ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕ್ರಿಯೆ ಪ್ರತಿಕ್ರಿಯೆ ಮತ್ತು ಸಂಘರ್ಷಗಳ ಚಿತ್ರಣ..

ಸಿ ರಾಧಾಕೃಷ್ಣ ಅವರ ಮಲೆಯಾಳಂ ಕಾದಂಬರಿ ಕನ್ನಡಕ್ಕೆ ಅನುವಾದಿತ ಪಾರ್ವತಿ ಐತಾಳ ಅವರ ‘ಇನ್ನೊಂದು ತುಂಬುಗಣ್ಣ ನಗು’

ಕುವೆಂಪು ಭಾಷಾಭಾರತಿ ಪ್ರಾಧಿಕಾರ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಯ ಕುರಿತ ಉದಯಕುಮಾರ ಹಬ್ಬು ಅವರ ಬರಹ ಇಲ್ಲಿದೆ.

-ಉದಯಕುಮಾರ ಹಬ್ಬು

ಈ ಕಾದಂಬರಿಯನ್ನು ಮಲೆಯಾಳಂ ಕಾದಂಬರಿಕಾರ ಸಿ.‌ರಾಧಾಕೃಷ್ಣನ್ ಬರೆದ ವಿಶಿಷ್ಟವಾದ ಕಾದಂಬರಿ. ಈ ಕಾದಂಬರಿಯನ್ನು ಮಲೆಯಾಳಂ ಕೃತಿಗಳ ಅನನ್ಯ ಅನುವಾದಕರಾದ ಮಾನ್ಯ ಪಾರ್ವತಿ ಐತಾಳ ಅವರು ಕನ್ನಡದ್ದೇ ಎನ್ನುವಂತೆ ತುಂಬ ಸೊಗಸಾಗಿ ಅನುವಾದಿಸಿದ್ದಾರೆ‌ ಈ ಕಾದಂಬರಿ ವಿಶಿಷ್ಟ ಯಾಕೆ ಎಂದರೆ ಇದು ನಕ್ಸಲ್ ಸಿದ್ಧಾಂತವನ್ನು ಅನುಷ್ಠಾನಕ್ಕೆ ತರುವ ನಕ್ಸಲ್ ಕ್ತಾಂತಿಕಾರುಗಳ ಕಥೆ. ಅಂತೆಯೇ ಇದು ಆದಿವಾಸಿಗಳ ಕಥೆಯೂ ಹೌದು‌ ಕಾದಂಬರಿ ಉಳಿದ ನಕ್ಸಲ್ ಕಥೆಗಳಂತೆ ಥ್ರಿಲ್ ಕೊಡುವ ಕಾದಂಬರಿಯ ಮಾತ್ರವಾಗಿ ಉಳಿಯದೆ ಕ್ರಾಂತಿಯಲ್ಲಿ ತೊಡಗಿದ್ದ ಯುವಕ ಯುವತಿಯರ ಒಳತೋಟಿಗಳನ್ನು ಬಾವಗೀತಾತ್ಮಕವಾಗಿ ನಿರೂಪಿಸಲ್ಪಟ್ಟಿದೆ‌ ಕಾದಂಬರಿಕಾರ ತನ್ನ vision ಅನ್ನು ತಾತ್ವಿಕವಾಗಿ ಕಾವ್ಯಾತ್ಮಕವಾಗಿ ನಿರೂಪಿಸಿದ್ದು ಈ ಕಾದಂಬರಿಯ ವಿಶಿಷ್ಟತೆ. ಹಾಗೆಂದು ಇದು ನಕ್ಸಲ್ ವಾದವನ್ನು ಸಮರ್ಥಿಸುವುದಿಲ್ಲ. ನಕ್ಸಲ್ ವಾದಿಗಳು ಹಾದು ಹೋಗುವ ಕ್ರಾಂತಿಯ ಮಜಲುಗಳನ್ನು ವಿವರಿಸುವಾಗ ಅದು ಮನುಷ್ಯ ಮನುಷ್ಯರ ನಡುವಣ ಕ್ರಿಯೆ ಪ್ರತಿಕ್ರಿಯೆ ಮತ್ತು ಸಂಘರ್ಷಗಳ ಚಿತ್ರಣವೂ ಆಗುತ್ತದೆ‌.

ಆದಿವಾಸಿಗಳ ಬದುಕಿನ ಸಂಪೂರ್ಣ ಸಾಮಾಜಿಕ, ಸಾಂಸ್ಕೃತಿಕ ಆರ್ಥಿಕ ಆಯಾಗಳ ಸಂಕಥನವು ಕಾದಂಬರಿಕಾರನಿಗೆ ಆದಿವಾಸಿಗಳ ಬಗ್ಗೆ ಇದ್ದ ಆಳವಾದ ಅನುಭವವನ್ನು ವ್ಯಕ್ತಪಡಿಸುತ್ತದೆ‌ ಆದಿವಾಸಿಗಳು ಪ್ರಕೃತಿಯೊಂದಿಗೆ ಒಂದಾಗಿ ಬದುಕುವುದರಿಂದ ಅವರು ಅನಕ್ಷರಸ್ಥರಾದರೂ ಕಲಿತವರಿಗಿಂತ ಹೆಚ್ಚಿನ ಜ್ಞಾನವನ್ನು ಮನುಷ್ಯ ಸ್ವಭಾವಗಳ ಮತ್ತು ಕಾಡುಪ್ರಾಣಿಗಳ ಸ್ವಭಾವಗಳನ್ನು ತುಂಬ ಆಳವಾದ ಜ್ಞಾನವನ್ನು ಹೊಂದಿದವರಾಗಿರುತ್ತಾರೆ. ಮನುಷ್ಯನನ್ನು ಅವರ ಬೆವರ ವಾಸನೆಯಿಂದಲೇ ಪತ್ತೆ ಹಚ್ಚುತ್ತಾರೆ. ಆನೆ ಹುಲಿ ಕತ್ತೆ ಕಿರುಬ, ಕಾಳಿಂಗ ಹಾವು ಈ ಮುಂತಾದವುಗಳ ಸ್ವಭಾವ ಮತ್ತು ಚಲನವಲನಗಳ ಬಗ್ಗೆ ಆದ್ಯಂತ ಜ್ಞಾನವನ್ನು ಹೊಂದಿರುತ್ತಾರೆ‌.

ಇದರ ಕಥಾನಾಯಕ ಒಬ್ಬ ನಕ್ಸಲ್. ಆದಿವಾಸಿಗಳ ನೂರಾರು ಹೆಕ್ಟರ್ ಜಮೀನನ್ನು ಬಂದೂಕುಗಳನ್ನು ನಿರ್ಮಾಣ ಮಾಡುವ ಕಾರಖಾನೆಯನ್ನು ಸ್ವಾಮಿ ಎಂಬ ಧೂರ್ತ ಕಪಟಿ ಪ್ರಾರಂಭಿಸಿರುತ್ತಾನೆ. ಅವನೊಂದಿಗೆ ಸರಕಾರದ ನೌಕರ ವರ್ಗ ಮತ್ತು ರಾಜಕಾರಣಿಗಳೂ ಸಾಮೀಲಾಗಿರುತ್ತಾರೆ‌ ಈ ಕಾರಖಾನೆಯು ಆದಿವಾಸಿಗಳ ಪ್ರದೇಶದ ಮೇಲಿನ ಅತಿಕ್ರಮಣವಾಗಿರುತ್ತದೆ. ಆದಿವಾಸಿಗಳ ಈ ಶೋಷಣೆಗಳನ್ನು ತಡೆಯಲು ಕೆಲವು ನಕ್ಸಲ್ ಯುವಕರು ಆದಿವಾಸಿಗಳೊಂದಿಗೆ ಕೈಜೋಡಿಸುತ್ತಾರೆ‌ ಜಮೀಂದಾರರು ಆದಿವಾಸಿಗಳ ಮೇಲೆ ಮಾಡುವ ಆಕ್ರಮಣ, ಅತ್ಯಾಚಾರ ಕೊಲೆ ಇವುಗಳು ನಕ್ಸಕ್ ಕ್ರಾಂತಿಕಾರಿಗಳಿಗೆ ಸವಾಲೊಡ್ಡುತ್ತವೆ. ಅರ್ಜುನ್ ಈ ಕಾದಂಬರಿಯ ನಾಯಕ. ಅವನು ಕೆಲವು ಕ್ರೂರ‌ ಜಮೀಂದಾರರನ್ನು ಕೊಂದಿರುತ್ತಾನೆ. ಜಮೀಂದಾರರು ಆದಿವಾಸಿಗಳ ಆಸ್ತಿಯನ್ನು ವಶಪಡಿಸಿಕೊಳ್ಳಲು ಅವರನ್ನು ಜೀವಂತ ಸುಡುತ್ತಾರೆ. ಪೋಲಿಸ್ ಅಧಿಕಾರಿಗಳೂ ಜಮೀಂದಾರರೊಂದಿಗೆ ಶಾಮೀಲಾಗುತ್ತಾರೆ‌.

ಈ ನಡುವೆ ಗಾಯಗೊಂಡ ಅರ್ಜುನನಿಗೆ ಆದಿವಾಸಿ ಹೆಣ್ಣೊಬ್ಬಳು ದಿನ ರಾತ್ರಿ ಅರೈಕೆ ಮಾಡುತ್ತಾಳೆ. ಅವಳು ಶರ್ಮಿಳಾ. ಅವರ ನಡುವೆ ಪ್ರೀತಿ ಬೆಳೆಯುತ್ತದೆ.

ಅರ್ಜುನ ಪೋಲಿಸರ ಕೈಗೆ ಸಿಗಬಾರದೆಂದು ಅರ್ಜುನನ ತಂದೆಯ ಗೆಳೆಯರಾದ ಸ್ಬಾಮೀಜಿ ಮತ್ತು ಇನ್ನೋರ್ವ ವೈದ್ಯಮಿತ್ರ ಪ್ಲಾಸ್ಟಿಕ್ ಸರ್ಜರಿ ಮಾಡಿ ಅರ್ಜುನನ ರೂಪವನ್ನು ಬದಲಾಯಿಸುತ್ತಾರೆ.

ಕಾದಂಬರಿ ಪ್ರಾರಂಭವಾಗುವುದು ಈಗ ಸಿದ್ಧಾರ್ಥ ತಾಪ ಆಗಿ ಪರಿವರ್ತನೆ ಗೊಂಡ ಅರ್ಜುನ್ ತನ್ನ ಹೆಂಡತಿ ಅನಿತಾ ಯಾನೆ ಶರ್ಮಿಳಾ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವಾಗ ಕೇರಳದ ಊರೊಂದರಲ್ಲಿ ಇರುವ ಆಯುರ್ವೇದ ಅಸ್ಪತ್ತೆಗೆ ಚಿಕಿತ್ಸೆಗೆ ಬರುತ್ತಾರೆ. ಆಗ ಅರ್ಜುನ್ ನಿರೂಪಕನನ್ನು ಕಾಣಲು ಬರುತ್ತಾನೆ. ನಿರೂಪಕ ಮತ್ತು ಅರ್ಜುನ್ ಒಂದೇ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದವರು. ಅರ್ಜುನ ತಾನು ಬರೆದಿರುವ ಡೈರಿಯನ್ನು ನಿರೂಪಕನಿಗೆ ಕೊಡುತ್ತಾನೆ. ನಿರೂಪಕ ಕಾದಂಬರಿಕಾರನೂ ಆಗಿರುವುದರಿಂದ ಅದನ್ನು ಕುತೂಲದಿಂದ ಓದುತ್ತಾ ಅರ್ಜುನನ ಸಾಹಸದ ‌ಕಥೆಗಳು ಅನಾವರಣಗೊಳ್ಳುತ್ತಾ ಹೋಗುತ್ತವೆ.

ಅರ್ಜುನನ್ನು ರಕ್ಷಿಸಿದ ಸ್ವಾಮೀಜಿಯ ಆಶ್ರಮಕ್ಕೆ ಶರ್ಮಿಳಾಳನ್ನೂ ಅರ್ಜುನ ಕರೆತಂದಾಗ ಅವಳನ್ನು ಸ್ವಾಮೀಜಿ ಅತಿ ಕಾಳಜಿಯಿಂದ ಚಿಕಿತ್ಸೆ ಕೊಡಿಸುತ್ತಾರೆ. ಮತ್ತು ತಾವು ನಡೆಸುತ್ತಿದ್ದ ಮಾನಸಿಕ ವಿಕಲಾಂಗದ ಶಾಲೆಯ ಜವಾಬ್ದಾರಿಯನ್ನು ಶರ್ಮಿಳಾಳಿಗೆ ಕೊಡುತ್ತಾರೆ.ಅವಳಿಗೆ ಅಕ್ಷರವನ್ನು ಕಲಿಸಿದ ಸ್ವಾಮೀಜಿಯವರು ಅವಳಿಗೆ ಏನನ್ನಾದರೂ ಬರೆ ಎಂದು ಪ್ರೋತಗದಾಹಿಸುತ್ತಾರೆ.‌ಅವಳ ಬರವಣಿಗೆಯ ಮೂಲಕ ಆದಿವಾಸಿಗಳ ಸಮೃದ್ಧ ಬದುಕು ಎಲ್ಲ ಆಯಾಮಗಳೊಂದಿಗೆ ಅನಸವರಣಗೊಳ್ಳುತ್ತವೆ.ವಿಮಾನ ಸ್ಫೋಟದಲ್ಲಿ ಬಂದೂಕಿನ ಕಾರಖಾನೆಯನ್ನು ನಡೆಸುತ್ತಿದ್ದ ಸ್ವಾಮಿ ಸಾಯುತ್ತಾನೆ.
ಅಂತಿಮವಾಗಿ ಶರ್ಮಿಳಾ ಮೃತಪಡುತ್ತಾಳೆ. ಕಾದಂಬರಿಯ ಕೊನೆಯಲ್ಲಿ ಪೋಲಿಸ್ ಅಧಿಕಾರಿಯಾದ ಅರ್ಜುನನ ತಮ್ಮ ಮತ್ತು ಅರ್ಜುನಙ್ನು ಬಂಧಿಸಲು ಬಂದ ತಮ್ಮನೊಡನೆ ಭಾವನಾತ್ಮಕ ಸಂಭಾಷಣೆ ನಡೆಯುತ್ತದೆ. ಅವರು ಆಗ ಪರಸ್ಪರರನ್ನು ಆತ್ಮೀಯವಾಗಿ ಅರಿತು ಕೊಳ್ಳುತ್ತಾರೆ
ಪರಸ್ಪರ ತಬ್ಬಿಕೊಳ್ಳುತ್ತಾರೆ‌.

ಅರ್ಜುನ ತನ್ನ ಏಕಾಂಗಿ ಪಯಣವನ್ನು ಮುಂದುವರಿಸುತ್ತಾನೆ‌. ಅವನು ಈ ಪರಿಪಕ್ವನಾಗಿ ನಕ್ಸಲ್ ಕ್ರಾಂತಿಯಿಂದ ಭ್ರಮನಿರಸನಗೊಂಡಂತೆ ಅನಿಸುತ್ತದೆ‌
ಅವನ ಕಾದಂಬರಿಯಲ್ಲಿ ಬರುವ ಕೊನೆಯ ಮಾತುಗಳು ಹೀಗಿವೆ” ಹಿಂದೊಮ್ಮೆ ನಾನು ಮನೆ ಬಿಟ್ಟು ಹೊರಬಂದಿದ್ದು ಜಗತ್ತಿನಲ್ಲಾಗುವ ಅಕ್ರಮ, ಅನ್ಯಾಯ, ಘೋಷಣೆಗಳನ್ನು ಇಲ್ಲವಾಗಿಸುವ ಉದ್ದೇಶದಿಂದಾಗಿತ್ತು. ಅದಷ್ಟನ್ನೂ ಮಾಡಬೇಕಾದುದು ನಾನೇ ಎಂಬ ಮೂರ್ಖತನ ಅಂದು ನನ್ನನ್ನು ಕೊಂಡೊಯ್ದಿತು. ಈಗ ಪ್ರಕೃತಿಯ ಎಲ್ಲಾ ಆಟಗಳಿಗೂ ಬಲಿಯಾಗಿ ಸ್ವತಃ ನಿಲ್ಲಲು ಹೊರಟಾಗ ಇದು ಮೂರ್ಖತನದ್ದಲ್ಲ ಕರ್ತವ್ಯವೆಂದು ನನಗೆ ಸರಿಯಾಗಿ ಅರ್ಥವಾಗಿದೆ‌.”

ಕಾದಂಬರಿಕಾರ‌ ದೇಶದ ರಾಜಕೀಯ ಪಲ್ಲಟಗಳ ಚಿತ್ರಣಗಳನ್ನೂ ಷಡ್ಯಂತ್ರಗಳ ಚಿತ್ರಣಗಳನ್ನೂ ಆದಿವಾಸಿಗಳ ಮತ್ತು ನಕ್ಸಲರ ವಿರುದ್ಧ ‌ಕೈಕೊಳ್ಳುವ ಕ್ರಮಗಳಲ್ಲಿ ವ್ಯಕ್ತಗೊಳ್ಳುತ್ತವೆ. ರಾಜಕಾರಣಿಗಳು ಅಧಿಕಾರಿಗಳು ಎಂದಿಗೂ ಶ್ರೀಮಂತರ ಪರ‌ ಬಡವರಿಗೆ ನ್ಯಾಯವೆಂಬುದು ಮರೀಚಿಕೆಯೆ ಅಗಿಬಿಡುತ್ತದೆ.
ಈ ಕಾದಂಬರಿಯನ್ನು ಓದಲು ತಾಳ್ಮೆ‌ಬೇಕು. ನಸುನಡುವೆ ಬರುವ ಅನೇಕ ತಾತ್ವಿಕ ಒಳನೋಟಗಳ ಅಭಿವ್ಯಕ್ತಿಯಿಂದಾಗಿ ಕುವೆಂಪು ಭಾಷಾಭಾರತಿ ಪ್ರಾಧಿಕಾರ ಈ ಕಾದಂಬರಿಯನ್ನು ಪ್ರಕಟಿಸಿದೆ‌. ಓದಿರಿ

‍ಲೇಖಕರು Admin

21 July, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading