ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಖಾಸಗಿ ಮಾತುಗಳೇಕೆ ಮಾರುಕಟ್ಟೆಯಲಿ ಬಿಕರಿಯಾಗಬೇಕು?

ನಂಟು

deepti bhadravati

ದೀಪ್ತಿ ಭದ್ರಾವತಿ

ನಿರ್ಧರಿಸಿದೆ ಅದೊಂದು ದಿನ
ಏನನ್ನೂ ಬರೆಯಬಾರದೆಂದು
ನನ್ನ ಪದಗಳಿಗೂ ಅಪರಿಚಿತ
ಕಾಗದಕ್ಕೂ ನಂಟು
gujjar pairಇರಲೇಬಾರದೆಂದು
ಏನು ಹಕ್ಕುಂಟು ನನಗೆ
ನೂರೆಂಟು ನೋವುಗಳ
ಹರ ಹರವಿ ಅನಾಮಿಕರ
ಎದುರಿಗಿಡಲು
ಸಂತಸದ ಅವರ ಕ್ಷಣಗಳ ಮೇಲೆ
ನನ್ನದೆನ್ನುವ ಡಾಂಬರಿನ
ಮಸಿ ಸುರಿಯಲು
ಖಾಸಗಿ ಮಾತುಗಳೇಕೆ
ಮಾರುಕಟ್ಟೆಯಲಿ ಬಿಕರಿಯಾಗಬೇಕು?
ಕೊಂಡವರು ಆಳ,ಅಳತೆ.ಅಗಲ,ಉದ್ದ
ನೋಡಿ ನೋಡಿ ಲಂಗ ತೊಡಿಸಬೇಕೆ?

ಬೇಡ ಇನ್ನೆಂದು ಬೇಡ
ಕಾಣದ ಹೊಯ್ಗೆಯಲಿ
ಕುಸುರಿ ಕೆತ್ತುವ ಕೆಲಸ
ನನ್ನ ಹೆಜ್ಜೆಗಳ ಕೆಸರ
ಜಗಕೆಲ್ಲ ಹಚ್ಚುವ ಉಮೇದು..
ಎದೆಯ ಸುದ್ದಿಗಳ ನನ್ನವರ
ಮುಂದೆ ಹರಿಯಬಿಡುತ್ತೇನೆ
ಅವರು ನಕ್ಕ, ಅತ್ತ ಗಳಿಗೆಗೆ
ನಾನು ನೇರ ಸಾಕ್ಷಿಯಾಗುತ್ತೇನೆ
ಹೀಗೆಯೇ ನಂಬಿದೆ, ನಂಬುತ್ತಲೇ ಕೂತೆ
ಕೂತದ್ದು, ಕೊರೆದದ್ದು ಜಾಸ್ತಿಯಾಯಿತೇನೋ
ನನ್ನವರೆಂದರು
ಸುಮ್ಮನೆ ಅನಾವಶ್ಯಕ ಮಾತೇಕೆ
ಆಡುತ್ತ ತಿರುಗುತ್ತಿ
ಬರೆಯಬಾರದೆ ಒಂದಿಷ್ಟು ಕತೆ, ಕವಿತೆ
ಏನನ್ನಾದರೂ…

‍ಲೇಖಕರು admin

2 December, 2015

1 Comment

  1. deepthi

    dhanyavada “avadhi”

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading