್ಗಿ
ಗುಲ್ಜಾರ್
ಕನ್ನಡಕ್ಕೆ: ಚಿದಂಬರ ನರೇಂದ್ರ 
ಸತ್ತದ್ದು ಅವ ಅಲ್ಲ
ಹೊಸ್ತಿಲ ಮೇಲೆ ಬಿದ್ದ ಹೆಣ ಅವನದಲ್ಲ.
ಯಾರೋ ಮನೆಯ ಬೆಲ್ ಬಾರಿಸಿದರು
ಮಕ್ಕಳಿಗೆ, ಅ ಅಕ್ಕ, ಬ ಬಸವ ತಿದ್ದಿಸುತ್ತಿದ್ದವ
ಎದ್ದ, ಎದ್ದು ಹೋಗಿ ಬಾಗಿಲು ತೆರೆದ
ಒಂದು ಗುಂಡಿನ ಭಾರಿ ಸದ್ದು
ನೆಲ ಆಕಾಶಗಳನ್ನು ಒಂದು ಮಾಡಿತ್ತು.
ಕಲಿಸುವುದು ಇನ್ನೂ ಮುಗಿದಿರಲಿಲ್ಲ
ತಿದ್ದಿಸುವ ಶಬ್ದಗಳು ಇನ್ನೂ ಎಷ್ಟೋ ಬಾಕಿ ಇದ್ದವು
ಎಲ್ಲ ಕುಸಿದು ಬಿದ್ದಿವೆ, ಹೊಸ್ತಿಲ ಮೇಲೆ.

‍ಲೇಖಕರು avadhi

February 17, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Nagraj Harapanahalli

    ಕಾವ್ಯದಲ್ಲಿ‌ ಧ್ವನಿ , ಕವಿತೆಯ ವ್ಯಾಪಕತೆ ಅಂದ್ರೆ ಇದು. ಅತೀ ಕಡಿಮೆ ಶಬ್ದಗಳಲ್ಲಿ ಒಂದು ವ್ಯಕ್ಯಿಯನ್ನು, ಒಂದು ಯುಗವನ್ನು, ಒಂದು ಸಂಘರ್ಷವನ್ನು ಕಟ್ಟುವ ಶಕ್ತಿ ಇರುವುದು ಕಾವ್ಯಕ್ಕೆ ಮಾತ್ರ. ಒಂದು ಶಬ್ದಚಿತ್ರ …..ಭಾರತದ ಅನೇಕ ಜೀವ ಸೆಲೆಗಳನ್ನು ನೆನಪಿಸುವಂಥದ್ದು. ಕಲಬುರ್ಗಿ ಸರ್ ನಡೆದ ದಾರಿ ಅಷ್ಟು ಕಠಿಣವಾಗಿತ್ತೇ? ಗೊತ್ತೆ ಆಗಲಿಲ್ಲ. ಗುಂಡಿನ ಸದ್ದಿನ ನಂತರ ದೇಶ ಎಚ್ಚೆತ್ತು ಕೊಳ್ಳುತ್ತಿದೆ….

    ಪ್ರತಿಕ್ರಿಯೆ
  2. Nagraj Harapanahalli.karwar

    ಕವಿತೆ ಧ್ವನಿಪೂರ್ಣ. ಒಂದು ಯುಗದ ಸಂಘರ್ಷವನ್ನು ಸಮರ್ಥವಾಗಿ ಹೇಳಿದೆ. ಕಲಬುರ್ಗಿ ಸರ್ ಸಾಗಿದ ದಾರಿ ಇಷ್ಟು ಕಠಿಣವಾಗಿತ್ತೆ??? ಯಥಾಸ್ಥಿತಿ ವಾದದ ಗುಂಡು ಹಾರಿದಾಗಲೇ …..ಅರಿವಾದದ್ದು.
    ಸತ್ಯ ಕಹಿ ಎಂಬುದು ಮತ್ತೆ ನಾಡಿನಲ್ಲಿ ಪ್ರತಿಧ್ವನಿಸಿತೆ?

    ಪ್ರತಿಕ್ರಿಯೆ
  3. nutana doshetty

    ಅನುವಾದವು ಸ್ವತಂತ್ರ ಕವಿತೆಯೇ ಆಗಿದೆ.
    ಅ ಅಕ್ಕ.. ಬ ಬಸವ… ಕಲ್ಬುರ್ಗಿಯವರ ಕಾರ್ಯಕ್ಷೇತ್ರವನ್ನಲ್ಲ ಸರಳವಾಗಿ ಹೇಳಿವೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: