ಸದಾ ನೆಲೆಸಲು ಇಹ ಲೋಕಕ್ಕೆ ಯಾರೂ ಬರುವುದಿಲ್ಲ
ಆದರೂ ನೀ ತೆರಳಿದಂತೆ ಯಾರೂ ತೆರಳುವುದಿಲ್ಲ.
ಸಾವು ಕೂಡ ಹೆದರಿ ಕಂಪಿಸಿರಬೇಕು ಅರೆಕ್ಷಣ,
ಈ ಬಗೆಯಲಿ ಯಾರೂ ಸಾವನ್ನು ಆಲಿಂಗಿಸುವುದಿಲ್ಲ
ಸಮುದ್ರವೇ ಇಂಗಿಹೋಗಬಹುದು ಎಂಬ ಭಯ ಈಗ
ತನ್ನ ಅಸ್ಥಿಯ ತಾನೇ ಯಾರೂ ವಿಸರ್ಜಿಸುವುದಿಲ್ಲ
ಸಾಕಿಯ ಮೇಲೆ ಸಿಟ್ಟಿತ್ತೆ ಮಧುಶಾಲೆಯ ಬಗೆಗೆ ದೂರು?
ದಣಿವಾರಿಸಲು ಈ ರೀತಿ ಯಾರು ವಿಷ ಸೇವಿಸುವುದಿಲ್ಲ.
ಬೆಳಕಿನ ಕಿರಣಗಳು ನಿನ್ನ ಮೈ ಪರಚಿದವು, ಒಪ್ಪಿಕೊಂಡೆ
ಇರುಳು ಕಳೆಯದೆ ಯಾರೂ ದೀಪ ಆರಿಸುವುದಿಲ್ಲ.
– ಕೈಫಿ ಆಜ್ಮಿ
ಅನುವಾದ: ಸಂವರ್ತ ‘ಸಾಹಿಲ್’
(೧೯೬೪ ರಲ್ಲಿ ಖ್ಯಾತ ನಟ-ನಿರ್ದೇಶಕ ಗುರು ದತ್ತ್ ಆತ್ಮಹತ್ಯೆ ಮಾಡಿಕೊಂಡಾಗ ಬರೆದ ಗಜಲ್)







Should have given link to the original !
http://youtu.be/4Nmetyg_pgs
hrudaya toyduhoyitu.
ಕೈಫಿ ಆಜ್ಮಿಯ ಅಂತ್ಯ ನಿಜವಾಗಿಯೂ ದುರಂತವೇ ಸರಿ. ಪುರೋಗಾಮಿ ಸಾಂಸ್ಕೃತಿಕ ಚಳುವಳಿಯ ಬಗೆಗಿನ ಅವರಲ್ಲಿ ಇದ್ದ ಕಳಕಳಿ ಇಂದು ಕಳೆದು ಹೋಗಿದೆ ಅಥವಾ ನಾವೇ ಕಳೆದುಕೊಂಡಿದ್ದೇವೆ. ಯಾಕಾದ್ರೂ ಹೀಗಾಗುತ್ತೋ ….. ?