ಗುಲ್ಜಾರ್ ಅವರಿಗೆ ಜ್ಞಾನಪೀಠ ಸಂದಿದೆ.
‘ಅವಧಿ’ ಶುಭಾಶಯ ಹೇಳುತ್ತಾ ಈ ಹಿಂದೆ ಕಲ್ಬುರ್ಗಿ ಅವರ ಹತ್ಯೆಯ ಬಗ್ಗೆ ಅವರು ಬರೆದ ಕವಿತೆಯನ್ನು ನಿಮ್ಮ ಓದಿಗೆ ಮತ್ತೆ ನೀಡುತ್ತಿದೆ.
ಕಲ್ಬುರ್ಗಿ
ಗುಲ್ಜಾರ್
ಕನ್ನಡಕ್ಕೆ: ಚಿದಂಬರ ನರೇಂದ್ರ
ಸತ್ತದ್ದು ಅವ ಅಲ್ಲ
ಹೊಸ್ತಿಲ ಮೇಲೆ ಬಿದ್ದ ಹೆಣ ಅವನದಲ್ಲ.
ಯಾರೋ ಮನೆಯ ಬೆಲ್ ಬಾರಿಸಿದರು
ಮಕ್ಕಳಿಗೆ, ಅ ಅಕ್ಕ, ಬ ಬಸವ ತಿದ್ದಿಸುತ್ತಿದ್ದವ
ಎದ್ದ, ಎದ್ದು ಹೋಗಿ ಬಾಗಿಲು ತೆರೆದ
ಒಂದು ಗುಂಡಿನ ಭಾರಿ ಸದ್ದು
ನೆಲ ಆಕಾಶಗಳನ್ನು ಒಂದು ಮಾಡಿತ್ತು.
ಕಲಿಸುವುದು ಇನ್ನೂ ಮುಗಿದಿರಲಿಲ್ಲ
ತಿದ್ದಿಸುವ ಶಬ್ದಗಳು ಇನ್ನೂ ಎಷ್ಟೋ ಬಾಕಿ ಇದ್ದವು
ಎಲ್ಲ ಕುಸಿದು ಬಿದ್ದಿವೆ, ಹೊಸ್ತಿಲ ಮೇಲೆ.
ಕಾವ್ಯದಲ್ಲಿ ಧ್ವನಿ , ಕವಿತೆಯ ವ್ಯಾಪಕತೆ ಅಂದ್ರೆ ಇದು. ಅತೀ ಕಡಿಮೆ ಶಬ್ದಗಳಲ್ಲಿ ಒಂದು ವ್ಯಕ್ಯಿಯನ್ನು, ಒಂದು ಯುಗವನ್ನು, ಒಂದು ಸಂಘರ್ಷವನ್ನು ಕಟ್ಟುವ ಶಕ್ತಿ ಇರುವುದು ಕಾವ್ಯಕ್ಕೆ ಮಾತ್ರ. ಒಂದು ಶಬ್ದಚಿತ್ರ …..ಭಾರತದ ಅನೇಕ ಜೀವ ಸೆಲೆಗಳನ್ನು ನೆನಪಿಸುವಂಥದ್ದು. ಕಲಬುರ್ಗಿ ಸರ್ ನಡೆದ ದಾರಿ ಅಷ್ಟು ಕಠಿಣವಾಗಿತ್ತೇ? ಗೊತ್ತೆ ಆಗಲಿಲ್ಲ. ಗುಂಡಿನ ಸದ್ದಿನ ನಂತರ ದೇಶ ಎಚ್ಚೆತ್ತು ಕೊಳ್ಳುತ್ತಿದೆ….
ಕವಿತೆ ಧ್ವನಿಪೂರ್ಣ. ಒಂದು ಯುಗದ ಸಂಘರ್ಷವನ್ನು ಸಮರ್ಥವಾಗಿ ಹೇಳಿದೆ. ಕಲಬುರ್ಗಿ ಸರ್ ಸಾಗಿದ ದಾರಿ ಇಷ್ಟು ಕಠಿಣವಾಗಿತ್ತೆ??? ಯಥಾಸ್ಥಿತಿ ವಾದದ ಗುಂಡು ಹಾರಿದಾಗಲೇ …..ಅರಿವಾದದ್ದು.
ಸತ್ಯ ಕಹಿ ಎಂಬುದು ಮತ್ತೆ ನಾಡಿನಲ್ಲಿ ಪ್ರತಿಧ್ವನಿಸಿತೆ?
ಅನುವಾದವು ಸ್ವತಂತ್ರ ಕವಿತೆಯೇ ಆಗಿದೆ.
ಅ ಅಕ್ಕ.. ಬ ಬಸವ… ಕಲ್ಬುರ್ಗಿಯವರ ಕಾರ್ಯಕ್ಷೇತ್ರವನ್ನಲ್ಲ ಸರಳವಾಗಿ ಹೇಳಿವೆ.
excellent translation, idu kanndadde annuvastu kavi olahokkiddare, -lakshmikanth itnal